ಮಡಿಕೇರಿ, ಜೂ. ೧೫: ಪೊಲೀಸರ ದೌರ್ಜನ್ಯದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಮೃತ ರಾಯ್ ಡಿಸೋಜ ಕುಟುಂಬಸ್ಥರ ಹೇಳಿಕೆಯನ್ನು ಸಿಐಡಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ವೀರಾಜಪೇಟೆ ಅತಿಥಿ ಗೃಹದಲ್ಲಿ ಮೌಖಿಕ ಹೇಳಿಕೆಯನ್ನು ಪಡೆದು ಕೊಳ್ಳಲಾಗಿದ್ದು, ಕುಟುಂಬಸ್ಥರು ಹೇಳಿರುವುದನ್ನು ವೀಡಿಯೋ ಕೂಡ ಮಾಡಿಕೊಳ್ಳಲಾಗಿದೆ. ಘಟನೆ ನಡೆದ ತಾ. ೯ರ ರಾತ್ರಿ ಏನೇನಾಯಿತು ಎಂಬುದರ ಬಗ್ಗೆ ಅಧಿಕಾರಿಗಳು ಕುಟುಂಬಸ್ಥರನ್ನು ಪ್ರಶ್ನಿಸಿದ್ದಾರೆ.
ಬೆಳಿಗ್ಗೆ ೧೧ ಗಂಟೆಯಿAದ ಮಧ್ಯಾಹ್ನ ೨.೪೫ರ ತನಕ ಮೃತ ರಾಯ್ ಡಿಸೋಜ ಅವರ ತಾಯಿ ಮೆಟಿಲ್ಡಾ ಲೋಬೋ ಹಾಗೂ ಸಹೋದರ ರಾಬಿನ್ ಡಿಸೋಜ ಅವರ ಹೇಳಿಕೆಯನ್ನು ದಾಖಲಿಸಿ ಕೊಳ್ಳಲಾಗಿದೆ. ಮಧ್ಯಾಹ್ನದಿಂದ ರಾತ್ರಿ ಸುಮಾರು ೮.೩೦ರ ತನಕ ಕುಟುಂಬಸ್ಥರಾದ ಸುನಿಲ್ ಡಿಸೋಜ, ಸಬಾಸ್ಟಿನ್, ಜೂಡಿ ಅವರ ಹೇಳಿಕೆ ಪಡೆದುಕೊಳ್ಳಲಾಗಿದೆ. ತಾ.೯ ರಂದು ಪೊಲೀಸ್ ಠಾಣೆಗೆ ಬಂದ ವೇಳೆ ರಾಯ್ ಯಾವ ಸ್ಥಿತಿಯಲ್ಲಿದ್ದರು, ಪೊಲೀಸರಿಂದ ಒತ್ತಡ ಇತ್ತ.? ಎಂಬ ಪ್ರಶ್ನೆಗಳನ್ನು ಕೇಳಿದ್ದು, ಇದಕ್ಕೆ ರಾಯ್ ತಾಯಿ ಹಾಗೂ ಸಹೋದರ ಒತ್ತಡ ಇತ್ತು ಎಂದು ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.
(ಮೊದಲ ಪುಟದಿಂದ) ಜೊತೆಗೆ ರಾಯ್ ಚಿಕಿತ್ಸೆ ಪಡೆಯುವ ಸಂದರ್ಭ ಪೊಲೀಸರು ಬೇರೆ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡುತ್ತೇವೆ ಎಂದು ನಮಗೆ ತಿಳಿಸಿದ್ದರು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ ಎನ್ನಲಾಗಿದೆ.
ಸಾವಿನ ಪ್ರಕರಣಕ್ಕೆ ಸಂಬAಧಿಸಿ ದಂತೆ ಕೆಲವೊಂದು ಸಿಸಿಟಿವಿ ದೃಶ್ಯಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ವಿವಿಧ ಕೋನಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಪೇದೆ ಸಂಗಮೇಶ್ ಮೇಲೆ ನಡೆದ ಹಲ್ಲೆಯ ದೃಶ್ಯವನ್ನೂ ಪಡೆದುಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ.
ಪೊಲೀಸ್ ಠಾಣೆ ಎದುರು ರಂಪಾಟ - ವೀಡಿಯೋ ವೈರಲ್
ವೀರಾಜಪೇಟೆಯ ಚಿಕ್ಕಪೇಟೆ ನಿವಾಸಿ ಮಾನಸಿಕ ಅಸ್ವಸ್ಥರಾಗಿದ್ದ ರಾಯ್ ಡಿಸೋಜ ಸಾವಿಗೂ ಮುನ್ನ ಪೇದೆಗೆ ಕತ್ತಿ ಬೀಸುವ ಹಾಗೂ ವೀರಾಜಪೇಟೆ ನಗರ ಠಾಣೆ ಎದುರು ಕತ್ತಿ ಹಿಡಿದು ಕಿರುಚಾಡುತ್ತ ಓಡಾಡುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತಾ.೯ರ ರಾತ್ರಿ ನಗರ ಠಾಣೆಯ ಪೇದೆ ಸಂಗಮೇಶ್ ಬೈಕ್ನಲ್ಲಿ ಠಾಣೆಗೆ ಕರ್ತವ್ಯಕ್ಕೆಂದು ಬರುವಾಗ ರಾಯ್ ಬೈಕನ್ನು ಅಡ್ಡಗಟ್ಟಿ ಪೇದೆ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಪರಿಣಾಮ ಪೇದೆ ಕೈಗೆ ಗಾಯವಾಗಿವೆ. ನಂತರ ಹಿಂಬದಿಯಿAದ ಬಂದ ಕಾರನ್ನು ನೋಡಿ ರಾಯ್ ಓಡಿದ್ದಾರೆ.
ಅದಾದ ನಂತರ ಪೊಲೀಸ್ ಠಾಣೆ ಎದುರು ಬಂದ ರಾಯ್ ಕಿರುಚಾಡುತ್ತ, ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ಅದಲ್ಲದೆ ಠಾಣೆ ಎದುರು ನಿಂತಿದ್ದ ಮಾರುತಿ ಓಮ್ನಿ ಕಾರಿಗೆ ಕತ್ತಿಯಿಂದ ಹೊಡೆದು, ಕಾರಿನ ಬಾಗಿಲು ತೆಗೆಯಲು ಪ್ರಯತ್ನಿಸುತ್ತಾರೆ.
ಮಾನಸಿಕ ಅಸ್ವಸ್ಥ ರಾಯ್ ನಿಧಿಗಾಗಿ ಕೊಲೆ ಎಂದು ಕಿರುಚಾಡುತ್ತ ಓಡಾಡುತ್ತ ಪೊಲೀಸರಿಗೆ ಅವಾಜ್ ಹಾಕುವ ದೃಶ್ಯಗಳು ಪೊಲೀಸರ ಮೊಬೈಲ್ನಲ್ಲಿ ಸೆರೆಯಾಗಿವೆೆ. ಸಂಗಮೇಶನ ಕೈಗೆ ಗಾಯವಾಗಿ ರಕ್ತಸಿಕ್ತವಾದ ದೃಶ್ಯವನ್ನು ಯಾರೋ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ೬ ದಿನಗಳ ಬಳಿಕ ಇಂದು ವೈರಲ್ ಮಾಡಿದ್ದಾರೆ.