ಚೆಯ್ಯಂಡಾಣೆ, ಜೂ.೧೪: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ-೧ನೇ ಗ್ರಾಮದಲ್ಲಿ ಕೋವಿಡ್-೧೯ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವುದರಿಂದ ಜೂನ್ ೧೬ರ ಮಧ್ಯಾಹ್ನ ೧ ಗಂಟೆಯಿAದ ಜೂನ್ ೨೪ರ ಸಂಜೆ ೬ ಗಂಟೆಯವರೆಗೆ ಗ್ರಾಮವನ್ನು ಸಂಪೂರ್ಣ ಬಂದ್ ಮಾಡಲು ಗ್ರಾಮ ಪಂಚಾಯಿತಿ ನಿರ್ಧರಿಸಿದೆ.
ಈ ಸಮಯದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ, ಯಾರೂ ಅನಾವಶ್ಯಕವಾಗಿ ತಿರುಗಾಡದಂತೆ, ಅನಾವಶ್ಯಕವಾಗಿ ವಾಹನಗಳು ತಿರುಗಾಡಿದರೆ ವಾಹನಗಳನ್ನು ಜಪ್ತಿ ಮಾಡಿ ಪೋಲೀಸ್ ಇಲಾಖೆಗೆ ಹಸ್ತಾಂತರಿಸುವAತೆ ಹಾಗೂ ಸಾರ್ವಜನಿಕರು ತಿರುಗಾಡಿದರೆ ಇವರ ಮೇಲೆ ಮೊಕದ್ದಮೆ ದಾಖಲಿಸಲಾಗುವುದು.
ಹೊರಗಡೆಯಿಂದ ಯಾವುದೇ ಕಾರ್ಮಿಕರು ಗ್ರಾಮದೊಳಗೆ ಪ್ರವೇಶಿಸದಂತೆ, ಅಂಗಡಿ ಮಾಲೀಕರು ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿದಲ್ಲಿ ಪರವಾನಗಿಯನ್ನು ರದ್ದು ಪಡಿಸಲಾಗುವುದು ಎಂದು ನರಿಯಂದಡ ಗ್ರಾಮ ಪಂಚಾಯಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಆದ್ದರಿಂದ ಸಾರ್ವಜನಿಕರು ಗ್ರಾಮ ಪಂಚಾಯಿತಿಯೊAದಿಗೆ ಕೋವಿಡ್-೧೯ನ್ನು ತಡೆಗಟ್ಟಲು ಕೈ ಜೋಡಿಸುವಂತೆ ನರಿಯಂದಡ ಗ್ರಾಮ ಪಂಚಾಯತಿ ಪಿಡಿಓ ಕೋರಿದ್ದಾರೆ.
- ಸಿ.ಎ. ಅಶ್ರಫ್