ಸೋಮವಾರಪೇಟೆ, ಜೂ. ೨೧: ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಸರ್ಕಾರದ ವತಿಯಿಂದಲೇ ಉಚಿತ ಲಸಿಕೆ ನೀಡಲಾಗುತ್ತಿದ್ದು, ಎಲ್ಲರೂ ಇದರ ಪ್ರಯೋಜನ ಪಡೆಯಬೇಕು. ಲಸಿಕೆಯ ಬಗ್ಗೆ ಯಾರೂ ಸಹ ಅಸಡ್ಡೆ ತೋರಬಾರದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ಇಲ್ಲಿಗೆ ಸಮೀಪದ ಅಬ್ಬೂರುಕಟ್ಟೆಯಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿರುವ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು, ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಿದ್ದು, ೧೮ ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬೇಕು ಎಂದು ಕರೆ ನೀಡಿದರು.
ಕೊರೊನಾ ವ್ಯಾಕ್ಸಿನ್ ಬಗ್ಗೆ ಕೆಲವರು ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿರುವುದು ಸರಿಯಲ್ಲ. ವ್ಯಾಕ್ಸಿನ್ ಪಡೆದ ಯಾರೂ ಸಹ ಕೊರೊನಾದಿಂದ ಸಾವನ್ನಪ್ಪಿಲ್ಲ. ಲಸಿಕೆ ಪಡೆದರೆ ಜ್ವರ ಬರುತ್ತದೆ ಎಂಬ ಕಾರಣದಿಂದ ಹಲವಷ್ಟು ಮಂದಿ ಲಸಿಕೆ ಪಡೆದಿಲ್ಲ. ಸಾಧಾರಣ ಜ್ವರ ಬಂದರೂ ಒಂದು ದಿನದಲ್ಲೇ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಿದ್ದು, ೧೮ ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬೇಕು ಎಂದು ಕರೆ ನೀಡಿದರು.
ಕೊರೊನಾ ವ್ಯಾಕ್ಸಿನ್ ಬಗ್ಗೆ ಕೆಲವರು ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿರುವುದು ಸರಿಯಲ್ಲ. ವ್ಯಾಕ್ಸಿನ್ ಪಡೆದ ಯಾರೂ ಸಹ ಕೊರೊನಾದಿಂದ ಸಾವನ್ನಪ್ಪಿಲ್ಲ. ಲಸಿಕೆ ಪಡೆದರೆ ಜ್ವರ ಬರುತ್ತದೆ ಎಂಬ ಕಾರಣದಿಂದ ಹಲವಷ್ಟು ಮಂದಿ ಲಸಿಕೆ ಪಡೆದಿಲ್ಲ. ಸಾಧಾರಣ ಜ್ವರ ಬಂದರೂ ಒಂದು ದಿನದಲ್ಲೇ ನಿಯಮ ಮೀರಿದರೆ ದಂಡಪ್ರಯೋಗ: ಬೆಸೂರಿನಲ್ಲಿ ಆಯೋಜಿಸಿದ್ದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಮಾತನಾಡಿ, ಕೊರೊನಾ ಸಂಬAಧಿತ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ನಿಯಮ ಮೀರಿದರೆ ದಂಡ ವಿಧಿಸುವುದರೊಂದಿಗೆ ಪೊಲೀಸರು ದಂಡ ಪ್ರಯೋಗ ಮಾಡಲಿದ್ದಾರೆ ಎಂದು ಎಚ್ಚರಿಸಿದರು.
ಪೊಲೀಸರನ್ನು ಕಂಡಾಗ ಮಾತ್ರ ಮಾಸ್ಕ್ ಧರಿಸುವ ಬದಲು, ನಿಮ್ಮ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸಿ. ಗಡಿ ಭಾಗದಲ್ಲಿ ಹೊರಗಿನವರು ಪೊಲೀಸರ ಕಣ್ತಪ್ಪಿಸಿ ಒಳದಾರಿಗಳಲ್ಲಿ ಜಿಲ್ಲೆಗೆ ಬರುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರೇ ಕಡಿವಾಣ ಹಾಕಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತಪ್ಪಿದಲ್ಲಿ ಯಾವುದೇ ಒತ್ತಡಕ್ಕೂ ಒಳಗಾಗದೇ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.