ಮಡಿಕೇರಿ, ಜೂ. ೧೫: ಗದ್ದೆಹಳ್ಳದ ವಿಕಾಸ್ ಜನಸೇವಾ ಟ್ರಸ್ಟ್ನ ಜೀವನದಾರಿ ಆಶ್ರಮದಲ್ಲಿ ಭಾರತ-ಚೀನಾ ಗಡಿಯ ಲಡಾಕ್‌ನಲ್ಲಿ ೨೦ ಮಂದಿ ಯೋಧರು ಹುತಾತ್ಮರಾಗಿ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಯೋಧರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಸಂತ ಅಂತೋಣಿ ಶಾಲೆಯ ೫ನೇ ತರಗತಿ ಬಾಲಕಿ ಶ್ರೀಶಾ ಯೋಧರ ಬಗ್ಗೆ ಭಾಷಣ ಮಾಡಿದಳು. ಟ್ರಸ್ಟ್ನ ಅಧ್ಯಕ್ಷ ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಶ್ರೀಶಾಳ ತಂದೆ ಶ್ರೀಜು, ತಾಯಿ ಸಂಧ್ಯಾ, ಆಶ್ರಮದ ಸಿಬ್ಬಂದಿಗಳು ಹಾಗೂ ನಿವಾಸಿಗಳು ಪಾಲ್ಗೊಂಡಿದ್ದರು.