ಮಡಿಕೇರಿ ಜೂ. ೨೧ : ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದಿಂದ ವತಿಯಿಂದ ಕೊಡಗಿನ ಲೇಖಕ ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆಯ ಅನಾವರಣಗೊಳಿಸಲು ಅವಕಾಶ ಕಲ್ಪಿಸುವ ಸಲುವಾಗಿ ಗೂಗಲ್ ಮೀಟ್ ಮೂಲಕ ಒಂದು ವಾರ ಕಾಲ ಏರ್ಪಡಿಸಿರುವ ಕೊರೊನಾ ಮರೆಯಲು ಭಾವಗೀತಾ ಸಪ್ತಾಹ ಭಾವಗೀತೆ ಗಾಯನ ಕಾರ್ಯಕ್ರಮ ಸಂಪನ್ನಗೊAಡಿತು.

ಸಮಾರೋಪ ಸಮಾರಂಭದಲ್ಲಿ ಭಾವಗೀತೆ ಹಾಡುವ ಮೂಲಕ ಸಮಾರೋಪಕ್ಕೆ ಚಾಲನೆ ನೀಡಿದ ನಾಡಿನ ಖ್ಯಾತ ಸುಗಮ ಸಂಗೀತ ಗಾಯಕ ಶಂಕರ್ ಶಾನುಭೋಗ್ ಮಾತನಾಡಿ, ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೊಡಗು ಲೇಖಕರ ಮತ್ತು ಕಲಾವಿದರ ಬಳಗವು ಜಿಲ್ಲೆಯ ಗಾಯಕರಿಗೆ ವೈವಿಧ್ಯಮಯ ಸಾಹಿತ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಗಾಯಕರಿಗೆ ಸೂಕ್ತ ಅವಕಾಶವನ್ನು ಒದಗಿಸುತ್ತಿ ರುವುದು ಉತ್ತಮ ಬೆಳವಣಿಗೆ ಎಂದರು.

ಉತ್ತಮ ಸಂವಹನ ಮಾಧ್ಯಮ ವಾದ ಸಾಹಿತ್ಯ ಮತ್ತು ಸಂಗೀತದಿAದ ಸಕಾರಾತ್ಮಕ ಚಿಂತನೆಗಳ ಮೂಲಕ ಸಮಾಜದಲ್ಲಿ ಪರಿವರ್ತನೆ ಕಂಡುಕೊಳ್ಳಲು ಸಾಧ್ಯ. ಡಿ.ವಿ.ಗುಂಡಪ್ಪ ಅವರ ಕಗ್ಗದ ಅರ್ಥ ವಿವರಣೆ ಹಾಗೂ ಮತ್ತಿತರ ಕವಿ - ಕಾವ್ಯಗಳು ಜನರನ್ನು ತಲುಪಿ ಸಮಾಜದ ಪರಿವರ್ತಿಸುವ ಶಕ್ತಿ ಹೊಂದಿವೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕೊರೊನಾ ಸಂಕಷ್ಟದ ಇಂತಹ ಸನ್ನಿವೇಶದಲ್ಲಿ ಲೇಖಕರ ಬಳಗವು ಕಲಾವಿದರಿಗೆ ಉತ್ತಮ ವೇದಿಕೆ ಒದಗಿಸುವ ಮೂಲಕ ಜನರ ಸಕಾರಾತ್ಮಕ ಭಾವನೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಹಮ್ಮಿಕೊಳ್ಳುತ್ತಿರುವ ವಿವಿಧ ಗಾಯನ ಕಾರ್ಯಕ್ರಮಗಳು ಯಶಸ್ಸು ಕಂಡಿರುವುದರಿAದ ಮುಂದಿನ ದಿನಗಳಲ್ಲಿ ಕೂಡ ಬಳಗದ ವತಿಯಿಂದ ಗಾಯಕರಿಗೆ ಉತ್ತಮ ತರಬೇತಿ ನೀಡುವುದು ಸೂಕ್ತ ಎಂದು ಸಲಹೆ ನೀಡಿದರು.

ಲೇಖಕರ ಬಳಗದ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾವಗೀತೆ ಗಾಯನ ಕಾರ್ಯಕ್ರಮದಲ್ಲಿ ೧೩೦ ಮಂದಿ ಗಾಯಕರು ಭಾಗವಹಿಸುವ ಮೂಲಕ ಸಂಗೀತ ಸುಧೆ ನಡೆಸಿಕೊಟ್ಟಿದ್ದಾರೆ, ಬಳಗದ ವತಿಯಿಂದ ಸಾಹಿತ್ಯ ಮತ್ತು ಕಲೆಗೆ ಪೂರಕವಾಗಿ ಕವಿ- ಕಾವ್ಯ ಪರಿಚಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಘಟಿಸ ಲಾಗುವುದು ಎಂದರು.

ಗಾಯಕರಾದ ಶಂಕರ್ ಅವರ ಪರಿಚಯ ಮಾಡಿದ ಜಿಲ್ಲೆಯ ಹಿರಿಯ ಗಾಯಕರೂ ಆದ ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಅವರು, ಸಂಗೀತ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಸೇವೆ ಬಗ್ಗೆ ತಿಳಿಸಿದರು.

ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಬಳಗದ ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್, ಪಿ.ರೇವತಿ ರಮೇಶ್, ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ, ನಿರ್ದೇಶಕರಾದ ಬಿ.ಎ.ಶಂಶುದ್ದೀನ್, ಎಸ್.ಐ. ಮುನೀರ್ ಅಹ್ಮದ್, ಬಿ.ಎನ್. ಮನುಶೆಣೈ, ಲಿಯಾಖತ್ ಆಲಿ, ಲೋಕನಾಥ್ ಅಮೆಚೂರ್, ಕೆ.ಟಿ.ಬೇಬಿ ಮ್ಯಾಥ್ಯೂ, ಟಿ.ಜಿ.ಪ್ರೇಮಕುಮಾರ್, ಉಮೇಶ್ ಭಟ್, ಕೆ.ಎ.ಶ್ವೇತ, ಬಿ.ಆರ್.ಜೋಯಪ್ಪ ಇತರರು ಇದ್ದರು.

ವಿಲ್ಫೆçಡ್ ಕ್ರಾಸ್ತಾ ಸ್ವಾಗತಿಸಿ, ಪುದಿನೆರವನ ರೇವತಿ ರಮೇಶ್ ವಂದಿಸಿದರು. ಎಸ್.ಐ.ಮುನೀರ್ ಅಹ್ಮದ್ ಕಾರ್ಯಕ್ರಮ ನಿರ್ವಹಿಸಿದರು.