ಮಡಿಕೇರಿ, ಜೂ. ೧೫: ತಾ. ೧೫ರ ಶಕ್ತಿ ದಿನಪತ್ರಿಕೆಯಲ್ಲಿ ‘ಹಾಡಿಗಳಿಗೆ ಹಾಳಾದ ಮೊಟ್ಟೆ’ ಎಂಬ ಶಿರೋನಾಮೆಯಡಿ ಪ್ರಕಟವಾದ ವರದಿಗೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.
ಹಾಡಿಯ ಅಂಗನವಾಡಿ ಕೇಂದ್ರಕ್ಕೆ ತಾ. ೮ ರಂದು ಆಹಾರ ಪದಾರ್ಥ ವಿತರಣೆ ಮಾಡಲಾಗಿದೆ. ಅಂಗನವಾಡಿ ಕೇಂದ್ರದ ಶಿಕ್ಷಕಿಯ ಪತಿಗೆ ಕೋವಿಡ್ ಪಾಸಿಟಿವ್ ಇದ್ದ ಕಾರಣ ತಾ. ೧೪ರ ವರೆಗೂ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿರುವುದಿಲ್ಲ.
ತಾ. ೧೪ ರಂದು ಆಹಾರ ಪದಾರ್ಥಗಳನ್ನು ವಿತರಣೆ ಮಾಡುವ ಸಂದÀರ್ಭದಲ್ಲಿ ಒಡೆದ ಮೊಟ್ಟೆ ಹಾಳಾಗಿ ಹೋಗಿರುವುದು ಗಮನಕ್ಕೆ ಬಂದಾಗ ಎಲ್ಲಾ ಮೊಟ್ಟೆಗಳನ್ನು ಹಿಂಪಡೆದು ಬದಲಿ ಮೊಟ್ಟೆಗಳನ್ನು ತಾ. ೧೫ ರಂದು ಮತ್ತೊಮ್ಮೆ ಸರಬರಾಜು ಮಾಡಿಸಲಾಗಿದೆ.
ಅಲ್ಲದೆ ನಿಗದಿಪಡಿಸಿದ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಆಹಾರ ಪದಾರ್ಥಗಳ ಗುಣಮಟ್ಟ ಸರಿಯಾಗಿರದಿದ್ದಲ್ಲಿ ಅಂತಹ ಆಹಾರ ಪದಾರ್ಥಗಳನ್ನು ಸರಬರಾಜು ಮಾಡದಿರುವಂತೆಯೂ ಅಂಗನವಾಡಿ ಕೇಂದ್ರ ಅಂಗನವಾಡಿ ಶಿಕ್ಷಕರಿಗೆ ತಿಳಿಸಲಾಗಿದೆ ಎಂದು ಗುರುಶಾಂತಪ್ಪ ಅವರು ಸ್ಪಷ್ಟಪಡಿಸಿದ್ದಾರೆ.