ರಾಜ್ಯದಲ್ಲಿ ಕೊರೊನಾ ಮತ್ತಷ್ಟು ಇಳಿಮುಖ

ಬೆಂಗಳೂರು, ಜೂ. ೧೫: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಇಳಿಮುಖದತ್ತ ಸಾಗಿದೆ. ಇಂದು ೫,೦೪೧ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ ೨೭,೭೭,೦೧೦ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೧೧೫ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೩,೧೪೮ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ೯೮೫ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೧,೯೯,೧೪೩ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ ೧೬ ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು ಸಹ ಹೊಸ ಪಾಸಿಟಿವ್ ಪ್ರಕರಣಗಳಿಗಿಂತ ಹೆಚ್ಚು ಅಂದರೆ ೧೪,೭೮೫ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೫,೮೧,೫೫೯ಕ್ಕೆ ಏರಿಕೆಯಾಗಿದೆ. ಇನ್ನು ೧,೬೨,೨೮೨ ಸಕ್ರೀಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೩೨,೬೦೦ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೫,೦೪೧ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೩.೮೦ಕ್ಕೆ ಇಳಿದಿದೆ. ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ ೯೮೫, ಬೆಳಗಾವಿಯಲ್ಲಿ ೯೫, ಬಳ್ಳಾರಿಯಲ್ಲಿ ೧೨೨, ಚಿಕ್ಕಬಳ್ಳಾಪುರದಲ್ಲಿ ೬೫, ಚಿಕ್ಕಮಗಳೂರು ೨೨೪, ದಕ್ಷಿಣ ಕನ್ನಡದಲ್ಲಿ ೪೮೨, ದಾವಣಗೆರೆಯಲ್ಲಿ ೧೮೩, ಹಾಸನದಲ್ಲಿ ೫೨೨, ಮೈಸೂರಿನಲ್ಲಿ ೪೯೦, ಶಿವಮೊಗ್ಗದಲ್ಲಿ ೨೮೨, ತುಮಕೂರಿನಲ್ಲಿ ೩೨೯, ಉಡುಪಿಯಲ್ಲಿ ೧೦೭, ಉತ್ತರ ಕನ್ನಡದಲ್ಲಿ ೧೨೨ ಪ್ರಕರಣಗಳು ವರದಿಯಾಗಿವೆ. ಕಳೆದ ೨೪ ತಾಸಿನಲ್ಲಿ ಸೋಂಕಿನಿAದ ಸಾವನ್ನಪ್ಪಿದವರ ಪೈಕಿ ಬೆಂಗಳೂರು ನಗರದಲ್ಲಿ ೧೬, ಬೆಳಗಾವಿ ೩, ಶಿವಮೊಗ್ಗ ೫, ಹಾವೇರಿ ೩, ಧಾರವಾಡದಲ್ಲಿ ೭, ಮೈಸೂರಿನಲ್ಲಿ ೨೬ ಪ್ರಕರಣಗಳು ಸೇರಿವೆ.

೨ ಡೋಸ್ ಲಸಿಕೆ ಡೆಲ್ಟಾ ರೂಪಾಂತರಿಗೆ ಹೆಚ್ಚು ಪರಿಣಾಮಕಾರಿ

ಲಂಡನ್, ಜೂ. ೧೫: ಎರಡು ಡೋಸ್ ಕೋವಿಡ್ ಲಸಿಕೆ ಪಡೆಯುವುದರಿಂದ ಡೆಲ್ಟಾ ರೂಪಾಂತರಿಯಿAದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಬ್ರಿಟನ್‌ನ ಆರೋಗ್ಯ ತಜ್ಞರ ಹೊಸ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಬಿ೧.೬೧೭.೨ ರೂಪಾಂತರಿ ಭಾರತದಲ್ಲಿ ಮೊದಲು ಪತ್ತೆಯಾಗಿದ್ದು, ಪಬ್ಲಿಕ್ ಹೆಲ್ತ್ ಇಂಗ್ಲೆAಡ್ (ಪಿಹೆಚ್‌ಇ) ಕೋವಿಡ್ ರೂಪಾಂತರ (ವಿಒಸಿ) ನಿಯಮಿತ ವಿಶ್ಲೇಷಣೆ ನಡೆಸುತ್ತಿದೆ. ಇತ್ತೀಚಿನ ವಿಶ್ಲೇಷಣೆಯಲ್ಲಿ ಫಿಜರ್/ಬಯೋಎನ್‌ಟೆಕ್ ಲಸಿಕೆ ಎರಡು ಡೋಸ್ ಪಡೆದರೆ ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ಶೇ. ೯೬ರಷ್ಟು ಪರಿಣಾಮಕಾರಿಯಾಗಿದ್ದರೆ, ಆಕ್ಸ್ಫರ್ಡ್/ಅಸ್ಟಾçಜೆನೆಕಾ ಲಸಿಕೆ ಎರಡು ಡೋಸ್‌ನಿಂದ ಆಸ್ಪತ್ರೆಗೆ ದಾಖಲು ವಿರುದ್ಧ ಶೇ. ೯೨ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ. ಈ ಅಂಕಿಅAಶಗಳನ್ನು ಆಲ್ಫಾ ರೂಪಾಂತರದಿAದ ಆಸ್ಪತ್ರೆಗೆ ದಾಖಲಿಸುವ ಲಸಿಕೆ ಪರಿಣಾಮಕಾರಿತ್ವದೊಂದಿಗೆ ಹೋಲಿಸಬಹುದಾಗಿದೆ. ಇದನ್ನು ಮೊದಲು ಇಂಗ್ಲೆAಡ್‌ನ ಕೆಂಟ್ ಪ್ರದೇಶದಲ್ಲಿ ಗುರುತಿಸಲಾಗಿದೆ. ಈ ಹಿಂದೆ ಇಂಗ್ಲೆAಡ್‌ನಲ್ಲಿ ರೂಪಾಂತರಿ ತೀವ್ರವಾಗಿ ಹರಡಿತ್ತು. ರೂಪಾಂತರಗಳ ವಿರುದ್ಧ ಎರಡು ಡೋಸ್‌ಗಳು ಪರಿಣಾಮಕಾರಿ ಎಂಬುದು ಸ್ಪಷ್ಟವಾಗಿದೆ ಎಂದು ಯು.ಕೆ. ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ಹೇಳಿದರು. ಬ್ರಿಟನ್‌ನಲ್ಲಿ ವ್ಯಾಕ್ಸಿನೇಷನ್ ಕಾರ್ಯಕ್ರಮವು ವೇಗದಲ್ಲಿ ಮುಂದುವರೆದಿದೆ. ಈಗಾಗಲೇ ಸಾವಿರಾರು ಜೀವಗಳನ್ನು ಉಳಿಸಿದೆ. ಈ ಸಾಂಕ್ರಾಮಿಕ ರೋಗದಿಂದ ಹೊರಬರಲು ಇದು ನಮ್ಮ ಮಾರ್ಗವಾಗಿದೆ. ೨೫ ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ತಮ್ಮ ಉಚಿತ ಡೋಸ್‌ಗಳನ್ನು ಕಾಯ್ದಿರಿಸುವಂತೆ ಒತ್ತಾಯಿಸಿದರು. ಇತ್ತೀಚಿನ ಪಿಹೆಚ್‌ಇ ಮಾಹಿತಿ ಪ್ರಕಾರ ಡೆಲ್ಟಾ ರೂಪಾಂತರದ ೧೪,೦೧೯ ಪ್ರಕರಣಗಳು ವರದಿಯಾಗಿವೆ. ಅವರಲ್ಲಿ ೧೬೬ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಏಪ್ರಿಲ್ ೧೨ ಮತ್ತು ಜೂನ್ ೪ರ ನಡುವೆ, ಇಂಗ್ಲೆAಡ್‌ನಲ್ಲಿ ತುರ್ತು ಆಸ್ಪತ್ರೆ ದಾಖಲಾತಿಗಳನ್ನು ಗಮನಿಸುತ್ತಿದ್ದಾರೆ. ಆಲ್ಫಾಗೆ ಹೋಲಿಸಿದರೆ ಡೆಲ್ಟಾ ರೂಪಾಂತರದಿAದ ರೋಗಲಕ್ಷಣದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಒಂದು ಡೋಸ್ ಶೇ. ೧೭ರಷ್ಟು ಕಡಿಮೆ ಪರಿಣಾಮಕಾರಿಯಾಗಿದೆ ಎಂದು ಪಿಹೆಚ್‌ಇ ಈ ಹಿಂದೆ ಪುರಾವೆಗಳನ್ನು ಪ್ರಕಟಿಸಿತ್ತು. ಆದರೆ ಎರಡು ಡೋಸ್‌ಗಳ ನಂತರ ಕೇವಲ ಒಂದು ಸಣ್ಣ ವ್ಯತ್ಯಾಸವಿದೆ. ಲಸಿಕೆಗಳು ಡೆಲ್ಟಾ ರೂಪಾಂತರದಿAದ ಆಸ್ಪತ್ರೆಗೆ ದಾಖಲು ಮಾಡುವುದರ ವಿರುದ್ಧ ಗಮನಾರ್ಹ ರಕ್ಷಣೆ ನೀಡುತ್ತವೆ ಎಂದು ಈ ಭಾರಿ ಮಹತ್ವದ ಸಂಶೋಧನೆಗಳು ದೃಢಪಡಿಸುತ್ತವೆ ಎಂದು ಪಿಹೆಚ್‌ಇ ರೋಗನಿರೋಧಕ ವಿಭಾಗದ ಮುಖ್ಯಸ್ಥ ಡಾ. ಮೇರಿ ರಾಮ್‌ಸೆ ಹೇಳಿದ್ದಾರೆ. ಹೀಗಾಗಿ ಎಲ್ಲರೂ ಎರಡೂ ಡೋಸ್ ಪಡೆಯುವುದು, ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಎಲ್ಲಾ ರೂಪಾಂತರಗಳ ವಿರುದ್ಧ ಗರಿಷ್ಠ ರಕ್ಷಣೆ ಪಡೆಯಲು ಅತ್ಯಗತ್ಯ ಎಂದು ಮೇರಿ ರಾಮ್ಸೆ ತಿಳಿಸಿದ್ದಾರೆ.

ಸಂಚಾರಿ ವಿಜಯ್ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸAಸ್ಕಾರ

ಚಿಕ್ಕಮಗಳೂರು, ಜೂ. ೧೫: ಬೈಕ್ ಅಪಘಾತದಲ್ಲಿ ಮೃತರಾದ ನಟ ಸಂಚಾರಿ ವಿಜಯ್ ಅವರ ಅಂತ್ಯಸAಸ್ಕಾರ ಅವರ ಸ್ವಗ್ರಾಮ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ನೆರವೇರಿತು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯ ಸಮೀಪದಲ್ಲಿರುವ ಸ್ನೇಹಿತ ರಘು ಅವರ ತೋಟದಲ್ಲಿ ಸಂಚಾರಿ ವಿಜಯ್ ಅವರ ಅಂತ್ಯಸAಸ್ಕಾರವನ್ನು ನೆರವೇರಿಸಲಾಯಿತು. ವೀರಶೈವ ಲಿಂಗಾಯತ ಸಂಪ್ರದಾಯದAತೆ ಅಂತ್ಯಸAಸ್ಕಾರ ನೆರವೇರಿಸಲಾಗಿದ್ದು, ಕುಪ್ಪೂರು ಯತೀಶ್ವರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಶ್ರೀಗಳ ನಿರ್ದೇಶನದಂತೆ ವಿಜಯ್ ಅವರ ಸಹೋದರರು ಅಂತಿಮ ವಿಧಿವಿಧಾನ ನೆರವೇರಿಸಿದರು. ಇದಕ್ಕೂ ಮೊದಲು ರಾಜ್ಯ ಸರ್ಕಾರದ ವತಿಯಿಂದ ನಟ ಸಂಚಾರಿ ವಿಜಯ್‌ಗೆ ಪೊಲೀಸ್ ಗೌರವ ನೀಡಲಾಯಿತು. ಸಮಾಧಿ ಸ್ಥಳದಲ್ಲಿ ಪೊಲೀಸರು ಮೂರು ಸುತ್ತು ಗುಂಡು ಹಾರಿಸುವ ಮೂಲಕ ಅಂತಿಮ ವಿದಾಯ ಹೇಳಿದರು. ಸಮಾಧಿ ಸ್ಥಳದಲ್ಲೇ ಸ್ಥಳೀಯ ಸ್ನೇಹಿತರು ಮತ್ತು ಬಂಧು ಮಿತ್ರರಿಗೆ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕೋವಿಡ್ ನಿರ್ಬಂಧದ ಹೊರತಾಗಿಯೂ ನೂರಾರು ಮಂದಿ ಸಮಾಧಿ ಸ್ಥಳಕ್ಕೆ ಬಂದು ವಿಜಯ್ ಅವರ ಅಂತಿಮ ದರ್ಶನ ಪಡೆದರು.

ಕಣ್ಣೂರು-ಹುಬ್ಬಳ್ಳಿ ಇಂಡಿಗೋ ವಿಮಾನ ಟೈರ್ ಸ್ಫೋಟ

ಹುಬ್ಬಳ್ಳಿ, ಜೂ. ೧೫: ಕೇರಳ ರಾಜ್ಯದ ಕಣ್ಣೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಇಂಡಿಗೋ ವಿಮಾನದ ಟೈರ್ ಲ್ಯಾಂಡಿAಗ್ ವೇಳೆ ಸ್ಫೋಟಗೊಂಡಿದ್ದು, ಪೈಲಟ್‌ಗಳ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಕೇರಳ ರಾಜ್ಯದ ಕಣ್ಣೂರಿನಿಂದ ಸೋಮವಾರ ರಾತ್ರಿ ೮.೩೦ಕ್ಕೆ ಬಂದ ಇಂಡಿಗೋ ವಿಮಾನ ೬ಇ-೭೯೭೯ ಹಾರ್ಡ್ ಲ್ಯಾಂಡಿAಗ್ (ಟೈರ್‌ನಲ್ಲಿ ಗಾಳಿ ಕಡಿಮೆ ಅಥವಾ ಅಡ್ಡವಾಗಿ ವೇಗವಾಗಿ ಬೀಸಿದ ಗಾಳಿ) ಆಗಿದೆ. ಈ ವೇಳೆ ಟೈರ್ ರನ್‌ವೇ ಮೇಲೆ ಸ್ಪರ್ಶ ಮಾಡುತ್ತಿದ್ದಂತೆಯೇ ಸ್ಫೋಟಗೊಂಡಿದೆ. ಈ ವೇಳೆ ವಿಮಾನ ಕೆಲ ಕ್ಷಣಗಳ ಕಾಲ ಆಯ ತಪ್ಪಿದ್ದು, ಕೂಡಲೇ ಅಪಾಯದ ಮುನ್ಸೂಚನೆ ಅರಿತ ಪೈಲಟ್‌ಗಳು ವಿಮಾನವನ್ನು ತುರ್ತು ಲ್ಯಾಂಡಿAಗ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪೈಲಟ್ ಮೊದಲು ರನ್‌ವೇದಲ್ಲಿ ಇಳಿಸಲು ಪ್ರಯತ್ನಿಸಿದ್ದಾನೆ. ಆಗದಿದ್ದಾಗ ಎರಡನೇ ಬಾರಿ ಇಳಿಸಲು ಯತ್ನಿಸಿದಾಗ ಟಾಯರ್ ಬ್ಲಾಸ್ಟ್ ಆಗಿದೆ ಎಂದು ಮೂಲಗಳು ತಿಳಿಸಿವೆ. ವಿಮಾನದಲ್ಲಿ ಏಳು ಜನರು ಪ್ರಯಾಣಿಸುತ್ತಿದ್ದರು. ಅವರು ಸುರಕ್ಷಿತವಾಗಿದ್ದಾರೆ. ಈ ವಿಮಾನ ೧೮ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ತೆರಳಬೇಕಾಗಿತ್ತು. ಘಟನೆಯಿಂದಾಗಿ ಬೆಂಗಳೂರು ಪ್ರಯಾಣ ರದ್ದುಪಡಿಸಲಾಗಿದೆ. ಬಳಿಕ ಸುಮಾರು ೨ ಗಂಟೆ ಹೊತ್ತಿನಲ್ಲಿ ವಿಮಾನವನ್ನು ರನ್‌ವೇಯಿಂದ ತೆರವುಗೊಳಿಸಿ, ವಿಮಾನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಟೈರ್‌ನಲ್ಲಿ ಗಾಳಿ ಕಡಿಮೆಯಾಗಿದ್ದ ಪರಿಣಾಮ ಒಂದೆಡೆ ಒತ್ತಡ ಉಂಟಾಗಿತ್ತು. ಇದರಿಂದ ಹಾರ್ಡ್ ಲ್ಯಾಂಡಿAಗ್ ಆಗಿದೆ. ವಿಮಾನ ಹಾರಾಟ ರದ್ದಾಗಿದ್ದರಿಂದ ಕಂಪೆನಿಯವರು ಅವರಿಗೆಲ್ಲ ಪರ್ಯಾಯ ವ್ಯವಸ್ಥೆ ಮೂಲಕ ಬೆಂಗಳೂರಿಗೆ ಕಳುಹಿಸಿದರು ಎಂದು ಮೂಲಗಳು ತಿಳಿಸಿವೆ.