*ಗೋಣಿಕೊಪ್ಪ, ಜೂ. ೧೫: ಕೊರೊನಾ ಬಾಧೆಯಿಂದ ವಿಮುಕ್ತಿ ಹೊಂದಲು ಲಸಿಕೆ ಪಡೆದುಕೊಳ್ಳುವು ದರಿಂದ ಮಾತ್ರ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಲು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಬಾಡಗ ಚೂರಿಕಾಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕೆ. ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿ ಮತ್ತು ಪೈಸಾರಿ ನಿವಾಸಿಗಳಿಗೆ ಲಸಿಕೆ ಅಭಿಯಾನದಲ್ಲಿ ಅವರು ಮಾತನಾಡಿದರು.
ಆರೋಗ್ಯವಂತರಾಗಿರಲು ಲಸಿಕೆ ಪಡೆದುಕೊಳ್ಳುವುದರ ಜತೆಗೆ ಸಾಮಾಜಿಕ ಅಂತರ ಮಾಸ್ಕ್, ಸ್ಯಾನಿಟೈಸರ್ ಬಳಕೆಯಿಂದ ಸಾಧ್ಯವಿದೆ ಎಂದರು.
ಲಸಿಕೆ ಪಡೆದುಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮಗಳು ಎದುರಾಗುವುದಿಲ್ಲ. ಲಸಿಕೆ ಪಡೆದುಕೊಂಡ ಕಾರಣವೇ ಇಂದು ಆರೋಗ್ಯ ಇಲಾಖೆಯಲ್ಲಿ ವೈದ್ಯರು, ಶುಶ್ರೂಷಕಿಯರು ಆತಂಕವಿಲ್ಲದೆ ಚಿಕಿತ್ಸೆ ನೀಡಲು ಸಾಧ್ಯವಾಗಿದೆ ಎಂಬುವ ದನ್ನು ಮನಗಾಣಬೇಕಾಗಿದೆ ಎಂದು ತಿಳಿಸಿದರು. ಲಸಿಕೆ ಪಡೆದುಕೊಳ್ಳುವು ದರಿಂದ ಕಜ್ಜಿ ಇನ್ನಿತರ ಖಾಯಿಲೆಗಳು ಪ್ರಾರಂಭವಾಗುತ್ತದೆ ಎಂಬುವದು ಸುಳ್ಳು. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವಾಗ ಲಸಿಕೆ ಪಡೆದ ಎರಡು ದಿನದಲ್ಲಿ ಅಲ್ಪಪ್ರಮಾಣದ ಜ್ವರ ಕಾಣಿಸಿಕೊಳ್ಳು ವುದು ಸಾಮಾನ್ಯವಾಗಿದೆ. ಈ ಬೆಳವಣಿಗೆಗೆ ಆಂತಕ ಪಡುವ ಅಗತ್ಯ ಇಲ್ಲ ಎಂದರು.
ಚೂರಿಕಾಡು, ನಾಣಚ್ಚಿ, ಕೆ.ಬಾಡಗ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿ ಹಾಗೂ ಕಾಲೋನಿಯ ೩೫೦ಕ್ಕೂ ಹೆಚ್ಚು ನಿವಾಸಿಗಳು ಲಸಿಕೆ ಪಡೆದುಕೊಳ್ಳಲು ಮುಂದಾದರು.
ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಾವ್ಯರಾಣಿ, ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ, ವೈದ್ಯಾಧಿಕಾರಿ ಡಾ. ಯತಿರಾಜ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ಕೆ.ಬಾಡಗ ಪಂಚಾಯಿತಿ ಅಧ್ಯಕ್ಷ ಚಂದ್ರ, ಉಪಾಧ್ಯಕ್ಷ ಚೆಪುö್ಪಡೀರ ರೀಟಾ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪೂಣಚ್ಚ, ಕೆ.ಬಾಡಗ ಶಕ್ತಿ ಕೇಂದ್ರದ ಅಧ್ಯಕ್ಷ ಪೆಮ್ಮಣಮಾಡ ನವೀನ್, ಜಿಲ್ಲಾ ವನವಾಸಿ ಕಲ್ಯಾಣ ಸಂಘಟನಾ ಕಾರ್ಯದರ್ಶಿ ಹರೀಶ್, ಸದಸ್ಯ ಮುದ್ದಿಯಡ ಮಂಜು, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ ಹಾಜರಿದ್ದರು.