ಮಡಿಕೇರಿ, ಜೂ. ೧೪: ಕೊಡವ, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಮಿಂಚಿ ಮರೆಯಾದ ಮೇರು ಸಾಹಿತಿಗಳಾದ ಡಾ. ಐಚೆಟ್ಟಿರ ಮುತ್ತಣ್ಣ ಹಾಗೂ ಬಾಚಮಾಡ ಗಣಪತಿಯವರು ಸಾಹಿತ್ಯ ಲೋಕದ ಮಿನುಗು ತಾರೆಯರು. ಇವರೂ ಸೇರಿದಂತೆ ಕೊಡವ ಸಾಹಿತ್ಯ ಲೋಕಕ್ಕೆ ದುಡಿದಿರುವ ಎಲ್ಲಾ ಸಾಹಿತಿಗಳ ಸಾಹಿತ್ಯ ಸೇವೆಯನ್ನು ಸರ್ಕಾರ ಹಾಗೂ ಸಾಹಿತ್ಯ ಲೋಕ ಮರೆತಿರುವುದು ವಿಷಾದನೀಯ. ಎಲ್ಲಾ ಹಿರಿಯ ಕೊಡವ ಸಾಹಿತಿಗಳ ನೆನಪಿನಲ್ಲಿ ‘ಕೊಡವ ಸಾಹಿತ್ಯ ಸ್ಮಾರಕ ನಿರ್ಮಾಣವಾಗಬೇಕು ಹಾಗೂ ಡಾ. ಐ.ಮಾ. ಮುತ್ತಣ್ಣ ಅವರಿಗೆ ಮರಣೋತ್ತರವಾಗಿಯಾದರೂ ಜ್ಞಾನಪೀಠ ಪ್ರಶಸ್ತಿ ಲಭಿಸುವಂತಾಗಬೇಕೆAದು ಕೊಡವಾಮೆರ ಕೊಂಡಾಟ ಸಂಘಟನೆಯ ಸ್ಥಾಪಕ ಅಧ್ಯಕ್ಷ ಚಾಮೆರ ದಿನೇಶ್‌ಬೆಳ್ಯಪ್ಪ ಆಗ್ರಹಿಸಿದರು. ಕೊಡವಾಮೆರ ಕೊಂಡಾಟ ಸಂಘಟನೆಯು ಕಳೆದ ಒಂದು ವರ್ಷದಿಂದ ಉಭಯ ಸಾಹಿತಿಗಳ ನೆನಪಿನಲ್ಲಿ, ತಿಂಗಳಿಗೊAದು ಸಾಹಿತ್ಯ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದ್ದು, ಇಂದು ಗೂಗಲ್ ಮೀಟ್ ವೆಬಿನಾರ್‌ನಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡವ ಸಮಾಜ ಒಕ್ಕೂಟಗಳ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು, ಕೊಡವ ಸಾಹಿತ್ಯ ಸಂಸ್ಕೃತಿಗೆ ಕೊಡುಗೆ ನೀಡಿದವರನ್ನು ನೆನೆಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು. ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಬರೆದ ಕೊಡವಾಮೆರ ಕೊಂಡಾಟ ಸಂಘಟನೆಯ ೨೦ ಮತ್ತು ೨೧ ನೇ ಪ್ರಕಟಿತ, ಮೂವ ರಂಗ್‌ರ ಮುತ್ತಣ್ಣ ಹಾಗೂ ಗತ್ತ್ ಕೋಂದ ಗಣಪತಿ ಎಂಬೆರಡು ಪುಸ್ತಕಗಳನ್ನು ಕೊಡವ ಜಾನಪದ ತಜ್ಞ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಅವರು ಬಿಡುಗಡೆ ಮಾಡಿ ಮಾತನಾಡಿ, ಕೊಡವ ಸೇರಿದಂತೆ ಕನ್ನಡ ಇಂಗ್ಲಿಷ್ ಸಾಹಿತ್ಯ ಲೋಕದಲ್ಲಿ, ಈ ಇಬ್ಬರೂ ಸಾಹಿತಿಗಳು ಎಂದೂ ಮಾಸದ ನಕ್ಷತ್ರಗಳು ಎಂದರು. ಸಾಹಿತಿ ಮೊಣ್ಣಂಡ ಶೋಭಾಸುಬ್ಬಯ್ಯ ಮಾತನಾಡಿ, ಈ ಇಬ್ಬರು ಮೇರು ಸಾಹಿತಿಗಳ ನೆನಪಿನ ಪುಸ್ತಕದಲ್ಲಿ ಅವರ ಬದುಕು, ಸಾಧನೆ ಹಾಗೂ ಸಾಹಿತ್ಯ ಪ್ರಕಾರಗಳನ್ನು ಉಲ್ಲೇಖಿಸಲಾಗಿದೆ. ಮುಂದಿನ ಪೀಳಿಗೆಗೆ ಪೂರಕ ಮಾಹಿತಿಯನ್ನು ಒದಗಿಸಲಾಗಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಐಚೆಟ್ಟಿರ ಕುಟುಂಬದ ಅಧ್ಯಕ್ಷ ಐಚೆಟ್ಟಿರ ಮೋಹನ್ ದೇವಯ್ಯ, ಬಾಚಮಾಡ ಕುಟುಂಬದ ಹಿರಿಯರಾದ ಬಾಚಮಾಡ ಸೋಮಯ್ಯ, ಹಿರಿಯ ಸಾಹಿತಿ ಬಾಚಮಾಡ ಡಿ. ಸುಬ್ಬಯ್ಯ ಅವರ ಪುತ್ರ ಬಾಚಮಾಡ ವಸಂತ್, ಐಚೆಟ್ಟಿರ ಕುಟುಂಬದ ಕಾರ್ಯದರ್ಶಿ ಐಚೆಟ್ಟಿರ ರಾಯ್‌ತಿಮ್ಮಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಐಚೆಟ್ಟಿರ ಮುತ್ತಣ್ಣ ಬಾಳ್ ಬದ್‌ಕ್ ಸಾಹಿತ್ಯ ಎಂಬ ವಿಚಾರವಾಗಿ ಐಚೆಟ್ಟಿರ ಪುಷ್ಪ ಅಪ್ಪಚ್ಚು ಹಾಗೂ ಬಿ. ಡಿ. ಗಣಪತಿ ಬಾಳ್‌ಬದುಕ್ ಸಾಹಿತ್ಯ ಎಂಬ ವಿಚಾರವಾಗಿ ಬಾಚಮಾಡ ಭೀಮಯ್ಯ ಅವರು ವಿಚಾರ ಮಂಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಚೇಂದಿರ ನಿರ್ಮಲ ಬೋಪಣ್ಣ, ಪೋಡಮಾಡ ಭವಾನಿ ನಾಣಯ್ಯ, ಕುಯ್ಮಂಡ ಮಮತ ಮೇದಪ್ಪ, ಬಟ್ಟಿಯಂಡ ಲಿಖಿತ ಪಳಂಗಪ್ಪ, ಕರವಟ್ಟಿರ ಆರುಷಿ ಮುತ್ತಮ್ಮ, ಮೇವಡ ಕಾವೇರಿ ಸೋಮಯ್ಯ, ಅಯ್ಯಲಪಂಡ ಪಟ್ಟು ಪೆಮ್ಮಯ್ಯ, ಮುಕ್ಕಾಟಿರ ಮೌನಿ ನಾಣಯ್ಯ, ಮಾಳೇಟಿರ ಸೀತಮ್ಮ ವಿವೇಕ್, ಕುಲ್ಲಚಂಡ ವಿನುತಾ ಕೇಸರಿ, ಅಜ್ಜಮಕ್ಕಡ ವಿನುಕುಶಾಲಪ್ಪ ನಡೆಸಿಕೊಟ್ಟರು. ಕಾರ್ಯಕ್ರಮದ ಮೊದಲಿಗೆ ಕೊಡವ ಪದ್ಧತಿಯಂತೆ ನೆಲ್ಲಕ್ಕಿ ಯಲ್ಲಿ ಗುರುಕಾರೋಣರಿಗೆ ಅಕ್ಕಿ ಹಾಕುವ ಮೂಲಕ ಆಡಳಿತ ಮಂಡಳಿ ಸದಸ್ಯ ಚಿರಿಯಪಂಡ ವಿಶುಕಾಳಪ್ಪ ಅವರು ಒಕ್ಕಣೆ ಕಟ್ಟಿ ಪ್ರಾರ್ಥಿಸಿದರೆ, ಆಡಳಿತ ಮಂಡಳಿ ಸದಸ್ಯ ತೀತಿಮಾಡ ಸೋಮಣ್ಣ ಸರ್ವರನ್ನು ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯೆ ನೂರೆರ ಬಬಿತ ಅವರು ಉಭಯ ಸಾಹಿತಿಗಳ ಶತಮಾನೋತ್ಸವದ ನೆನಪಿಗೆ ನಡೆದ ತಿಂಗಳಿಗೊAದು ಸಾಹಿತ್ಯ ಸ್ಪರ್ಧೆಯ ಕುರಿತು ವರದಿ ಮಂಡಿಸಿದರೆ, ಕಾರ್ಯದರ್ಶಿ ಅಜ್ಜಮಕ್ಕಡ ವಿನು ಕುಶಾಲಪ್ಪ ವಂದಿಸಿದರು. ಸದಸ್ಯೆ ಕುಲ್ಲಚಂಡ ದೇಚಮ್ಮ ಕೇಸರಿ ಕಾರ್ಯಕ್ರಮ ನಿರೂಪಿಸಿದರು.