ವೀರಾಜಪೇಟೆ, ಜೂ. ೧೪: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಐದನೇ ಬ್ಲಾಕ್‌ನ ನಿವಾಸಿಗಳಲ್ಲಿ ಅತೀ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳು ತ್ತಿರುವ ಕಾರಣ ಇಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಘಟಕದ ೮ ಮಂದಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ನಿವಾಸಿಗಳಿಗೆ ಕೋವಿಡ್ ಟೆಸ್ಟ್ (ಆರ್.ಟಿ.ಪಿ.ಸಿ.ಆರ್) ನಡೆಸಿದರು. ಪಟ್ಟಣ ಪಂಚಾಯಿತಿಯ ಐದನೇ ಬ್ಲಾಕ್‌ನಲ್ಲಿ ನಿರಂತರವಾಗಿ ಕೊರೊನಾ ಸೋಂಕು ಹರಡುತ್ತಿರಬಹುದೆಂಬ ಸಂಶಯದಿAದ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಿ ಕ್ರಮಕೈಗೊಳ್ಳುವುದಾಗಿ ವಾರ್ಡ್ನ ಸದಸ್ಯ ಎಸ್.ಹೆಚ್. ಮತೀನ್ ತಿಳಿಸಿದ್ದು ಇಂದು ಆರಂಭಿಕ ಹಂತದಲ್ಲಿ ೯೦ ಮಂದಿ ನಿವಾಸಿಗಳನ್ನು ಕೊರೊನಾ ಟೆಸ್ಟ್ಗೊಳಪಡಿಸಲಾಗಿದೆ. ಕೊರೊನಾ ರೋಗದ ಲಕ್ಷಣ ಕಂಡುಬAದವರಿಗೆ ತುರ್ತಾಗಿ ಟೆಸ್ಟ್ ಮಾಡಲಾಗುವುದು. ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ಟೆಸ್ಟ್ಗೆ ಅವಕಾಶ ಮಾಡಿಕೊಡಲಾಗುವುದು ಎಂದರು.

ಕೊರೊನಾ ಸೋಂಕು ಹರಡದಂತೆ ಪ್ರತಿಯೊಬ್ಬರು ಮುಂಜಾಗ್ರತೆ ವಹಿಸಿ ಜಾಗೃತರಾಗಬೇಕು, ಕೊರೊನಾ ಸೋಂಕು ಪತ್ತೆ ಹಾಗೂ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆ ಎಲ್ಲ ರೀತಿಯ ಸಹಕಾರ ನೀಡುವುದು ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ತಿಳಿಸಿದರು. ಪಟ್ಟಣದ ನಿವಾಸಿಗಳಿಗೆ ಕೊರೊನಾ ಟೆಸ್ಟ್ನ್ನು ಮುಂದುವರೆಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಕೋರಿದರು.