ಸುಂಟಿಕೊಪ್ಪ, ಜೂ. ೧೪ : ಕೊರೊನಾ ಮಹಾಮಾರಿಯಿಂದ ಜನತೆ ತತ್ತರಿಸಿದ್ದು ಈ ಸಂದರ್ಭದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಪೌರ ಕಾರ್ಮಿಕ ರೊಂದಿಗೆ ಸೇರಿಕೊಂಡು ಕುಡಿಯುವ ನೀರಿನ ಟ್ಯಾಂಕ್ನ್ನು ಸ್ವಚ್ಛಗೊಳಿಸಿ ಶುಚಿತ್ವಕ್ಕೆ ನಾಂದಿ ಹಾಡಿದ್ದಾರೆ. ಮಧುರಮ್ಮ ಬಡಾವಣೆಯ ಗ್ರಾ. ಪಂ.ಗೆ ಸೇರಿದ ಕುಡಿಯುವ ನೀರಿನ ಟ್ಯಾಂಕ್ ಅನೇಕ ತಿಂಗಳಿನಿAದ ಶುಚಿತ್ವಗೊಳಿಸದೆ ಇದ್ದು ಇದನ್ನು ಗಮನಿಸಿದ ಇಲ್ಲಿನ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಕಾರ್ಮಿಕರಾದ ರಂಗಸ್ವಾಮಿ ವಿಶ್ವ ಅವರೊಂದಿಗೆ ಸೇರಿಕೊಂಡು ಸ್ವತಃ ಟ್ಯಾಂಕ್ನ ಒಳಗಡೆ ಇಳಿದು ಪೊರಕೆ ಬ್ರಶ್ ಹಿಡಿದು ಟ್ಯಾಂಕನ್ನು ಸ್ವಚ್ಛಗೊಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಅಭಿಯಾನಕ್ಕೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ದ್ವಿತೀಯ ಪ್ರಜೆ ಸಾಥ್ ನೀಡಿದರು. ಗ್ರಾ.ಪಂ. ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬ ಸಂದೇಶವನ್ನು ಸಾರ್ವಜನಿಕರಿಗೆ ರವಾನಿಸಿದರು. ಈ ಸಂದರ್ಭ ಸದಸ್ಯರಾದ ಬಿ.ಎಂ. ಸುರೇಶ, ವಸಂತಿ, ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ ಇದ್ದರು.