*ಗೋಣಿಕೊಪ್ಪ, ಜೂ. ೨೨: ಕುಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತುರ್ತು ಸಂದರ್ಭ ಬಳಕೆಗೆ ಹತ್ತು ಲೀಟರ್ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಗಳನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಅವರ ನೆರವಿನೊಂದಿಗೆ ನೀಡಿದರು.

ತಲಾ ಹತ್ತು ಲೀಟರ್ ಬಳಕೆಯ ಐದು ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಅಶ್ವತ್ ನಾರಾಯಣ್ ಅವರ ಕೊಡುಗೆಯಾಗಿ ವೀರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಎರಡು ಆರೋಗ್ಯ ಕೇಂದ್ರಗಳಿಗೆ ವಿತರಿಸಲಾಗಿದ್ದು, ಪಾಲಿಬೆಟ್ಟ ಆರೋಗ್ಯ ಕೇಂದ್ರಕ್ಕೆ ಮೂರು ಮತ್ತು ಕುಟ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎರಡು ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಬೇಡಿಕೆಯಂತೆ ನೀಡಲಾಗಿದೆ. ಕುಟ್ಟ ಸಮುದಾಯ ಆರೋಗ್ಯ ಕೇಂದ್ರವನ್ನ ಸುಸಜ್ಜಿತ ಆಸ್ಪತ್ರೆಯಾಗಿ ನಿರ್ಮಿಸುವ ವ್ಯವಸ್ಥೆಗೆ ಮುಂದಾಗೋಣ, ಆದರೆ ಯಾವುದೇ ಕಾರಣಕ್ಕೂ ಕೋವಿಡ್ ಕೇರ್ ಸೆಂಟರ್ ಆಗಿ ಆಸ್ಪತ್ರೆಯನ್ನು ಪರಿವರ್ತಿಸುವ ಸಂದರ್ಭ ಬಾರದಿರಲಿ ಎಂದರು.

ಅAತರ್‌ರಾಜ್ಯ ಸಂಚಾರವನ್ನು ನಿರ್ಬಂಧಿಸಿ, ಸಾರ್ವಜನಿಕ ಸಂಪರ್ಕ ದಿಂದ ದೂರ ಉಳಿದು ಕೋವಿಡ್ ಪ್ರಕರಣಗಳು ಹರಡದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಜನರು ಈ ವ್ಯವಸ್ಥೆಗೆ ಪೂರಕವಾಗಿ ಹೊಂದಿಕೊಳ್ಳಬೇಕು. ಹೀಗಾದಲ್ಲಿ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕುಂಠಿತಗೊಳ್ಳುತ್ತಿರುವ ಬಗ್ಗೆ ಆಶಾಭಾವನೆ ವ್ಯಕ್ತವಾಗಿತ್ತು. ಇದರಿಂದ ಜಿಲ್ಲೆ ಗ್ರೀನ್ ಝೋನ್‌ಗೆ ಬಂದು ಲಾಕ್‌ಡೌನ್ ತೆರವುಗೊಳ್ಳುವ ಭರವಸೆ ಇತ್ತು. ಆದರೆ ಎರಡು ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಅಧಿಕಾರಿ ಗಳು, ಮುಂಚೂಣಿ ಕಾರ್ಯಕರ್ತರು ಕೋವಿಡ್ ನಿಯಂತ್ರಣಕ್ಕೆ ಅಹೋರಾತ್ರಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಜನತೆ ಈ ವಿಚಾರವಾಗಿ ನಿರ್ಲಕ್ಷ÷್ಯ ಹೊಂದಿರುವುದರ ಪರಿಣಾಮವೇ ಮತ್ತೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಈ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಜನರು ಜಾಗೃತರಾಗಬೇಕೆಂದರು.

ಬಗರ್‌ಹುಕುA ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಕುಟ್ಟ ಆರೋಗ್ಯ ಕೇಂದ್ರ ಆಡಳಿತಾಧಿಕಾರಿ ಸತೀಶ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚೋಡುಮಾಡ ಶರಿನ್‌ಸುಬ್ಬಯ್ಯ, ಹಾತೂರು ಗ್ರಾ.ಪಂ ಅಧ್ಯಕ್ಷ ಕುಪ್ಪಂಡ ಗಿರೀಶ್‌ಪೂವಣ್ಣ, ಕುಟ್ಟ ಗ್ರಾ.ಪಂ. ಅಧ್ಯಕ್ಷ ತೀತಿರ ಗಣಪತಿ, ಉಪಾಧ್ಯಕ್ಷ ಪಿ.ಎಂ. ದಿವ್ಯಮನೋಜ್, ಸದಸ್ಯರಾದ ಜೆ.ಡಿ. ಮಣಿ, ಜನಾರ್ಧನ, ಮೀನ, ಕರ್ಪಯ್ಯ, ಹೇಮ, ತೀರ್ಥ, ಶಾಂತಿ, ಶಕ್ತಿ ಕೇಂದ್ರದ ಅಧ್ಯಕ್ಷ ತೀತಿರ ರಾಜ, ಕೆ. ಬಾಡಗ ಶಕ್ತಿ ಕೇಂದ್ರದ ಅಧ್ಯಕ್ಷ ಪೆಮ್ಮಣಮಾಡ ನವೀನ್, ಪಿ.ಡಿ.ಓ ಅನಿಲ್‌ಕುಮಾರ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು, ಪ್ರಮುಖರು ಹಾಜರಿದ್ದರು.