ಮಡಿಕೇರಿ, ಜೂ. ೧೪: ವಿದ್ಯಾರ್ಥಿಗಳು ಜೀವನ ಕೌಶಲ್ಯವನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಡಾ.ನಾಗರತ್ನ ಕೆ.ಎ. ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯ,ಕಾವೇರಿ ಕಾಲೇಜು ಗೋಣಿಕೊಪ್ಪಲು ರಾಷ್ಟಿçÃಯ ಸೇವಾ ಯೋಜನೆ ವತಿಯಿಂದ ಆಯೋಜಿಸಿದ್ದ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗಾಗಿ ಜೀವನ ಕೌಶಲ್ಯ ತರಬೇತಿ ಎಂಬ ಆನ್‌ಲೈನ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಎನ್ ಎಸ್ ಎಸ್ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಅವರು ವಿದ್ಯಾರ್ಥಿಗಳ ಜೀವನದಲ್ಲಿ ಯುವ ಕೌಶಲ್ಯ ಅತ್ಯಂತ ಅವಶ್ಯಕವಾಗಿದ್ದು ಅವುಗಳನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಉತ್ತಮ ಬದುಕು ಸಾಧಿಸಲು ಸಾಧ್ಯ ಎಂದು ತಿಳಿಸಿದರು.

ಬೆಂಗಳೂರಿನ ನಿಮಾನ್ಸ್ ಸಂಸ್ಥೆಯ ಎಪಿಡೀಮಿಯಾಲಜಿ ವಿಭಾಗದ ಜೀವನ ಕೌಶಲ್ಯ ತರಬೇತಿಯ ತರಬೇತುದಾರರು ಹಾಗೂ ಸಹ ಸಂಯೋಜಕಿ ಸ್ವಾತಿ ಸಹನೆ ಅವರು ಮಾತನಾಡಿದರು.

ಯುವ ಸ್ಪಂದನ ಕಾರ್ಯಕ್ರಮದ ಕ್ಷೇತ್ರ ಸಂಪರ್ಕ ಅಧಿಕಾರಿ ವೆಂಕೋಬ ಮಾತನಾಡಿ ಪ್ರತಿ ಜಿಲ್ಲೆಯಲ್ಲಿ ಯುವ ಸ್ಪಂದನ ಕಾರ್ಯಕ್ರಮದ ಮೂಲಕ ಯುವಜನರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾವೇರಿ ಕಾಲೇಜು ಗೋಣಿಕೊಪ್ಪಲಿನ ಎನ್‌ಎಸ್‌ಎಸ್ ಅಧಿಕಾರಿ ಹಾಗೂ ಕೊಡಗು ಜಿಲ್ಲೆಯ ಎನ್.ಎಸ್.ಎಸ್ ನೋಡಲ್ ಅಧಿಕಾರಿ ವನಿತ್ ಕುಮಾರ್ ಎಂ.ಎನ್ ಮಾತನಾಡಿ ವ್ಯಕ್ತಿತ್ವ ಬೆಳವಣಿಗೆ, ಭಾವನಾತ್ಮಕ ಹತೋಟಿ, ಬಿಕ್ಕಟ್ಟು ನಿರ್ವಹಣೆ, ಸಂಬAಧಗಳ ಸುರಕ್ಷತೆ,ಉತ್ತಮ ಸಂಬAಧವನ್ನು ಬೆಳೆಸಿಕೊಳ್ಳಲು ಯುವಜನರು ಯುವ ಜನರಿಂದಲೇ ಪ್ರೇರೇಪಿತರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಯುವ ಸ್ಪಂದನ ಉತ್ತಮ ಕಾರ್ಯಕ್ರಮವಾಗಿದೆ. ಸಹಭಾಗಿತ್ವದಿಂದ ಸಬಲೀಕರಣದ ಕಡೆಗೆ ಗಮನಹರಿಸಬೇಕಾಗಿದೆ ಎಂದು ತಿಳಿಸಿದರು. ವನಿತ್ ಕುಮಾರ್ ಸ್ವಾಗತಿಸಿದರು ಎನ್‌ಎಸ್‌ಎಸ್ ನಾಯಕ ರಂಜಿತ್ ವಂದಿಸಿದರು. ವಸುಂಧರ ಭಾರ್ಗವ್ ಪ್ರಾರ್ಥಿಸಿದರೆ, ದೇಚಮ್ಮ ಎಂ.ಎಸ್ ನಿರೂಪಿಸಿದರು.