ಚೆಟ್ಟಳ್ಳಿ, ಜೂ. ೧೫: ಹುಳಿಸಿಹಿ ಮಿಶ್ರಣ ರುಚಿಯ ಬಾಯಲ್ಲಿ ನೀರೂರಿಸುವ ಕೊಡಗಿನ ಕಿತ್ತಳೆಗೆ ಈಗ ಫಸಲಿನ ಸಮಯ. ದೇಶ ವಿದೇಶ ಗಳಲ್ಲೂ ಕೂರ್ಗ್ ಆರೆಂಜ್ ಎಂದೇ ಹೆಸರು ಗಳಿಸಿರುವ ಕೊಡಗಿನ ಕಿತ್ತಳೆ ಹಣ್ಣು ಕೊರೊನಾದ ನಡುವೆ ಹಣ್ಣಾಗಿ ಕುಯ್ಲಿಗೆ ಬಂದಿದೆ. ಉತ್ತಮ ಬೆಲೆ ಸಿಗುತ್ತದೆಂಬ ನಿರೀಕ್ಷೆಯಲ್ಲಿದ್ದ ಬೆಳೆಗಾರನಿಗೆ ಬೇಸರ ಮೂಡಿಸಿದೆ.

ಇಲ್ಲಿನ ಮಣ್ಣಿನ ಗುಣಕ್ಕೆ ಹೊಂದಿಕೊAಡAತಹ ಕಿತ್ತಳೆ ಬಹಳ ಹಿಂದಿನಿAದಲೂ ಹೆಸರುವಾಸಿ. ಮೂರನೇ ಮುಖ್ಯ ಲಾಭದಾಯಕ ಬೆಳೆ ಎಂದೆನಿಸಿ ಕೊಂಡ ಕಿತ್ತಳೆಯನ್ನು ಬ್ರಿಟಿಷರ ಕಾಲದಿಂದಲೂ ಕೊಡಗಿನಲ್ಲಿ ನೆಟ್ಟು ಬೆಳೆಸಲಾಗಿದೆ. ದಕ್ಷಿಣ ಕೊಡಗಿನ ಬಾಳೆಲೆ, ತಿತಿಮತಿ, ಕಾನೂರು, ಕುಟ್ಟ ಮೊದಲಾದ ಸ್ಥಳಗಳ ಮಣ್ಣಿನ ಸಾರವು ಕಿತ್ತಳೆಗೆ ಪೂರಕವಾಗಿರುವ ಕಾರಣ ಈ ಭಾಗದ ಕಿತ್ತಳೆಗೆ ಭಾರೀ ಬೇಡಿಕೆ ಇತ್ತು.

ಕೊಡಗಿಗಿಂತ ಇತರೆಡೆ ಹೆಚ್ಚಿದ ಬೇಡಿಕೆ...

ನಾಗ್‌ಪುರ ಕಿತ್ತಳೆ ಹಾಗೂ ಕೊಡಗಿನ ಕಿತ್ತಳೆಗೆ ಎಲ್ಲೆಡೆ ಮಾರುಕಟ್ಟೆಯಲ್ಲಿ ಭಾರೀ ಹೆಸರಿದೆ. ಕೊಡಗಿನಲ್ಲೀಗ ಟನ್‌ಗಟ್ಟಲೆ ಕಿತ್ತಳೆಯನ್ನು ಬೆಳೆಸಲಾಗುತ್ತಿದ್ದು, ಲಾರಿ ಹಾಗೂ ಪಿಕಪ್‌ಗಳಲ್ಲಿ ತುಂಬಿ ಬೆಂಗಳೂರು ಹಾಗೂ ಮೈಸೂರಿನ ಮಾರುಕಟ್ಟೆಗಳಿಂದ ಹಿಡಿದು ಪಕ್ಕದ ರಾಜ್ಯವಾದ ಕೇರಳದಲ್ಲೂ ಕೊಡಗಿನ ಕಿತ್ತಳೆಗೆ ಭಾರೀ ಬೇಡಿಕೆ ಇದೆ. ಕಿತ್ತಳೆ ವ್ಯಾಪಾರಕ್ಕೂ ಕೇರಳಕ್ಕೂ ಹಳೆಕಾಲದ ನಂಟಿದ್ದು, ಹಿಂದಿನ ಕಾಲದಲ್ಲಿ ಕಿತ್ತಳೆಹಣ್ಣಿನ ಸಮಯದಲ್ಲಿ ನೇರವಾಗಿ ಕೇರಳದಲ್ಲಿ ಮಾರಾಟ ಮಾಡಿ ಬರುತ್ತಿದ್ದ ಬಗ್ಗೆ ಹಿರಿಯರು ಹೇಳುತ್ತಾರೆ. ಜೂನ್ ತಿಂಗಳ ಪ್ರಾರಂಭ ದಿಂದಲೇ ಕೊಡಗಿನ ಕಿತ್ತಳೆ ಕುಯ್ಲಿಗೆ ಬಂದಿದ್ದು, ಕಾರ್ಮಿಕರ ಕೊರತೆ ಹಾಗೂ ಹಲವು ಸಮಸ್ಯೆಗಳಿಂದ ಹೆಚ್ಚಿನೆಡೆ ವರ್ಷದ ಫಸಲನ್ನು ಗುತ್ತಿಗೆ ನೀಡಲಾಗಿದೆ. ಕೊಡಗಿನ ಹಲವರು ಗುತ್ತಿಗೆ ಪಡೆದು ಕುಯ್ಲು ಮಾಡಿದ ಕಿತ್ತಳೆಯನ್ನು ಗ್ರೇಡಿಂಗ್ ಮಾಡಿ ಹೆಚ್ಚಿನ ಬೆಲೆ ಸಿಗುವುದೆಂಬ ಕಾರಣಕ್ಕೆ ಕೇರಳಕ್ಕೆ ಹೆಚ್ಚಾಗಿ ಕೊಂಡೊಯ್ಯ ಲಾಗುತ್ತಿದೆ. ಮೈಸೂರು, ಬೆಂಗಳೂರಿನ ಮಾರುಕಟ್ಟೆಗೂ ಕೊಡಗಿನ ಕಿತ್ತಳೆ ತಲುಪುತ್ತಿದೆ.

ಮೂಲಸ್ಥಾನದಲ್ಲೇ ಬೇಡಿಕೆ ಇಲ್ಲ..

ಕೊಡಗಿನ ಕಿತ್ತಳೆ ಎಂದು ಹೆಮ್ಮೆಯಿಂದ ಹೇಳಿಕೊಂಡರೂ ಕೊಡಗಿನ ಮಾರುಕಟ್ಟೆಯಲ್ಲೋ, ರಸ್ತೆ ಬದಿಯಲ್ಲೋ, ವಾಹನದಲ್ಲೋ ತುಂಬಿ ಹಣ್ಣನ್ನು ಮಾರಾಟ ಮಾಡುತ್ತಿದ್ದರೂ, ಬೆಲೆ ಹೆಚ್ಚಿದೆ ಎಂದು ಖರೀದಿ ಸುವವರೇ ಇಲ್ಲ. ಕೊಡಗಿಗೆ ಬರುವ ಪ್ರವಾಸಿಗರು ಎಷ್ಟೇ ಬೆಲೆಯಾದರೂ ಕೊಡಗಿನ ಕಿತ್ತಳೆಗೆ ಮುಗಿಬೀಳುತ್ತಾರೆ. ಕಳೆದ ಬಾರಿಯಿಂದ ಕೊರೊನಾ ವ್ಯಾಪಕ ಹರಡಿದ ಪ್ರಭಾವ ಪ್ರವಾಸಿಗರು ಕಡಿಮೆಯಾಗಿ ಖರೀದಿಸುವವರೇ ಇರಲಿಲ್ಲ. ಈ ಬಾರಿಯೂ ಅದೇ ಕಥೆ. ಕಿತ್ತಳೆ ಬೆಳೆಯ ಸಮಯದಲ್ಲಿ ವ್ಯಾಪಾರದಿಂದ ಬದುಕುಕಟ್ಟಿ ಕೊಂಡವರಿಗೂ ಏನಿಲ್ಲ.

ಇತ್ತೀಚಿನ ದಿನಗಳಲ್ಲಿ ಕೊಡಗಿನ ಕಿತ್ತಳೆ ಅವನತಿಯತ್ತ ಸಾಗುತ್ತಿರುವ ಬಗ್ಗೆ ಬೆಳೆಗಾರರಲ್ಲಿ ಆತಂಕ ಉಂಟಾಗಿರುವಾಗ ಇಬ್ನಿವಳವಾಡಿ ಗ್ರಾಮದ ಮಾದರಿ ಬೆಳೆಗಾರ ಪೊನ್ನಚೆಟ್ಟಿರ ಸುರೇಶ್ ಸುಬ್ಬಯ್ಯ ತಮ್ಮ ತೋಟದಲ್ಲಿ ತಂದೆಯವರ ಕಾಲದಿಂದ ಹಿಡಿದು ಇವರ ಕಾಲದಲ್ಲೂ ಕಿತ್ತಳೆ ಬೆಳೆಗೆ ಒತ್ತುನೀಡಿ ಸಾವಿರ ಗಿಡಕ್ಕಿಂತಲೂ ಹೆಚ್ಚು ಕೊಡಗಿನ ಕಿತ್ತಳೆ ತಳಿಯನ್ನು ಬೆಳೆದು ಮಾದರಿಯಾಗಿದ್ದಾರೆ. ಕಾಲಕಾಲಕ್ಕೆ ಉತ್ತಮ ಪೋಷಕಾಂಶ, ಮಿತವಾದ ರಾಸಾಯನಿಕ ಗೊಬ್ಬರ, ಅಗತ್ಯ ವಿದ್ದಾಗ ಔಷಧಿ ಸಿಂಪಡಣೆ ಮಾಡುವ ಮೂಲಕ ವರ್ಷದಿಂದ ವರ್ಷಕ್ಕೆ ಉತ್ತಮ ಬೆಳೆಯನ್ನು ಬೆಳೆದು ಕೊಡಗಿನ ಕಿತ್ತಳೆಯಿಂದ ಲಾಭ ಗಳಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಕೇರಳದ ಕ್ಯಾಲಿಕಟ್‌ನ ಮಾರುಕಟ್ಟೆಗೆ ನೇರವಾಗಿ ವ್ಯಾಪಾರ ಮಾಡುತ್ತಿದ್ದರು.

೧೯೪೨ರಲ್ಲಿ ಪಾಲಿಬೆಟ್ಟದಲ್ಲಿ ಕಿತ್ತಳೆ ಹಣ್ಣಿನ ಸಂರಕ್ಷಣೆ ಹಾಗೂ ತಳಿ ಅಭಿವೃದ್ಧಿಯ ಮುಖ್ಯ ಉದ್ದೇಶದಿಂದ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಯಾಗಿದೆಯಾದರೂ ಫಲಕಾರಿಯಾಗಲಿಲ್ಲ. ಕೃಷಿ ತಜ್ಞರ ಸಲಹೆ ಮೇರೆಗೆ ೧೯೪೭ರಲ್ಲಿ ಚೆಟ್ಟಳ್ಳಿ ಯಲ್ಲಿ ಕಿತ್ತಳೆ ಕೃಷಿ ಸಂಶೋಧನೆಗೆ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಸ್ಥಾಪನೆ ಗೊಂಡಿತು.

ನಂತರ ಗೋಣಿಕೊಪ್ಪದಲ್ಲೂ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು. ಜಗತ್ತಿನ ವಿವಿಧ ಕಿತ್ತಳೆ ತಳಿಗಳನ್ನು ಸಂಗ್ರಹಿಸಿ ತಳಿ ಅಭಿವೃದ್ಧಿಪಡಿಸಿತು. ವಿವಿಧ ರೋಗ ಹಾಗೂ ಕೀಟ ಬಾಧೆಗಳ ನಡುವೆ ಅವನತಿಯತ್ತ ಸಾಗಿದ ಕೊಡಗಿನ ಕಿತ್ತಳೆ ಗಿಡಗಳು ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಕೈಜೋಡಿಸಿದರ ಫಲವಾಗಿ ಎಲ್ಲೆಡೆ ಕಿತ್ತಳೆ ಗಿಡ ಗಳನ್ನು ಮತ್ತೊಮ್ಮೆ ಬೆಳೆಯುವಂತಾಯಿತು.

- ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ.