ಮಡಿಕೇರಿ, ಜೂ. ೧೪ : ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ವತಿಯಿಂದ ಕೊಡಗಿನ ಲೇಖಕ ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆಯ ಅನಾವರಣಗೊಳಿಸಲು ಅವಕಾಶ ಕಲ್ಪಿಸುವ ಸಲುವಾಗಿ ಗೂಗಲ್ ಮೀಟ್ ಮೂಲಕ ಒಂದು ವಾರ ಕಾಲ ಏರ್ಪಡಿಸಿರುವ ಕೊರೊನಾ ಮರೆಯಲು ಭಾವಗೀತಾ ಸಪ್ತಾಹ ಭಾವಗೀತೆ ಗಾಯನ ಕಾರ್ಯಕ್ರಮಕ್ಕೆ ಭಾನುವಾರ ಸಂಜೆ ಚಾಲನೆ ನೀಡಲಾಯಿತು.

ಭಾವಗೀತೆಯ ಕುರಿತು ಜಿಲ್ಲೆಯ ಹಿರಿಯ ಸಾಹಿತಿ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಕವಿತಾ ರೈ ಮಾತನಾಡಿ, ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಲೇಖಕರ ಬಳಗವು ಜಿಲ್ಲೆಯ ಗಾಯಕರಿಗೆ ನಿರಂತರವಾಗಿ ಭಾವಗೀತೆ , ಜಾನಪದ ಗೀತೆ ಗಾಯನ ಸೇರಿದಂತೆ ಉಪಯುಕ್ತ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಮಾನಸಿಕವಾಗಿ ಮನೋಸ್ಥೆöÊರ್ಯ ಒದಗಿಸುತ್ತಿದೆ. ಇಂತಹ ಗಾಯನ ಸ್ಪಂದನ ಕಾರ್ಯಕ್ರಮವು ಶ್ಲಾಘನೀಯವಾದುದು ಎಂದರು.

ಇAದು ನಾವು ಆಧುನಿಕ ಜಗತ್ತಿನಲ್ಲಿ ಮೈಕ್ರೋ ಮತ್ತು ನ್ಯಾನೋ ತಂತ್ರಜ್ಞಾನಕ್ಕೆ ಒಳಗಾಗುತ್ತಿದ್ದರೂ ನಮ್ಮ ಜೀವನದ ಜಂಜಾಟ ಮತ್ತು ಬದುಕು ಕುರಿತಂತೆ ಭಾವಗೀತೆಗಳು ವ್ಯಕ್ತಪಡಿಸುವ ಭಾವನೆಗಳು ನಮ್ಮ ಮನಸ್ಸಿಗೆ ಮುದ ನೀಡುತ್ತವೆ ಎಂದರು.

ಭಾವಗೀತೆ ಹಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲೆಯ ಹಿರಿಯ ಗಾಯಕ, ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ಕೊರೊನಾ ಸಂಕಷ್ಟದ ಇಂತಹ ಸನ್ನಿವೇಶದಲ್ಲಿ ಲೇಖಕರ ಬಳಗವು ಜನರ ಸಕಾರಾತ್ಮಕ ಭಾವನೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಗೂಗಲ್ ಮೀಟ್ ಮೂಲಕ ಭಾವಗೀತೆ ಗಾಯನ ಕಾರ್ಯಕ್ರಮ ಸಂಘಟಿಸಿರುವುದು ಉತ್ತಮವಾದ ಕಾರ್ಯ. ಜನರ ಭಾವನೆಗಳಿಂದ ರೂಪುಗೊಂಡ ಭಾವಗೀತೆಯು ಮನಸ್ಸಿಗೆ ಮುದ ನೀಡುತ್ತದೆ ಎಂದರು.

ಕುವೆಂಪು ರಚಿತ ಆನಂದಮಯ ಈ ಜಗ ಹೃದಯ ಎಂಬ ಭಾವಗೀತೆಯನ್ನು ಹಾಡುವ ಮೂಲಕ ಜಿ.ಚಿದ್ವಿಲಾಸ್ ಭಾವಗೀತೆ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಲೇಖಕರ ಬಳಗದ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಕೊರೊನಾದ ಭೀಕರ ಸೋಂಕಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನರು ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವವರಿಗೆ ಕೊರೊನಾ ಮರೆಯುವ ಮೂಲಕ ಕೊರೊನಾ ಮುಕ್ತ ಸಮಾಜ ನಿರ್ಮಾಣದ ಉದ್ದೇಶ ದಿಂದ ಆರಂಭಿಸಿರುವ ಭಾವಗೀತೆ ಗಾಯನ ಕಾರ್ಯಕ್ರಮಕ್ಕೆ ಅಭೂತ ಪೂರ್ವವಾಗಿ ೧೩೦ ಮಂದಿ ಗಾಯಕರು ನೋಂದಾ ಯಿಸಿಕೊಂಡಿದ್ದು, ಒಂದು ವಾರ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿದಿನ ೧೮ ಮಂದಿ ಗಾಯಕರು ಭಾವಗೀತೆ ಹಾಡುತ್ತಿದ್ದಾರೆ ಎಂದರು.

ಬಳಗದ ಸಲಹೆಗಾರ ಟಿ.ಪಿ. ರಮೇಶ್, ಉಪಾಧ್ಯಕ್ಷ ಎಂ.ಇ. ಮೊಹಿದ್ದೀನ್, ನಿರ್ದೇಶಕರಾದ ಬಿ.ಎ. ಷಂಶುದ್ದೀನ್, ಎಸ್.ಐ. ಮುನಿರ್ ಅಹ್ಮದ್, ಬಿ.ಎನ್. ಮನುಶೆಣೈ, ಲಿಖಾಯತ್ ಆಲಿ, ಲೋಕನಾಥ್ ಅಮೆಚೂರ್, ಟಿ.ಜಿ.ಪ್ರೇಮಕುಮಾರ್, ಉಮೇಶ್ ಭಟ್, ಗಾಯಕರಾದ ಡಾ ಜೆ.ಸೋಮಣ್ಣ, ಕೆ.ಎ.ಶ್ವೇತ ಇತರರು ಇದ್ದರು.

ಬಳಗದ ಕಾರ್ಯದರ್ಶಿ ವಿಲ್ಫೆçಡ್‌ಕ್ರಾಸ್ತಾ ಸ್ವಾಗತಿಸಿದರು. ಬಳಗದ ಉಪಾಧ್ಯಕ್ಷೆ ಪುದಿನೆರವನ ರೇವತಿ ಕಾರ್ಯಕ್ರಮ ನಿರ್ವಹಿಸಿದರು. ಮೊದಲ ದಿನ ೧೭ ಮಂದಿ ಗಾಯಕರು ಭಾವಗೀತೆ ಹಾಡುವ ಮೂಲಕ ಮೆಚ್ಚುಗೆ ಪಡೆದರು. ತಾ.೧೩ ರಂದು ಆರಂಭಗೊAಡ ಈ ಗಾಯನ ಕಾರ್ಯಕ್ರಮವು ತಾ.೧೯ ರ ವರೆಗೆ ಒಂದು ವಾರ ಕಾಲ ನಡೆಯಲಿದೆ.