ಸೋಮವಾರಪೇಟೆ, ಜೂ. ೧೬: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕೊರೊನಾ ವಾರಿಯರ್ಸ್ಗಳು, ರೋಗಿಗಳ ಸಂಬAಧಿಕರು, ಪಟ್ಟಣದ ನಿರ್ಗತಿಕರಿಗೆ ಕಳೆದ ೩೬ ದಿನಗಳಿಂದ ಮಧ್ಯಾಹ್ನದ ಊಟ ನೀಡುತ್ತಿರುವ ಬಿಜೆಪಿ ಅಸಂಘಟಿತ ವಲಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಅವರು, ಪ್ರಸ್ತುತ ಜಾರಿಯಲ್ಲಿರುವ ಲಾಕ್‌ಡೌನ್ ಮುಗಿಯುವವರೆಗೂ ಸೇವೆಯನ್ನು ವಿಸ್ತರಿಸಲು ಮುಂದಾಗಿದ್ದಾರೆ.

ಸದ್ಯದ ಮಟ್ಟಿಗೆ ತಾ. ೧೪ರಂದು ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಸರ್ಕಾರ ತಾ. ೨೧ ರವರೆಗೆ ಲಾಕ್‌ಡೌನ್ ವಿಸ್ತರಿಸಿರುವುದರಿಂದ ಸೇವೆಯನ್ನು ಮುಂದುವರೆಸಲು ಉದ್ದೇಶಿಸಲಾಗಿದೆ ಎಂದು ವಿ.ಎಂ. ತಿಳಿಸಿದ್ದಾರೆ.

ಊಟ ವಿತರಣೆ ಮಾಡುತ್ತಿರುವ ಸರ್ಕಾರಿ ಆಸ್ಪತ್ರೆಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭೇಟಿ ನೀಡಿ ವಿ.ಎಂ. ವಿಜಯ ಅವರ ಸೇವೆಯನ್ನು ಶ್ಲಾಘಿಸಿದರಲ್ಲದೇ, ಕೊರೊನಾ ವಾರಿಯರ್ಸ್ಗಳಿಗೆ ಊಟ ವಿತರಿಸಿದರು.

ಲಾಕ್‌ಡೌನ್ ಇರುವುದರಿಂದ ಪಟ್ಟಣದ ಹೊಟೇಲ್‌ಗಳು ಬಂದ್ ಆಗಿರುವುದರಿಂದ ಗ್ರಾಮೀಣ ಭಾಗದಿಂದ ಆಸ್ಪತ್ರೆಗೆ ಬರುವವರಿಗೆ ಮಧ್ಯಾಹ್ನದ ಊಟಕ್ಕೆ ಸಮಸ್ಯೆಯಾಗುತ್ತಿತ್ತು. ಇದನ್ನು ಮನಗಂಡು ಕಳೆದ ೩೬ ದಿನಗಳಿಂದ ಮಧ್ಯಾಹ್ನದ ಊಟ ವಿತರಿಸಲಾಗುತ್ತಿದೆ ಎಂದು ವಿ.ಎಂ. ವಿಜಯ ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರಾದ ಧನುರಾಜ್, ಪ್ರಸನ್ನ ನಾಯರ್, ಪ್ರಿಜು, ಪ್ರಜಾ ಪೂಣಚ್ಚ, ಅಶೋಕ್, ಮಹೇಶ್, ಅರುಣ್, ಮೃತ್ಯುಂಜಯ ಅವರುಗಳು ದಿನಂಪ್ರತಿ ಕೊರೊನಾ ವಾರಿಯರ್ಸ್ಗಳಿಗೆ ಊಟ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ.