*ವೀರಾಜಪೇಟೆ, ಜೂ. ೧೫: ವೀರಾಜಪೇಟೆ ಸರ್ಕಾರಿ ಆಸ್ಪತ್ರೆ ತಾಲೂಕು ಮಟ್ಟದ ಆಸ್ಪತ್ರೆಯಾಗಿದ್ದರೂ ಇನ್ನೂ ಹತ್ತು ಹಲವು ಸೌಕರ್ಯಗಳು ಹಾಗೂ ಅಗತ್ಯ ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದೆ. ಇದನ್ನು ಮನಗಂಡ ಬೆಂಗಳೂರಿನ ‘ಎಂಟರ್ಪ್ರಿನರ್ಸ್ ಆರ್ಗನೈಜೇಶನ್’ ಮತ್ತು ಕೊಡಗಿನ ಕೆಲವು ಹಿತೈಷಿಗಳು ಒಟ್ಟಾಗಿ ಸೇರಿ, ಡಾ.ಎಂ.ಎA ಚೆಂಗಪ್ಪನವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಸದ್ದಿಲ್ಲದೇ ಬಹಳ ದೊಡ್ಡದಾದ ಮತ್ತು ಅಗತ್ಯವಾದ ಸಹಾಯ ಮಾಡಿದ್ದಾರೆ.

ಕೋವಿಡ್ ಆಸ್ಪತ್ರೆಯಾಗಿ ಬದಲಾ ಗುತ್ತಿರುವ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯನ್ನು ಮತ್ತಷ್ಟು ಉತ್ತಮವಾಗಿ ಮಾಡುವ ನಿಟ್ಟಿನಲ್ಲಿ, ವೀರಾಜಪೇಟೆ ಆಸ್ಪತ್ರೆU ೧೦ ಆಕ್ಸಿಜನ್ ಕಾನ್ಸ್ನ್ ಟ್ರೇಟರ್‌ಗಳು ೧೦ ಬೆಡ್ ಪಾರ್ಟಿಶಿಯನ್ ಸ್ಟ್ಯಾಂಡ್ ಗಳು, ೧೫ ವ್ಹೀಲ್ ಚೇರ್ ಗಳು, ೨ ಸ್ಟೆçಚರ್ ಸ್ಟಾö್ಯಂಡ್ ಜೊತೆಗಿರುವ ಆಕ್ಸಿಜನ್ ಸಿಲಿಂಡರ್ ಹೊಂದಿರುವ ಟ್ರಾಲಿ, ೨೦ ಐ.ವಿ ಸ್ಟಾö್ಯಂಡ್‌ಗಳು, ೪ ಬೈಪಾಪ್ ಮಿಶಿನ್‌ಗಳು, ೩೦ ಬ್ಯಾಕ್ ರೆಸ್ಟ್ ಹಾಸಿಗೆಗಳು ಒಟ್ಟು ಇಪ್ಪತ್ತು ಲಕ್ಷ ಮೌಲ್ಯದ

(ಮೊದಲ ಪುಟದಿಂದ) ವೈದ್ಯಕೀಯ ಸಾಮಗ್ರಿಗಳು ವೀರಾಜಪೇಟೆಯ ಸರ್ಕಾರಿ ಆಸ್ಪತ್ರೆಗೆ ಎಂಟರ್ಪ್ರಿನರ್ಸ್ ಆರ್ಗನೈಜೇಶನ್ ವತಿಯಿಂದ ಬಂದು ತಲುಪಿದೆ. ‘ಫೈರ್ ಪ್ರೋ’ ಸಂಸ್ಥೆಯ ಮುಖ್ಯಸ್ಥ ನಂಬುಡುಮಾಡ ನರೇಂದ್ರ ಅವರು ಸಾಥ್ ನೀಡಿದ್ದಾರೆ.

ಇತ್ತೀಚೆಗಷ್ಟೇ ಒಂದು ಕೋಟಿ ಮೌಲ್ಯದ ವೆಚ್ಚದಲ್ಲಿ ಸ್ವಾಭಾವಿಕ ಗಾಳಿಯಿಂದ ಆಕ್ಸಿಜನ್ ತಯಾರು ಮಾಡುವ ಆಕ್ಸಿಜನ್ ಕನ್ವರ್ಟರ್ ಘಟಕ ಸಾರ್ವಜನಿಕ ಆಸ್ಪತ್ರೆಗೆ ಕೊಡುಗೆಯಾಗಿ ಬಂದು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಒಂದು ರೀತಿಯ ಶಕ್ತಿ ತುಂಬಿತ್ತು. ಈಗ ಇಪ್ಪತ್ತು ಲಕ್ಷ ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಕೊಡುಗೆಯಾಗಿ ಪಡೆಯುವುದರ ಮೂಲಕ ವೀರಾಜಪೇಟೆ ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಸಲಕರಣೆಗಳ ಕೊರತೆಯನ್ನು ಸ್ವಲ್ಪಮಟ್ಟಿಗೆ ಸರಿಪಡಿಸಿಕೊಂಡAತಾಗಿದೆ. ಒಟ್ಟಾರೆ ಎಲ್ಲವನ್ನು ಸರ್ಕಾರವೇ ಮಾಡಲಿ ಎಂದು ಕಾಯುತ್ತಾ ಕೂರುವುದಕ್ಕಿಂತ ನಮ್ಮ ಕೈಯ್ಯಲ್ಲಿ ಏನು ಸಾಧ್ಯವೋ ಆ ಮೂಲಕವೂ ವೈದ್ಯಕೀಯ ಸೇವೆ, ಸರ್ಕಾರಿ ಆಸ್ಪತ್ರೆ ಸ್ಥಿತಿಗತಿ ಉತ್ತಮಗೊಳಿಸಲು ಸಾಧ್ಯ ಎನ್ನುವ ನಿಟ್ಟಿನಲ್ಲಿ ಡಾ.ಎಂ.ಎA ಚೆಂಗಪ್ಪ ಮತ್ತು ‘ಎಂಟರ್ಪ್ರಿನರ್ಸ್ ಆರ್ಗನೈಜೇಶನ್’ ಹೆಜ್ಜೆ ಇಟ್ಟಿದೆ.