ಕಣಿವೆ, ಜೂ. ೨೧: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮನಕೊಲ್ಲಿ ಗ್ರಾಮದ ರಾಜ್ಯ ಹೆದ್ದಾರಿಗೆ ಹೊಂದಿಕೊAಡಿರುವ ಚೌಡೇಶ್ವರಿ ಬಡಾವಣೆಯಲ್ಲಿನ ನಿವಾಸಿಗಳು ಕಳೆದ ೨೦ ವರ್ಷ ಗಳಿಂದಲೂ ನಿತ್ಯದ ಬವಣೆಯಲ್ಲಿ ದಿನಗಳೆಯುತ್ತಿದ್ದಾರೆ.

ಆದರೂ ಸಂಬAಧಿಸಿದÀ ಗ್ರಾಮ ಪಂಚಾಯಿತಿಯಾಗಲೀ ಇತರೇ ಜನಪ್ರತಿನಿಧಿಗಳಾಗಲೀ ಈ ಜನರ ಬವಣೆಗಳನ್ನು ಕೇಳುವ ಪ್ರಯತ್ನವನ್ನೇ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮುಳ್ಳುಸೋಗೆ ಹಾಗೂ ಕೂಡು ಮಂಗಳೂರು ಎರಡೂ ಗ್ರಾಮ ಪಂಚಾಯಿತಿಗಳ ಗಡಿಯಲ್ಲಿರುವ ಈ ಬಡಾವಣೆ ನಿವಾಸಿಗಳ ಯಾತನೆ ಯಾವ ಪಂಚಾಯಿತಿಗೂ ಕಾಣಿಸು ತ್ತಿಲ್ಲ. ಪಾದಚಾರಿಗಳು ಸಂಚರಿಸಲು ಸಾಧ್ಯವಾಗದ ಈ ಬಡಾವಣೆಯ ರಸ್ತೆ; ನಿವಾಸಿಗಳು ತಮ್ಮ ಬಳಕೆಯ ಕಾರು ಗಳು ಹಾಗೂ ದ್ವಿಚಕ್ರವಾಹನಗಳನ್ನು ಮನೆಯಿಂದ ಹೊರ ಇಳಿಸದಷ್ಟು ಕೆಸರುಮಯವಾಗಿದೆ.

ಇನ್ನು ಮನೆಗಳ ಬಳಕೆಯ ಅನುಪಯುಕ್ತ ನೀರು ಹರಿಯಲು ಸೂಕ್ತ ಚರಂಡಿ ಸೌಲಭ್ಯ ಕೂಡ ಇಲ್ಲದ ಇಲ್ಲಿ ಮಳೆ ಸುರಿದಾಗ ಹೊಳೆ ಯಂತೆ ಮೇಲ್ಭಾಗದಿಂದ ಹರಿದು ಬರುವ ನೀರು ಮನೆ ಬಾಗಿಲಲ್ಲಿ ನುಗ್ಗಿ ಹರಿಯುತ್ತದೆ. ನಾವೇನು ಮನುಷ್ಯರಲ್ಲವಾ ? ಜನಪ್ರತಿನಿಧಿಗಳಿಗೆ ನಮ್ಮ ಸಮಸ್ಯೆಗಳು ಏಕೆ ಕಾಣಿಸುತ್ತಿಲ್ಲ ಎಂದು ನಿವೃತ್ತ ಯೋಧ ನಡುವಟ್ಟಿರ ನರೇಶ್, ಬೋಪಯ್ಯ, ಜಯಂತಿ, ಪೂಣಚ್ಚ ಮೊದಲಾದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರಿಯಾದ ಮೂಲ ಸೌಲಭ್ಯ ಗಳು ಇಲ್ಲದೇ ಇರುವಾಗ ನಿವೇಶನ ಗಳನ್ನು ಪರಿವರ್ತಿಸಿ ಮಾರಾಟಕ್ಕೆ ಪರವಾನಗಿ ನೀಡಿದ ಪಂಚಾಯಿತಿ ಇಲ್ಲಿ ವಾಸ ಮಾಡಲು ಮನೆ ಕಟ್ಟಿದ ವರಿಗೆ ಪರವಾನಗಿ ನೀಡಿ ತೆರಿಗೆ ಕಟ್ಟಿಸಿಕೊಂಡ ಪಂಚಾಯಿತಿ ಈಗೇಕೆ ಮೂಲ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಪ್ರಶ್ನಿಸಿರುವ ಈ ನಿವಾಸಿಗಳು ಪಂಚಾಯಿತಿ ಅಧಿಕಾರಿಗಳು ಮೂಲ ಸೌಲಭ್ಯ ಒದಗಿಸದೇ ಇದ್ದಲ್ಲಿ ಜಿಲ್ಲಾಧಿಕಾರಿಗಳ ಬಳಿ ತೆರಳುವುದಾಗಿ ಎಚ್ಚರಿಸಿದ್ದಾರೆ.

ಇದೇ ಬಡಾವಣೆಯಲ್ಲಿ ಖಾಲಿ ನಿವೇಶನಗಳಲ್ಲಿ ಪಾರ್ಥೇನಿಯಂ ಗಿಡಗಳು ಆಳೆತ್ತರಕ್ಕೆ ಬೆಳೆದು ಅಡವಿಯ ರೂಪು ತಳೆದಿವೆ. ಇದರಿಂದ ಸೊಳ್ಳೆ, ನೊಣ, ಇಲಿ ಹೆಗ್ಗಣಗಳ ಸಂತತಿಯ ಕೇಂದ್ರ ವಾಗಿದೆ. ಕೂಡಲೇ ಪಂಚಾಯಿತಿ ಯವರು ಆ ನಿವೇಶನಗಳ ಪಾರ್ಥೇನಿಯಂ ತೆರವುಗೊಳಿಸಲು ನಿವೇಶನ ಮಾಲೀಕರಿಗೆ ಸೂಚಿಸ ಬೇಕು.

ಚರಂಡಿ, ರಸ್ತೆ ಇಲ್ಲದೇ ಮನೆಗಳ ಮುಂದೆಯೇ ಹರಿಯುತ್ತಿರುವ ತ್ಯಾಜ್ಯ ನೀರು ನಿಂತು ಮಾಲಿನ್ಯ ಉಂಟಾಗು ತ್ತಿರುವ ಇಲ್ಲಿ ಸ್ವಚ್ಛತೆಯನ್ನು ಮಾಡಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.