ಮಡಿಕೇರಿ, ಜೂ. ೨೧: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ (ಎಸ್‌ಡಿಪಿಐ) ಪಕ್ಷದ ಸಂಸ್ಥಾಪನಾ ದಿನವನ್ನು ಕೋವಿಡ್ ಶಿಷ್ಟಾಚಾರವನ್ನು ಪಾಲಿಸಿಕೊಂಡು ಪಕ್ಷದ ನಗರ ಸಮಿತಿ ವತಿಯಿಂದ ಇಂದು ಮಡಿಕೇರಿಯಲ್ಲಿ ಆಚರಿಸಲಾಯಿತು.

ಪಕ್ಷದ ಸಂಸ್ಥಾಪನಾ ದಿನವನ್ನು ಸಾಮಾಜಿಕ ಸೇವೆ, ಶ್ರಮದಾನ ಹಾಗೂ ರಕ್ತದಾನ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.

ಮಡಿಕೇರಿಯ ಜಿಲ್ಲಾ ಕಚೇರಿಯ ಎದುರು ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಮನ್ಸೂರ್ ಅಲಿ ಪಕ್ಷದ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ನಂತರ ಜಿಲ್ಲಾ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಪ್ರಸ್ತುತ ರಾಜಕೀಯ ಮತ್ತು ದೇಶದ ಆಗುಹೋಗುಗಳ ಬಗ್ಗೆ ಮಾತನಾಡಿದರು.

ಬಳಿಕ ಮಡಿಕೇರಿ ನಗರಸಮಿತಿಯ ತೀರ್ಮಾನದ ಮೇರೆಗೆ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ನಡೆಸಲಾಯಿತು.

ಈ ಸಂದರ್ಭ ಎಸ್‌ಡಿಪಿಐ ಮಡಿಕೇರಿ ನಗರ ಸಮಿತಿ ಅಧ್ಯಕ್ಷ ಖಲೀಲ್, ಉಪಾದ್ಯಕ್ಷÀ ಮೈಕಲ್ ವೇಗಸ್, ಎಸ್‌ಡಿಪಿಐ ನಗರಸಭೆ ಸದಸ್ಯರಾದ ಆಮೀನ್ ಮೋಹ್ಸಿನ್, ಮೇರಿ ವೇಗಸ್, ನೀಮ ಅರ್ಷದ್, ಬಶೀರ್ ಅಹಮದ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ಲಡ್ ಡೋನರ್ಸ್ ಫೋರಂ ನಿರ್ವಾಹP ಉನೈಸ್, ಪಕ್ಷದ ನಗರ ಸಮಿತಿ ಸದಸ್ಯರಾದ ಅರ್ಷದ್, ಮೂಸ, ಕಾರ್ಯಕರ್ತರು ಭಾಗವಹಿಸಿದ್ದರು.