ಭಾಗಮಂಡಲ, ನಾಪೋಕ್ಲುವಿನ ೭೭೧ ಕುಟುಂಬದ ೨೬೮೮, ಮಡಿಕೇರಿ ನಗರ ವ್ಯಾಪ್ತಿಯ ೩೮೧ ಕುಟುಂಬದ ೧೬೪೮, ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ, ಹುದಿಕೇರಿ, ಬಾಳೆಲೆ ಹೋಬಳಿಯ ೧೯೨ ಕುಟುಂಬದ ೬೬೦, ಕುಶಾಲನಗರ ನಗರ ವ್ಯಾಪ್ತಿಯ ೩೪೭ ಕುಟುಂಬದ ೧೩೬೬, ಸೋಮವಾರಪೇಟೆ ಹೋಬಳಿಯ ಕುಶಾಲನಗರ, ಸುಂಟಿಕೊಪ್ಪ, ಶಾಂತಳ್ಳಿ, ಕೊಡ್ಲಿಪೇಟೆ ವ್ಯಾಪ್ತಿಯ ೭೯೬ ಕುಟುಂಬದ ೨೭೯೬, ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿಯ ೨೧೩ ಕುಟುಂಬದ ೯೨೨, ವೀರಾಜಪೇಟೆ ಗ್ರಾಮಾಂತರದ ೧೧೨ ಕುಟುಂಬದ ೪೪೨, ವೀರಾಜಪೇಟೆ ನಗರದ ೬೬ ಕುಟುಂಬ ಸ್ಥಳಾಂತರಗೊಳ್ಳಬೇಕಾದ ಪಟ್ಟಿಯಲ್ಲಿದ್ದಾರೆ.

೭೭ ಕಾಳಜಿ ಕೇಂದ್ರ೫ ತಾಲೂಕಿನ ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯಲು ಈಗಾಗಲೇ ಜಿಲ್ಲಾಡಳಿತ ಕ್ರಮಕೈಗೊಂಡಿದ್ದು, ಕೇಂದ್ರವನ್ನು ಗುರುತಿಸಿದೆ. ಮಳೆ ಹೆಚ್ಚಾಗಿ, ಸಮಸ್ಯೆ ಸಂಭವಿಸಿದರೆ ತ್ವರಿತವಾಗಿ ಕಾಳಜಿ ಕೇಂದ್ರಕ್ಕೆ ಬೇಕಾದ ಅವಶ್ಯಕ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದೆ.