ರಾಜ್ಯದಲ್ಲಿ ಕೊರೊನಾ ಇಳಿಮುಖ

ಬೆಂಗಳೂರು, ಜೂ. ೨೧: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಇಳಿಮುಖದತ್ತ ಸಾಗಿದೆ. ಇಂದು ೪,೮೬೭ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ ೨೮,೧೧,೩೨೦ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೧೪೨ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೪,೦೨೫ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇಂದು ೧,೦೩೪ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೦೬,೨೯೩ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿಗೆ ೨೮ ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ ೮,೪೦೪ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೬,೫೪,೧೩೯ಕ್ಕೆ ಏರಿಕೆಯಾಗಿದೆ. ಇನ್ನು ೧,೨೩,೧೩೪ ಸಕ್ರೀಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೪೯,೭೩೧ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೪,೮೬೭ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೩.೨೫ಕ್ಕೆ ಇಳಿದಿದೆ.

ಒಲಿಂಪಿಕ್ ವೀಕ್ಷಿಸಲು ೧೦ ಸಾವಿರ ಜನರಿಗೆ ಅವಕಾಶ

ಟೋಕಿಯೋ, ಜೂ. ೨೧ : ಜಪಾನ್‌ನ ಟೋಕಿಯೊದಲ್ಲಿ ಜುಲೈ ೨೩ರಿಂದ ಪ್ರಾರಂಭವಾಗುವ ೨೦೨೦ ರ ಒಲಿಂಪಿಕ್ ಕ್ರೀಡಾಕೂಟದ ಪ್ರತಿ ಮೈದಾನದಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ೧೦,೦೦೦ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಕ್ರೀಡಾಕೂಟದ ಸಂಘಟಕರು ಸೋಮವಾರ ಪ್ರಕಟಿಸಿದ್ದಾರೆ. ಐಒಸಿ (ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ), ಐಪಿಸಿ(ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ), ಟೋಕಿಯೊ ಒಲಿಂಪಿಕ್ ೨೦೨೦ ಸಂಘಟನಾ ಸಮಿತಿ, ಟೋಕಿಯೊ ಮಹಾನಗರ ಸರ್ಕಾರ ಮತ್ತು ಜಪಾನ್ ಸರ್ಕಾರದ ನಡುವಿನ ಸಭೆಯ ನಂತರ ಈ ಘೋಷಣೆ ಮಾಡಲಾಗಿದೆ. ಸಂಘಟಕರು ಹೇಳಿಕೆಯಲ್ಲಿ, 'ಒಲಿಂಪಿಕ್ ಕ್ರೀಡಾಕೂಟಕ್ಕೆ ಪ್ರೇಕ್ಷಕರ ಸಂಖ್ಯೆಯನ್ನು ಮೈದಾನದ ಸಾಮರ್ಥ್ಯದ ಶೇಕಡಾ ೫೦ಕ್ಕೆ ನಿಗದಿಪಡಿಸಲಾಗುತ್ತದೆ. ಆದರೆ ಗರಿಷ್ಠ ೧೦ ಸಾವಿರ ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದಿದ್ದಾರೆ. ಹಲವಾರು ತಿಂಗಳುಗಳ ಹಿಂದೆಯೇ ವಿದೇಶದಿಂದ ಬರುವ ಪ್ರೇಕ್ಷಕರಿಗೆ ಅವಕಾಶ ಇಲ್ಲ ಎಂದು ಜಪಾನ್‌ಗೆ ಹೇಳಿತ್ತು. ಮೈದಾನದಲ್ಲಿ ಎಲ್ಲಾ ಸಮಯದಲ್ಲೂ ಮುಖಗವಸು ಧರಿಸಬೇಕು ಎಂದು ಸಂಘಟಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜೋರಾಗಿ ಮಾತನಾಡುವುದು ಅಥವಾ ಕೂಗುವುದನ್ನು ನಿಷೇಧಿಸಲಾಗುವುದು. ಸರಿಯಾದ ಪ್ರಕಟಣೆಗಳ ಮೂಲಕ ಜನದಟ್ಟಣೆ ತಪ್ಪಿಸಬೇಕು ಮತ್ತು ಸಂದರ್ಶಕರು ಸ್ಥಳಗಳನ್ನು ಸರಿಯಾಗಿ ಬಿಡಬೇಕು. ಸಂಘಟಕರ ಪ್ರಕಾರ, ಪ್ರವಾಸಿಗರು ನೇರವಾಗಿ ಸ್ಥಳಗಳನ್ನು ತಲುಪಲು ಮತ್ತು ನೇರವಾಗಿ ಮನೆಗೆ ಮರಳಲು ಮತ್ತು ಪ್ರಾಂತ್ಯಗಳ ನಡುವೆ ಪ್ರಯಾಣಿಸುವಾಗ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಕೋರಲಾಗುವುದು ಎಂದು ತಿಳಿಸಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ರಾಜಧಾನಿಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರೆ ಪ್ರೇಕ್ಷಕರು ಇಲ್ಲದೆ ಕ್ರೀಡಾಕೂಟವನ್ನು ನಡೆಸುವುದನ್ನು ತಳ್ಳಿಹಾಕುವುದಿಲ್ಲ ಎಂದು ಸೋಮವಾರ ಬೆಳಿಗ್ಗೆ ಜಪಾನಿನ ಪ್ರಧಾನಿ ಯೋಶಿಹೈಡ್ ಸುಗಾ ಹೇಳಿಕೆಯಲ್ಲಿ ತಿಳಿಸಿರುವುದು ಗಮನಾರ್ಹ. ಈ ಬಾರಿಯ ಓಲಿಂಪಿಕ್ಸ್ ಕ್ರೀಡಾಕೂಟವೂ ಜುಲೈ ೨೩ ರಿಂದ ಆಗಸ್ಟ್ ೮ರ ವರೆಗೆ ನಡೆಯಲಿದೆ.

ಸಿಂಧಿಯಾಗೆ ಭದ್ರತಾ ಲೋಪ: ೧೪ ಪೊಲೀಸರ ಅಮಾನತು

ಭೂಪಾಲ್, ಜೂ. ೨೧: ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಾಧಿತ್ಯ ಸಿಂಧಿಯಾ ಭೇಟಿ ಸಂದರ್ಭದಲ್ಲಿ ಭದ್ರತಾ ಲೋಪವೆಸಗಿದ್ದಕ್ಕಾಗಿ ಎರಡು ಜಿಲ್ಲೆಗಳ ೧೪ ಪೊಲೀಸ್ ಸಿಬ್ಬಂದಿಯನ್ನು ಸೋಮವಾರ ಆಡಳಿತ ಅಮಾನತು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾನುವಾರ ರಾತ್ರಿ ಸಿಂಧಿಯಾ ದೆಹಲಿಯಿಂದ ಬಂದ ನಂತರ ಗ್ವಾಲಿಯರ್ ಗೆ ಹೋಗುತ್ತಿರುವಾಗ ಭದ್ರತಾ ಲೋಪವಾಗಿದೆ. ಸಿಂಧಿಯಾ ಭದ್ರತಾ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ಗ್ವಾಲಿಯರ್ ಜಿಲ್ಲೆಯ ಐದು ಮತ್ತು ಮೊರೆನಾ ಜಿಲ್ಲೆಯ ೯ ಮಂದಿ ಸೇರಿದಂತೆ ಒಟ್ಟು ೧೪ ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಗ್ವಾಲಿಯರ್ ಪೊಲೀಸ್ ಮಹಾನಿರ್ದೇಶಕ ಅಮತ್ ಸಾಂಘಿ ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಮಾಜಿ ಕೇಂದ್ರ ಸಚಿವರನ್ನು ಮಧ್ಯಪ್ರದೇಶ-ರಾಜಸ್ಥಾನ ಗಡಿಯಲ್ಲಿ ಮೊರೆನಾ ಪೊಲೀಸರು ಬೆಂಗಾವಲು ಮಾಡಬೇಕಾಗಿತ್ತು ಮತ್ತು ನಂತರ ಈ ಕಾರ್ಯವನ್ನು ಗ್ವಾಲಿಯರ್ ನ ಪೊಲೀಸರು ಮಾಡಬೇಕಾಗಿತ್ತು. ಆದರೆ, ಸಿಂಧಿಯಾ ಅವರಿಗೆ ಕಾರಿಗೆ ಹೋಲುತ್ತಿದ್ದ ಮತ್ತೊಂದು ಕಾರಿಗೆ ಗ್ವಾಲಿಯರ್ ಪೊಲೀಸರು ಬೆಂಗಾವಲು ಮಾಡಿದ್ದಾರೆ ಎಂದು ಎಸ್ ಪಿ ಹೇಳಿದ್ದಾರೆ. ಮೊರೋನಾ ಪೊಲೀಸರು ಗ್ವಾಲಿಯರ್ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳದಿದ್ದರಿAದ ಸಿಂಧಿಯಾ ಎಸ್ಕಾರ್ಟ್ ಇಲ್ಲದೆ ಗ್ವಾಲಿಯರ್ ಗೆ ಆಗಮಿಸಿದರು. ಈ ಲೋಪಕ್ಕಾಗಿ ಎರಡು ಜಿಲ್ಲೆಗಳಿಗೆ ಸೇರಿದ ೧೪ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಂಘಿ ತಿಳಿಸಿದ್ದಾರೆ.

ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿ ಮೂರನೇ ಅಲೆ ಗರಿಷ್ಠ ಮಟ್ಟಕ್ಕೆ

ನವದೆಹಲಿ, ಜೂ. ೨೧: ಈ ವರ್ಷದ ಸೆಪ್ಟೆಂಬರ್- ಅಕ್ಟೋಬರ್ ಅವಧಿಯಲ್ಲಿ ಕೋವಿಡ್-ಮೂರನೇ ಅಲೆ ಉತ್ತುಂಗಕ್ಕೇರುವ ಸಾಧ್ಯತೆಯಿದೆ ಎಂದು ಕಾನ್ಪುರ ಐಐಟಿಯ ಪ್ರೊಫೆಸರ್ ರಾಜೇಶ್ ರಂಜನ್, ಮಹೇಂದ್ರ ವರ್ಮಾ ಮತ್ತಿತರನ್ನೊಳಗೊಂಡ ತಂಡ ನಡೆಸಿರುವ ಅಧ್ಯಯನದಲ್ಲಿ ತಿಳಿದುಬಂದಿದೆ. ಮೂರನೇ ಅಲೆ ಬಗ್ಗೆ ಆಡಳಿತಗಾರರು ಹಾಗೂ ಸಾರ್ವಜನಿಕರಲ್ಲಿ ಗಮನಾರ್ಹ ರೀತಿಯ ಆತಂಕವಿದೆ. ಇದಕ್ಕಾಗಿ, ಎಸ್‌ಐಆರ್ ಮಾದರಿ ಬಳಸಿಕೊಂಡು, ಎರಡನೇ ತರಂಗದ ಸಾಂಕ್ರಾಮಿಕ ನಿಯತಾಂಕಗಳನ್ನು ಬಳಸಿಕೊಂಡು ಸಂಭವನೀಯ ಮೂರನೇ ತರಂಗದ ಕೆಳಗಿನ ಮೂರು ಸನ್ನಿವೇಶಗಳನ್ನು ನಿರ್ಮಿಸಿದ್ದಾರೆ. ಜುಲೈ ೧೫ ರ ಹೊತ್ತಿಗೆ ದೇಶದಲ್ಲಿ ಸಂಪೂರ್ಣ ಅನ್ ಲಾಕ್ ಅಂತಾ ಭಾವಿಸಿದರೆ ಸನ್ನಿವೇಶ ೧ ( ಸಂಪೂರ್ಣ ಸಹಜ ಪರಿಸ್ಥಿತಿ) ಮೂರನೇ ಅಲೆ ಅಕ್ಟೋಬರ್ ನಲ್ಲಿ ಗರಿಷ್ಠ ಹಂತ ತಲುಪಲಿದೆ. ಆದರೆ, ಎರಡನೇ ಅಲೆಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿರುತ್ತದೆ. ಸನ್ನಿವೇಶ ೨ ( ವೈರಸ್ ರೂಪಾಂತರಗಳೊAದಿಗೆ ಸಾಮಾನ್ಯ ಪರಿಸ್ಥಿತಿ) ಎರಡನೆಯದಕ್ಕಿಂತ ಹೆಚ್ಚಿರಬಹುದು ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಕಾಣಿಸಿಕೊಳ್ಳಬಹುದು. ಸನ್ನಿವೇಶ ೩( ಕಠಿಣ ಮಧ್ಯಸ್ಥಿಕೆಗಳು) ಕಠಿಣ ಸಾಮಾಜಿಕ ಅಂತರ ಪಾಲನೆಯೊಂದಿಗೆ ಅಕ್ಟೋಬರ್ ಅಂತ್ಯದವರೆಗೂ ಮೂರನೇ ಅಲೆ ಉತ್ತುಂಗ ವಿಳಂಬವಾಗುವ ಸಾಧ್ಯತೆಯಿದೆ. ಮೂರನೇ ಅಲೆ ಉತ್ತುಂಗತ್ತೆ ಎರಡನೇ ಅಲೆಗಿಂತ ಕಡಿಮೆಯಾಗಿರುತ್ತದೆ ಎಂದು ಹೇಳಲಾಗಿದೆ.

೫ಜಿ ನೆಟ್‌ವರ್ಕ್ ಅಭಿವೃದ್ಧಿಗಾಗಿ ಒಂದಾದ ಏರ್‌ಟೆಲ್, ಟಾಟಾ!

ನವದೆಹಲಿ, ಜೂ. ೨೧: ದೇಶೀಯ ೫ಜಿ ನೆಟ್‌ವರ್ಕ್ ಸಲ್ಯೂಷನ್ ಅನುಷ್ಠಾನಗೊಳಿಸುವ ಕಾರ್ಯತಂತ್ರದ ಸಹಭಾಗಿತ್ವವನ್ನು ಭಾರತಿ ಏರ್‌ಟೆಲ್ ಮತ್ತು ಟಾಟಾ ಗ್ರೂಪ್ ಪ್ರಕಟಿಸಿದೆ. ಟಾಟಾ ಗ್ರೂಪ್ ಒ-ರಾನ್(ಓಪನ್ ರೇಡಿಯೋ ಆಕ್ಸೆಸ್ ನೆಟ್ವರ್ಕ್) ಆಧಾರಿತ ರೇಡಿಯೋ ಮತ್ತು ಎನ್‌ಎಸ್‌ಎ (ನಾನ್ ಸ್ಟಾಂಡಲೋನ್/ಸ್ಟಾAಡಲೋನ್) ಕೋರ್ ಅನ್ನು ಅಭಿವೃದ್ಧಿಪಡಿಸಿದೆ. ಸಂಪೂರ್ಣವಾಗಿ ಸ್ಥಳೀಯ ಟೆಲಿಕಾಂ ಸ್ಟ್ಯಾಕ್ ಅನ್ನು ಸಂಯೋಜಿಸಿದೆ. ಗುಂಪು ಸಾಮರ್ಥ್ಯ ಮತ್ತು ಅದರ ಪಾಲುದಾರರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಜಂಟಿ ಹೇಳಿಕೆ ನೀಡಿವೆ. ೨೦೨೨ರ ಜನವರಿ ಯಿಂದ ವಾಣಿಜ್ಯ ಅಭಿವೃದ್ಧಿಗೆ ಇದು ಲಭ್ಯವಿರುತ್ತದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ತನ್ನ ಜಾಗತಿಕ ವ್ಯವಸ್ಥೆಯ ಏಕೀಕರಣದ ಪರಿಣತಿಯನ್ನು ತರುತ್ತದೆ. ೩ ಜಿಪಿಪಿ ಮತ್ತು ಒ-ರಾನ್ ಮಾನದಂಡಗಳಿಗೆ ಅಂತ್ಯದಿAದ ಕೊನೆಯ ಪರಿಹಾರವನ್ನು ಜೋಡಿಸಲು ಸಹಾಯ ಮಾಡುತ್ತದೆ. ಏಕೆಂದರೆ ನೆಟ್‌ವರ್ಕ್ ಮತ್ತು ಉಪಕರಣಗಳು ಹೆಚ್ಚಾಗಿ ಸಾಫ್ಟ್ವೇರ್‌ನಲ್ಲಿ ಹುದುಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ಏರ್ಟೆಲ್ ಭಾರತದಲ್ಲಿ ತನ್ನ ೫ ಜಿ ರೋಲ್ ಔಟ್ ಯೋಜನೆಗಳ ಭಾಗವಾಗಿ ಸ್ಥಳೀಯ ಚಾಲನೆ ನೀಡಲಿದೆ. ಸರ್ಕಾರವು ರೂಪಿಸಿದ ಮಾನದಂಡಗಳ ಪ್ರಕಾರ ೨೦೨೨ರ ಜನವರಿಯಲ್ಲಿ ಪ್ರಾರಂಭಿಸುತ್ತದೆ. ದೇಶೀಯ ೫ಜಿ ಉತ್ಪನ್ನ ಮತ್ತು ಸಲ್ಯೂಷನ್ ಜಾಗತಿಕ ಮಾನದಂಡಗಳಿಗೆ ಜೋಡಿಸಲಾಗಿದೆ. ಸ್ಟ್ಯಾಂಡರ್ಡ್ ಓಪನ್ ಇಂಟರ್ಫೇಸ್ ಮತ್ತು ಒ-ರಾನ್ ಅಲೈಯನ್ಸ್ ವ್ಯಾಖ್ಯಾನಿಸಿರುವ ಇತರ ಉತ್ಪನ್ನಗಳೊಂದಿಗೆ ಪರಸ್ಪರ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.