ಮಡಿಕೇರಿ, ಜೂ. ೧೪: ಕೊಡಗು ಜಿಲ್ಲಾ ಹೋಂ ಸ್ಟೇ ಅಸೋಸಿಯೇಷನ್ ಕುಟುಂಬ ಹಾಗೂ ಸಿಬ್ಬಂದಿ ವರ್ಗಕ್ಕೆ ಇಂದು ಇಲ್ಲಿ ಲಸಿಕಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಆರೋಗ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು ಇನ್ನೂರು ಮಂದಿ ಲಸಿಕೆ ಪಡೆದರು.
ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ. ಅನಂತಶಯನ, ಪದಾಧಿಕಾರಿಗಳಾದ ಕೆ.ಎಂ. ಕರುಂಬಯ್ಯ, ಮೋಂತಿ ಗಣೇಶ್, ಹೇಂ ಮಾದಪ್ಪ, ಸತೀಶ್ ರೈ, ರಘು ಮಾದಪ್ಪ ಹಾಗೂ ಇತರರು ಹಾಜರಿದ್ದರು. ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕ ಚೇತನ್ ಮತ್ತು ಸಿಬ್ಬಂದಿ, ಆರೋಗ್ಯ ಇಲಾಖೆಯ ವೈದ್ಯೆ ಡಾ|| ಶಿಲ್ಪ, ವಿದ್ಯಾ, ಅತುಲ್, ದೇವರಾಜ್, ಕೃತಿಕ ಹಾಗೂ ಚೇತನ ಉಪಸ್ಥಿತರಿದ್ದರು.