ಕೂಡಿಗೆ, ಜೂ. ೧೫: ಜಿಲ್ಲೆಯ ರೈತರು ಆರ್ಥಿಕವಾಗಿ ಮುಂದುವರೆಯಲು ಅನುಕೂಲವಾಗುವಂತೆ ರೈತ ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯನ್ನು ಬೆಳೆಯಲು ಮುಂದಾಗಿದ್ದರು. ಆದರೆ ಶುಂಠಿ ಬೆಳೆ ಬೇಸಾಯ ಮಾಡಿ ಕೇವಲ ಎರಡೂ ತಿಂಗಳು ಕಳೆಯುವಷ್ಟರಲ್ಲಿ ಕೊಳೆರೋಗ (ಕರಿ ಕಡ್ಡಿ) ಕಾಣಿಸಿಕೊಂಡಿರುವುದರಿAದ ರೈತರು ಆತಂಕದಲ್ಲಿದ್ದಾರೆಭೂಮಿ ಸಿದ್ಧತೆ ಮಾಡಿಕೊಂಡು ಬಿತ್ತನೆ ಮಾಡಿದ ನಂತರ ಮೊಳಕೆ ಒಡೆದು ಎಲೆ ಚಿಗುರುವ ಸಂದರ್ಭದಲ್ಲಿ ಮಣ್ಣಿಗೆ ಆಧಾರಿತವಾಗಿ ಮತ್ತು ಶುಂಠಿ ಬೆಳೆ ಗಾತ್ರದಲ್ಲಿ ದಪ್ಪವಾಗಲು ರಸಗೊಬ್ಬರವನ್ನು ಹಾಕಲಾಗಿದೆ. ಈಗಿನ ರಸಗೊಬ್ಬರದ ಬೆಲೆಯು ಗಗನಕ್ಕೆ ಏರಿದ್ದರೂ ಶುಂಠಿ ಬೆಳೆಯು ಉತ್ತಮವಾಗಿ ಬರಲಿ ಎಂದು ಸಾಲ ಮಾಡಿ ಹಣವನ್ನು ತಂದು ಬೇಸಾಯ ಮಾಡಿದರೂ ಕೊಳೆರೋಗ ಶುಂಠಿ ಗದ್ದೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಜಾಗಕ್ಕೆ ಕಪ್ಪೆಚಿಪ್ಪು ಸುಣ್ಣವನ್ನು ಹಾಕಲಾಗುತ್ತಿದೆ. ಆದರೂ ಹವಾಮಾನ ವ್ಯೆಪರಿತ್ಯದಿಂದ ಕೊಳೆರೋಗ ಕಡಿಮೆಯಾಗುತ್ತಿಲ್ಲ. ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಅನೇಕ ಕಡೆಗಳಲ್ಲಿ ಕೊಳೆರೋಗ ಕಾಣಿಸಿಕೊಂಡ ಹಿನ್ನೆಲೆ ಈ ಭಾಗದ ರೈತರು ಆಂತಕದಲ್ಲಿದ್ದಾರೆ. ಮಳೆ ಕಡಿಮೆ ಇದ್ದರೂ ಸಹ ಈ ವ್ಯಾಪ್ತಿಯ ಕೆಲ ಭಾಗಗಳಲ್ಲಿ ಹವಾಮಾನದ ಬದಲಾವಣೆಯಲ್ಲಿ ರೋಗ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ಕೆಲವು ರೈತರು.
ಕೊಳೆರೋಗ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಆ ಗದ್ದೆಯ ಶುಂಠಿ ಕಿತ್ತು ಮಾರಾಟ ಮಾಡಲು ಹೋದರೆ ಕೊಳ್ಳುವವರೇ ಇಲ್ಲದಾಗಿದೆ. ಶುಂಠಿ ಖರೀದಿಸಿ ಬೇರೆ ರಾಜ್ಯಗಳಿಗೆ ಸಾಗಾಣಿಕೆ ಮಾಡುತ್ತಿದ್ದವರಿಗೆ ಕೊರೊನಾ ಕಂಟಕ ಒಂದೆAಡೆಯಾಗಿದೆ.
ಕಳೆದ ವರ್ಷ ಬೆಳೆದ ಶುಂಠಿಗೆ ಸಮರ್ಪಕವಾದ ಬೆಲೆ ಸಿಗಲ್ಲ ಎಂದು ಅನೇಕ ರೈತರು ಜಮೀನಿನಲ್ಲಿ ಬಿಟ್ಟಿದ್ದ ಹಳೆ ಶುಂಠಿ ಒಂದು ಚೀಲ ೬೦ ಕೆ.ಜಿ.ಗೆ ರೂ. ೧೩೦೦ ಇದೆ. ಆದರೆ ಹೊಸ ಶುಂಠಿಗೆ ಕೇವಲ ರೂ. ೪೦೦ ಮಾತ್ರವಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಬೆಲೆಯಿಲ್ಲದೆ ಗೋಳಾಡುವಂತಾಗಿದೆ ಎಂದು ಕೊಳೆರೋಗ ಕಾಣಿಸಿಕೊಂಡ ರೈತರ ಗೋಳಾಗಿದೆ. - ಕೆ.ಕೆ. ನಾಗರಾಜಶೆಟ್ಟಿ.