ಮಡಿಕೇರಿ, ಜೂ. ೧೫: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ಶಾಂತಳ್ಳಿ ಹಾಗೂ ಭಾಗಮಂಡಲ ಹೋಬಳಿಯಲ್ಲಿ ಹೆಚ್ಚು ಮಳೆಯಾಗಿದೆ. ಶಾಂತಳ್ಳಿ ಹೋಬಳಿಯಲ್ಲಿ ೩.೭೬ ಇಂಚು ಮಳೆ ಬಿದ್ದಿದ್ದರೆ ಭಾಗಮಂಡಲ ವಿಭಾಗದಲ್ಲಿ ೩.೬೧ ಇಂಚು ಮಳೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲಾ ಸರಾಸರಿ ೧.೭೫ ಇಂಚಿನಷ್ಟಾಗಿದೆ.
ಜಿಲ್ಲೆಯಾದ್ಯAತ ಮಳೆಯ ತೀವ್ರತೆಯೊಂದಿಗೆ ಗಾಳಿಯ ರಭಸವೂ ಹೆಚ್ಚಿದ್ದು, ಇದೇ ರೀತಿಯ ವಾತಾವರಣ ಬಹುತೇಕ ಎಲ್ಲೆಡೆ ಮುಂದುವರೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ರಭಸ ಇನ್ನಷ್ಟು ಹೆಚ್ಚಿರುವದಾಗಿ ತಿಳಿದು ಬಂದಿದೆ. ನಿನ್ನೆ ದಿನವಿಡೀ ಮಳೆ ಸುರಿದಿದ್ದು, ರಾತ್ರಿ ಗಾಳಿಯ ತೀವ್ರತೆಯೂ ಕಂಡು ಬಂದಿತ್ತು. ಜಿಲ್ಲೆಯ ಇನ್ನಿತರ ಹೋಬಳಿಗಳಾದ ಮಡಿಕೇರಿ ತಾಲೂಕಿನ ಮಡಿಕೇರಿ ಕ.ಸ.ಬಾ. ೨.೪೪ ಇಂಚು, ನಾಪೋಕ್ಲು ೨.೩೬ ಇಂಚು, ಸಂಪಾಜೆ ೧.೫೮ ಇಂಚು ಮಳೆ ಕಳೆದ ೨೪ ಗಂಟೆಗಳಲ್ಲಿ ಆಗಿದೆ. ತಾಲೂಕು ಸರಾಸರಿ ೨.೫೦ ಇಂಚಿನಷ್ಟಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೧.೭೩ ಇಂಚು ಮಳೆಯಾಗಿದೆ. ಸೋಮವಾರಪೇಟೆ ಕ.ಸ.ಬಾ. ೧.೯೬, ಶನಿವಾರಸಂತೆ ೧.೪೪, ಕೊಡ್ಲಿಪೇಟೆ ೧.೪೮, ಕುಶಾಲನಗರ ೦.೬೦, ಸುಂಟಿಕೊಪ್ಪ ಹೋಬಳಿಗೆ ೧.೧೬ ಇಂಚಿನಷ್ಟಾಗಿದೆ. ವೀರಾಜಪೇಟೆ ತಾಲೂಕು ಸರಾಸರಿ ೧.೦೭ ಇಂಚಿನಷ್ಟಾಗಿದೆ. ತಾಲೂಕಿನ ವಿವಿಧ ಹೋಬಳಿ ಗಳಾದ ವೀರಾಜಪೇಟೆ ಕ.ಸ.ಬಾ. ೧.೫೨, ಶ್ರೀಮಂಗಲ ೧.೨೮, ಹುದಿಕೇರಿ ೦.೫೨, ಅಮ್ಮತ್ತಿ ೧.೫೬, ಬಾಳೆಲೆ ೦.೮೦, ಪೊನ್ನಂಪೇಟೆಯಲ್ಲಿ ೦.೭೬ ಇಂಚು ಮಳೆಯಾಗಿದೆ.