ಮಡಿಕೇರಿ, ಜೂ. ೧೪: ಕೊಡಗು ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ಸೋಮವಾರ ಭಾರೀ ಮಳೆಯಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶನಿವಾರದಿಂದ ಬಿರುಸುಗೊಂಡಿದ್ದ ಮಳೆ ಸೋಮವಾರದ ತನಕ ಎಡೆಬಿಡದೆ ಸುರಿಯಿತು. ನಡು ನಡುವೆ ಮಳೆ ಬಿಡುವು ನೀಡಿದರೂ, ಬಿಡುವು ನೀಡಿದ ಕೆಲ ಸಮಯದಲ್ಲಿಯೇ ಮತ್ತೆ ಮಳೆ ಆರ್ಭಟ ಪಡೆದುಕೊಳ್ಳುತ್ತಿತ್ತು. ಪರಿಣಾಮ ಕಾಲುವೆ, ನದಿ, ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಯಿತು. ಲಾಕ್‌ಡೌನ್ ಸಡಿಲಿಕೆ ಇರುವ ಹಿನ್ನೆಲೆ ಬುಧವಾರ ನಗರದಲ್ಲಿ ಮಳೆಗಾಲಕ್ಕೆ ಅಗತ್ಯವಾದ ಕೊಡೆ, ರೈನ್‌ಕೋಟ್, ಶೂ ಖರೀದಿಸಲು ಜನಸಂದಣಿ ಹೆಚ್ಚಾಗಿ ಕಂಡುಬAತು. ಬಟ್ಟೆ, ಚಪ್ಪಲಿ ಖರೀದಿಯಲ್ಲಿ ಜನರು ನಿರತರಾಗಿದ್ದರು.

ಮಳೆಯಿಂದ ಮಂಜು ಹೆಚ್ಚಾಗಿರುವ ಹಿನ್ನೆಲೆ ಮಂಜಿನ ನಗರಿ ಆಕರ್ಷಕವಾಗಿ ಕಣ್ಮನ ಸೆಳೆಯುತಿತ್ತು. ಇದರ ನಡುವೆ ವಾಹನ ದಟ್ಟಣೆ ಮಧ್ಯಾಹ್ನ ೧ ಗಂಟೆಯ ತನಕ ಇತ್ತು. ಮಳೆಯಿಂದಾಗಿ ಅಲ್ಲಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಕುಶಾಲನಗರ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಏರಿಕೆ ಕಂಡು ಬಂದಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಪರಿಣಾಮ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿಯಲ್ಲಿ ಅಂದಾಜು ೭.೫ ಅಡಿಗಳಷ್ಟು ನೀರು ಹೆಚ್ಚಳ ಕಂಡುಬAದಿದೆ. (ಮೊದಲ ಪುಟದಿಂದ) ಕುಶಾಲನಗರ ಪಟ್ಟಣ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗಿನಿಂದಲೇ ಸುರಿದ ಮಳೆಯಿಂದ ಜನರ ಓಡಾಟಕ್ಕೆ ತೊಂದರೆ ಉಂಟಾಗಿತ್ತು. ಲಾಕ್ ಡೌನ್ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಬಂದ ಗ್ರಾಹಕರು ಮಳೆಯಲ್ಲಿ ಓಡಾಡುತ್ತಿದ್ದ ದೃಶ್ಯ ಕಂಡುಬAತು. ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅನಾಹುತ ಸಂಭವಿಸಿರುವುದಿಲ್ಲ ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ. ಮುಂಗಾರು ಪ್ರಮಾಣ ಏರಿಕೆ ಹಿನ್ನಲೆಯಲ್ಲಿ ತಗ್ಗು ಪ್ರದೇಶದ ಬಡಾವಣೆಯ ನಿವಾಸಿಗಳು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸೋಮವಾರಪೇಟೆ : ಕಳೆದ ಮೂರು ದಿನಗಳಿಂದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ವರ್ಷಾಧಾರೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಗ್ರಾಮೀಣ ಭಾಗದಲ್ಲೂ ಮಳೆಯ ಆರ್ಭಟ ಮುಂದುವರೆದಿದ್ದು, ಸಣ್ಣಪುಟ್ಟ ಕೆರೆಕಟ್ಟೆ, ಹೊಳೆ ತೋಡುಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ.

ಭಾರೀ ಮಳೆಗೆ ಗ್ರಾಮೀಣ ಭಾಗದ ರಸ್ತೆಗಳು ಇನ್ನಷ್ಟು ಹದಗೆಟ್ಟಿದ್ದು, ಸಂಚಾರಕ್ಕೆ ಅಡಚಣೆಯಾಗುತ್ತಿದೆ. ರಸ್ತೆಗಳಲ್ಲಿರುವ ಗುಂಡಿಗಳಲ್ಲಿ ಮಳೆ ನೀರು ಶೇಖರಣೆಗೊಂಡಿದ್ದು, ವಾಹನ, ಜನಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

ಪುಷ್ಪಗಿರಿ ಬೆಟ್ಟಶ್ರೇಣಿಯ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಶಾಂತಳ್ಳಿ, ಬೆಟ್ಟದಳ್ಳಿ, ಹರಗ, ಕೂತಿ, ಕೊತ್ನಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ, ಕುಂದಳ್ಳಿ, ಮಲ್ಲಳ್ಳಿ, ಹೆಗ್ಗಡಮನೆ ವ್ಯಾಪ್ತಿಯಲ್ಲಿ ವರ್ಷಾಧಾರೆಯ ಆರ್ಭಟ ಹೆಚ್ಚಾಗಿದೆ.

ಈ ಭಾಗದಲ್ಲಿ ದಿನದ ೨೪ ಗಂಟೆಯೂ ಬಿಟ್ಟೂಬಿಡದೇ ಮಳೆ

ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಗದ್ದೆಗಳಲ್ಲಿ ನಿರೀನ ಸಂಗ್ರಹವಾಗುತ್ತಿದ್ದು, ಹಲವಷ್ಟು ರೈತರು ಉಳುಮೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಕಳೆದ ೨೪ ಗಂಟೆಗಳಲ್ಲಿ ಸೋಮವಾರಪೇಟೆ ಕಸಬ ಹೋಬಳಿ ವ್ಯಾಪ್ತಿಯಲ್ಲಿ ೨೯.೨ ಮಿ.ಮೀ., ಕುಶಾಲನಗರ ೨೧.೨ ಮಿ.ಮೀ., ಸುಂಟಿಕೊಪ್ಪ ೩೬ ಮಿ.ಮೀ., ಕೊಡ್ಲಿಪೇಟೆ ೨೩ ಮಿ.ಮೀ., ಶನಿವಾರಸಂತೆ ೩೨.೮ ಮಿ.ಮೀ., ಶಾಂತಳ್ಳಿ ಹೋಬಳಿಗೆ ೭೩.೦ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಕಂಟ್ರೋಲ್ ರೂಂ ಸ್ಥಾಪನೆ

ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಮಳೆಯಿಂದ ಉಂಟಾಗುವ ಕಷ್ಟನಷ್ಟಗಳ ಬಗ್ಗೆ ತಕ್ಷಣಕ್ಕೆ ಮಾಹಿತಿ ನೀಡಲು ತಾಲೂಕು ಕಚೇರಿಯಿಂದ ಕಂಟ್ರೋಲ್ ರೂಂ (ದೂರವಾಣಿ ಸಂಖ್ಯೆ: ೦೮೨೭೬೨೮೨೦೪೫) ತೆರೆಯಲಾಗಿದೆ. ದಿನದ ೨೪ ಗಂಟೆಗಳ ಕಾಲ ಕಾರ್ಯಾಚರಿಸುವ ಈ ಕೊಠಡಿಗೆ ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ಮಳೆಯಿಂದ ಯಾವುದೇ ಹಾನಿಯುಂಟಾದಲ್ಲಿ ೦೮೨೭೬೨೮೨೦೪೫ ಸಂಖ್ಯೆಗೆ ಮಾಹಿತಿ ನೀಡಬಹುದು ಎಂದು ತಹಶೀಲ್ದಾರ್ ಗೋವಿಂದರಾಜು ಅವರು ತಿಳಿಸಿದ್ದಾರೆ. ಈಗಾಗಲೇ ಕೋವಿಡ್ ಸಂಬAಧಿತ ತೆರೆಯಲಾಗಿರುವ ಸಹಾಯವಾಣಿಗೆ ನಿಯೋಜಿಸಿರುವ ಸಿಬ್ಬಂದಿಗಳೇ ಮಳೆಹಾನಿಯ ವಿವರವನ್ನು ಪ್ರತಿ ದಿನ ಹೋಬಳಿ ಮಟ್ಟದಿಂದ ಪಡೆದು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುವಂತೆ ತಿಳಿಸಲಾಗಿದೆ.

ಪೊನ್ನಂಪೇಟೆ: ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಮುಂಗಾರು ಮಳೆ ಮುಂದುವರೆದಿದ್ದು, ಬೆಳಗ್ಗೆಯಿಂದಲೇ ಮಳೆಯಾಗುತ್ತಿರುವುದರಿಂದ ಅಗತ್ಯ ವಸ್ತು ಖರೀದಿಗಾಗಿ ಪಟ್ಟಣಕ್ಕೆ ಆಗಮಿಸಿದ್ದ ಜನರು ಮಳೆಯಲ್ಲಿಯೇ ಪರದಾಡುತ್ತ ಸಾಮಾಗ್ರಿ ಖರೀದಿಸಿದರು. ಗಾಳಿಯ ಆರ್ಭಟವಿಲ್ಲದೆ ಶಾಂತವಾಗಿ ಮಳೆ ಸುರಿಯುತ್ತಿರುವುದರಿಂದ ಮಳೆಯಿಂದ ಯಾವುದೇ ತೊಂದರೆ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಕಳೆದ ೨೪ ಗಂಟೆ ಅವಧಿಯಲ್ಲಿ ಪೊನ್ನಂಪೇಟೆಯಲ್ಲಿ ೧.೨೫ ಇಂಚು, ಜೋಡುಬೀಟಿಯಲ್ಲಿ ೮೮ ಸೆಂಟ್, ಮತ್ತೂರುವಿನಲ್ಲಿ ೭೦ ಸೆಂಟ್, ಬೇಗೂರಿನಲ್ಲಿ ೧.೧೫ ಇಂಚು, ಮುಗುಟಗೇರಿಯಲ್ಲಿ ೧.೩೭ ಇಂಚು, ಬಿರುನಾಣಿ ವ್ಯಾಪ್ತಿಯಲ್ಲಿ ೨.೧೦ ಇಂಚು ಮಳೆಯಾಗಿದ್ದು, ಮಳೆಯ ರಭಸಕ್ಕೆ ಬಿರುನಾಣಿ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಾಳೆಲೆ, ಕಾರ್ಮಾಡು, ಕಾನೂರು, ನಾಲ್ಕೇರಿ, ಕುಟ್ಟ, ಶ್ರೀಮಂಗ, ಬಿ.ಶೆಟ್ಟಿಗೇರಿ, ಕುಂದ, ಹರಿಹರ, ಕುರ್ಚಿ, ಬೀರುಗ, ಬಲ್ಯಮಂಡೂರು, ಪೊನ್ನಪ್ಪಸಂತೆ ಸೇರಿದಂತೆ ದ.ಕೊಡಗಿನ ಬಹುತೇಕ ಗ್ರಾಮಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ.

ಸಿದ್ದಾಪುರ : ಸಿದ್ದಾಪುರದ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮವಾರದಂದು ಧಾರಾಕಾರ ಮಳೆ ಸುರಿಯಿತು. ಇದರಿಂದಾಗಿ ಸಿದ್ದಾಪುರ ಪಟ್ಟಣದಲ್ಲಿ ಬೀದಿಯಲ್ಲಿ ವ್ಯಾಪಾರ ಮಾಡುವ ಹಾಗೂ ಬಸ್ ನಿಲ್ದಾಣದಲ್ಲಿ ತರಕಾರಿ ವ್ಯಾಪಾರಿಗಳು ಸಮಸ್ಯೆಗೆ ಸಿಲುಕಿಕೊಂಡರು. ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಹೊದಿಕೆಗಳಿಂದ ನಿರ್ಮಿಸಿ ತರಕಾರಿ ವ್ಯಾಪಾರ ಮಾಡುತ್ತಿರುವ ದೃಶ್ಯ ಕಂಡುಬAತು. ದೂರದ ಊರುಗಳಿಂದ ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಲು ಬರುವವರು ಪರದಾಡುವ ದೃಶ್ಯ ಕಂಡುಬAತು. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಾಹನಗಳು ಸಿಗದೆ ಜನರು ಪರದಾಡುತ್ತಿದ್ದರು. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಯುವಕರು ನೀರಿಗೆ ಗಾಳ ಹಾಕಿ ಮೀನು ಹಿಡಿಯುವ ದೃಶ್ಯ ಕಂಡುಬAತು.

ಸುAಟಿಕೊಪ್ಪ: ಕಳೆದ ಎರಡು ದಿನಗಳಿಂದ ಸುಂಟಿಕೊಪ್ಪ ನಗರ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಇಂದು ಸುಂಟಿಕೊಪ್ಪ ನಗರದಲ್ಲಿ ಜೋರಾಗಿತ್ತು. ನಗರದಲ್ಲಿ ಜನ ಸಂಚಾರ ಹೆಚ್ಚು ಕಂಡುಬAತು. ಸಂತೆಯೊಳಗೆ ಬೆಳಿಗ್ಗೆಯಿಂದಲೇ ಸಾಮಗ್ರಿ ಖರೀದಿಸಲು ಜನ ಮುಗಿ ಬಿದ್ದರು. ರಸ್ತೆಗಳಲ್ಲಿ ವಾಹನ ದಟ್ಟಣೆ ಅಧಿಕವಿತ್ತು.

ನಗರದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದ್ದು, ಹಲವು ಕಡೆ ತೋಟಗಳಲ್ಲಿ ಗಾಳಿಗೆ ಮರ, ವಿದ್ಯುತ್ ಕಂಬಗಳು ಧರೆಗುರುಳಿದವು. ಗದ್ದೆ ಬದಿಯ ತೋಡುಗಳು ತುಂಬಿ ಹರಿಯುತ್ತಿತ್ತು. ಸುಂಟಿಕೊಪ್ಪ ನಗರದ ರಸ್ತೆಯ ಎರಡು ಭಾಗದಲ್ಲಿ ರಸ್ತೆ ದುರಸ್ಥಿಯ ನಂತರ ಮಣ್ಣು ಹಾಕಿದ ಪರಿಣಾಮ ಅಂಗಡಿಗಳು ಕೆಸರುಮಯವಾಗಿತ್ತು.

ವೀರಾಜಪೇಟೆ: ವೀರಾಜಪೇಟೆ ವಿಭಾಗಕ್ಕೆ ಮೂರು ದಿನಗಳಿಂದ ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಭಾನುವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನ ತನಕ ಒಟ್ಟು ೪೦ ಮಿ.ಮೀ. (೧.೭೧ ಇಂಚು) ಮಳೆಯಾಗಿದೆ.

ಕೇರಳದ ಕರಾವಳಿಯಿಂದ ೪ ದಿನಗಳ ಹಿಂದೆಯೇ ಪ್ರವೇಶಿಸಿದ ಮುಂಗಾರು ಕೊಡಗು ಕೇರಳ ಗಡಿಭಾಗದಲ್ಲಿ ಮಳೆಯ ಬಿರುಸು ಹೆಚ್ಚಿದೆ. ಆರ್ಜಿ, ಬೇಟೋಳಿ, ಪೆರುಂಬಾಡಿ, ಬಿಟ್ಟಂಗಾಲ, ನಾಂಗಾಲ, ಕದನೂರು ಸುತ್ತಮುತ್ತ ಭಾರೀ ಮಳೆ ಸುರಿಯುತ್ತಿರುವುದಾಗಿ ಈ ಭಾಗದ ನಿವಾಸಿಗಳು ತಿಳಿಸಿದ್ದಾರೆ.

ವೀರಾಜಪೇಟೆ ವಿಭಾಗದಲ್ಲಿ ಇಂದು ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿದ್ದು ಭಾರೀ ಮಳೆ ಮುಂದುವರೆದಿದೆ.

ಭಾರೀ ಮಳೆಯ ಹಿನೆÀ್ನಲೆಯಲ್ಲಿ ಇಂದು ಇಲ್ಲಿನ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಿಬ್ಬಂದಿಗಳು ಮಲೆತಿರಿಕೆ ಬೆಟ್ಟ ಅರಸುನಗರ ಹಾಗೂ ನೆಹರೂ ನಗರದ ಬೆಟ್ಟ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭಾರೀ ಮಳೆಯಿಂದ ಆತಂಕದಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸುವ ಕುರಿತು ಚಿಂತನೆ ನಡೆಸಿರುವುದಾಗಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ತಿಳಿಸಿದ್ದಾರೆ.

ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂಜಾನೆಯಿAದಲೇ ಮಳೆ ಸುರಿಯಿತು.

ಲಾಕ್‌ಡೌನ್ ಸಡಿಲಗೊಂಡ ದಿನವಾಗಿದ್ದರಿಂದ ನಗರದಲ್ಲಿ ಹೆಚ್ಚಾಗಿ ಜನಸಂದಣಿ ಕಂಡುಬAತು. ಮಳೆ ಸುರಿದ ಕಾರಣ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಳೆಯಲ್ಲಿಯೇ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಯಿತು.

ದೂರದ ಪ್ರದೇಶದಿಂದ ಸೊಪ್ಪು ಹೊತ್ತು ತಂದ ರೈತರು, ಬಸ್ ನಿಲ್ದಾಣ ಆಸುಪಾಸಿನಲ್ಲಿ ಸಿಕ್ಕ ಜಾಗದಲ್ಲಿ ವ್ಯಾಪಾರ ನಡೆಸಿದರು. ಮಧ್ಯಾಹ್ನ ವೇಳೆ ಮಳೆ ಬಿಡುವು ನೀಡಿತ್ತು. ಸಂಜೆಯ ವೇಳೆ ಮತ್ತೆ ಮಳೆ ಆರಂಭವಾಯಿತು.

ಕೂಡಿಗೆ: ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದೆರಡು ದಿನಗಳಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ, ಕೂಡಿಗೆ ಸಮೀಪ ಹಾರಂಗಿ ಮತ್ತು ಕಾವೇರಿ ನದಿಯು ಸಂಗಮವಾಗಿ ಮುಂದೆ ಹರಿಯುವ ಕಾವೇರಿ ನದಿಯು ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಹತ್ತಿರ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ.

ಶನಿವಾರಸಂತೆ: ಶನಿವಾರಸಂತೆ ಪಟ್ಟಣ ಮತ್ತು ಹೋಬಳಿಯಾದ್ಯಂತ ಸೋಮವಾರ ಬೆಳಗ್ಗಿನಿಂದ ಬಿಡುವು ನೀಡದೆ ಉತ್ತಮ ಮಳೆ ಸುರಿಯಿತು. ಚರಂಡಿ - ರಸ್ತೆಯಲ್ಲೂ ನೀರು ಹರಿಯಿತು. ಪಟ್ಟಣ ವ್ಯಾಪ್ತಿಯಲ್ಲಿ ೧ ಇಂಚು ಮಳೆಯಾಗಿದ್ದು, ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಬಿಳಾಹ, ಕಿರುಬಿಳಾಹ, ಮಾದ್ರೆ, ಚೆನ್ನಾಪುರ, ಕಾಜೂರು, ಕೂಜಗೇರಿ, ಅಪ್ಪಶೆಟ್ಟಳ್ಳಿ ಗ್ರಾಮಗಳಲ್ಲಿ ಒಂದೂವರೆ ಇಂಚು ಮಳೆಯಾಗಿದೆ.

ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡರೆ, ತೋಟಗಳಲ್ಲಿ ಗೊಬ್ಬರ ಹಾಕುವ ಕೆಲಸ ಮುಗಿದಿದ್ದು, ಗಿಡ ಕಸಿ ಮಾಡುವ ಕೆಲಸ ಉಳಿದಿದೆ. ಗದ್ದೆಗಳಲ್ಲಿ ಭತ್ತದ ಅಗೆ ಹಾಕಲು ಸಿದ್ಧತೆ ನಡೆದಿದೆ.

ಮಳೆ ಕಾಳು ಮೆಣಸು ಬೆಳೆಗೆ ಉತ್ತಮವಾಗಿದೆ. ಬಳ್ಳಿಯಲ್ಲಿ ದಾರ ಬಿಟ್ಟಿದ್ದು, ಕಾಯಿ ಕಟ್ಟುತ್ತದೆ. ಮುಂದಿನ ಸಾಲಿನಲ್ಲಿ ಉತ್ತಮ ಇಳುವರಿ ಪಡೆಯಬಹುದು. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಮಳೆಯಾದರೂ, ರೈತರಿಗೆ ಸಹಕಾರ ನೀಡುತ್ತಿದೆಯಲ್ಲ ಎಂದು ರೈತರಾದ ದೊಡ್ಡಬಿಳಾಹ ಗ್ರಾಮದ ಬಿ.ಎಸ್. ಮೋಹನ್, ಪ್ರಣೀತ್, ಅಪ್ಪಶೆಟ್ಟಳ್ಳಿಯ ಮೋಹನ್ ಕುಮಾರ್, ಕೂಜಗೇರಿಯ ಕೆ.ಟಿ. ಹರೀಶ್, ಕಾಜೂರಿನ ಚಂದ್ರಣ್ಣ ಸಂತಸ ವ್ಯಕ್ತಪಡಿಸಿದರು.