ವೀರಾಜಪೇಟೆ, ಜೂ. ೧೪: ವೀರಾಜಪೇಟೆಯ ಪಟ್ಟಣ ಪಂಚಾಯಿತಿಯ ಮತ್ಸö್ಯಭವನದಲ್ಲಿ ಕೊಳೆತ ಹಸಿಮೀನು ಮಾರಾಟ ಮಾಡಿದ್ದಾರೆಂಬ ಆರೋಪ ಮೇರೆ ಇಂದು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಶ್ರೀಧರ್ ಹಾಗೂ ಆರೋಗ್ಯಾಧಿಕಾರಿ ಇಂದು ಹಸಿ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೇರಳದಿಂದ ಮಾರುಕಟ್ಟೆಗೆ ಮಾರಾಟಕ್ಕೆ ಬಂದ ಹಸಿ ಮೀನಿನ ಪೆಟ್ಟಿಗೆಗಳನ್ನು ಪರಿಶೀಲಿಸಿದಾಗ ಎಲ್ಲ ಅಪ್ಪಟ ಮೀನು ಆಗಿದ್ದು ಕೇರಳದ ಕರಾವಳಿಯಲ್ಲಿ ಮೀನು ಪೆಟ್ಟಿಗೆಗೆ ಮೀನನ್ನು ಜೋಡಿಸುವಾಗ ಕೆಲವು ಮೀನುಗಳು ಅಪ್ಪಚ್ಚಿಯಾಗಿರುವ ಸಾಧ್ಯತೆ ಕಂಡು ಬಂದಿದೆ. ಹಸಿ ಮೀನು ಮಾರಾಟ ಮಳಿಗೆಯಲ್ಲಿ ಯಾವುದೇ ಕೊಳೆತ ಮೀನು ಕಂಡುಬAದಿಲ್ಲ ಎಂದು ಶ್ರೀಧರ್ ತಿಳಿಸಿದರು.