ಮಡಿಕೇರಿ, ಜೂ. ೧೫: ಬಟ್ಟೆ ವ್ಯಾಪಾರದ ಸೋಗಿನಲ್ಲಿ ಅಕ್ರಮವಾಗಿ ತೇಗದ ಮರ ಕಡಿದು ಒಮ್ನಿ ವ್ಯಾನಿನಲ್ಲಿ ಸಾಗಾಟ ಮಾಡುವ ಸಂದರ್ಭ ಜಿಲ್ಲಾ ಅಪರಾಧ ಪತ್ತೆ ದಳ (ಡಿಸಿಐಬಿ) ಪತ್ತೆಹಚ್ಚಿ, ಮಾಲು ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮಡಿಕೇರಿ ತಾಲೂಕಿನ ನೀರುಕೊಲ್ಲಿ ಗ್ರಾಮದ ಟಿ.ವಿ. ಲೋಹಿತ್ (೨೬), ಮೇಕೇರಿ ಗ್ರಾಮದ ಟಿ.ಎಸ್. ಕೀರ್ತಿ (೨೮) ಬಂಧಿತ ಆರೋಪಿತರು. ಬಂಧಿತರಿAದ ರೂ ೧.೫೦ ಲಕ್ಷ ಮೌಲ್ಯದ ೬ ತೇಗದ ಮರದ ನಾಟ ಸೇರಿದಂತೆ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಚೆಟ್ಟಳ್ಳಿ ಕಾಕನಕಾಡು ವ್ಯಾಪ್ತಿಯ ಕಾಫಿ ತೋಟವೊಂದರಿAದ ತೇಗದ ಮರವನ್ನು ಅಕ್ರಮವಾಗಿ ಕಡಿದು ನಾಟಾ ಮಾಡಿ ಸಾಗಾಟ ಮಾಡುತ್ತಿರುವುದರ ಬಗ್ಗೆ ಲಭ್ಯವಾದ ಖಚಿತ ಮಾಹಿತಿ ಹಿನ್ನೆಲೆ ದಾಳಿ ನಡೆಸಿದಾಗ ಮೇಲ್ನೋಟಕ್ಕೆ ಕಾರಿನೊಳಗೆ ಟೀ.ಶರ್ಟ್, ಆಫ್ ಪ್ಯಾಂಟ್‌ಗಳನ್ನು ನೇತು ಹಾಕಿ ಬಟ್ಟೆ ವ್ಯಾಪಾರದ ಸೋಗಿನಲ್ಲಿ ಕಳ್ಳ ಸಾಗಾಣಿಕೆ ನಡೆಸುತ್ತಿದ್ದದ್ದು ತಿಳಿದು ಬಂದಿದೆ. ಇಬ್ಬರು ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು, ವಾಲ್ನೂರು-ತ್ಯಾಗತ್ತೂರು ವ್ಯಾಪ್ತಿಯ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಡಿಸಿಐಬಿ ಶೋಧ ಕಾರ್ಯ ಮುಂದುವರಿಸಿದೆ. ಮರದ ನಾಟಗಳನ್ನು ಸಿದ್ದಾಪುರ ಠಾಣಾಧಿಕಾರಿ ವಶಕ್ಕೆ ನೀಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಆರ್‌ಬಿ ಇನ್ಸ್ಪೆಕ್ಟರ್ ಎಸ್. ಕುಮಾರ್ ಆರಾಧ್ಯ, ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್, ವಸಂತ, ಅನಿಲ್ ಕುಮಾರ್, ವೆಂಕಟೇಶ್, ಶರತ್ ರೈ, ಶಶಿಕುಮಾರ್ ಭಾಗವಹಿಸಿದ್ದರು.