ಮಡಿಕೇರಿ, ಜೂ. ೧೫: ಭಾರತದ ಖ್ಯಾತ ಟೆನ್ನಿಸ್ ಆಟಗಾರರಾಗಿರುವ ಕೊಡಗಿನವರಾದ ಮಚ್ಚಂಡ ರೋಹನ್ ಬೋಪಣ್ಣ ಅವರು ತಮ್ಮ ವೃತ್ತಿ ಜೀವನದಲ್ಲಿ ೪೦೦ನೇ ಗೆಲುವು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಜರ್ಮನಿಯ ಹಾರ್ವೆಯಲ್ಲಿ ನಿನ್ನೆ ನಡೆದ ಪಂದ್ಯದ ನೋವೆಂಟಿ ಓಪನ್ ಎ.ಟಿ.ಪಿ. ಪಂದ್ಯದಲ್ಲಿ ಡಬಲ್ಸ್ನಲ್ಲಿ ತಮ್ಮ ಜತೆಗಾರÀ ದಿವ್‌ಜಿಶರಣ್ ಅವರೊಂದಿಗೆ ಎದುರಾಳಿಗಳಾದ ಮೋಲ್ಡಾವಾದ ರಾಡು ಅಲ್ಟೋಟ್ ಹಾಗೂ ಜಾರ್ಜಿಯಾದ ನಿಕಲೋಜ್ ಅವರನ್ನು ಸೋಲಿಸುವ ಮೂಲಕ ೪೦೦ನೇ ಜಯ ಸಾಧಿಸಿದ್ದಾರೆ.