ಗೋಣಿಕೊಪ್ಪಲು, ಜೂ. ೧೪: ಗ್ರಾಮದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ತಹ ಬಂದಿಗೆ ತರುವಲ್ಲಿ ಹೆಚ್ಚಿನ ಕಾಳಜಿ ವಹಿಸಿದ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಶ್ರಮಿಸಿದ ಹೊಸೂರು ಪಂಚಾಯಿತಿ ನೌಕರರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪಂಚಾಯಿತಿ ಅಧ್ಯಕ್ಷೆ ಶಾಂತಿ ಸೋಮಯ್ಯ, ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ವೇಳೆ ಪ್ರತಿ ಮನೆಗಳಿಗೆ ತೆರಳಿ ನಮ್ಮ ಪಂಚಾಯಿತಿ ನೌಕರರು, ಆಶಾ ಕಾರ್ಯಕರ್ತೆಯರು ಉತ್ತಮ ಕೆಲಸ ಮಾಡಿದ್ದು, ಇವರಿಗೆ ಉತ್ತೇಜನ ನೀಡಲು ಕಾರ್ಯಕ್ರಮ ಆಯೋಜಿಸ ಲಾಗಿದೆ ಎಂದರು.
ಪAಚಾಯಿತಿ ಉಪಾಧ್ಯಕ್ಷ ಕೊಲ್ಲೀರ ಧನು ಪೂಣಚ್ಚ ಮಾತನಾಡಿ, ಗ್ರಾಮದಲ್ಲಿ ಮನೆಗಳಿಗೆ ತೆರಳಲು ಕಿಲೋ ಮೀಟರ್ಗಟ್ಟಲೇ ನಡೆಯಬೇಕು. ಆದರೂ ನೌಕರರು ಗ್ರಾಮವನ್ನು ಕೊರೊನಾ ಮುಕ್ತ ಮಾಡಲು ವಿಶೇಷ ಪ್ರಯತ್ನ ಮಾಡಿದ್ದಾರೆ. ಆಶಾ ಕಾರ್ಯಕರ್ತೆ ಯರು, ಅಂಗನವಾಡಿ, ಆರೋಗ್ಯ ಸಹಾಯಕರು ಕೂಡ ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿ ದ್ದಾರೆ. ಈ ನಿಟ್ಟಿನಲ್ಲಿ ಇವರಿಗೆ ಕಾರ್ಯಕರ್ತೆಯರು ಉತ್ತಮ ಕೆಲಸ ಮಾಡಿದ್ದು, ಇವರಿಗೆ ಉತ್ತೇಜನ ನೀಡಲು ಕಾರ್ಯಕ್ರಮ ಆಯೋಜಿಸ ಲಾಗಿದೆ ಎಂದರು.
ಪAಚಾಯಿತಿ ಉಪಾಧ್ಯಕ್ಷ ಕೊಲ್ಲೀರ ಧನು ಪೂಣಚ್ಚ ಮಾತನಾಡಿ, ಗ್ರಾಮದಲ್ಲಿ ಮನೆಗಳಿಗೆ ತೆರಳಲು ಕಿಲೋ ಮೀಟರ್ಗಟ್ಟಲೇ ನಡೆಯಬೇಕು. ಆದರೂ ನೌಕರರು ಗ್ರಾಮವನ್ನು ಕೊರೊನಾ ಮುಕ್ತ ಮಾಡಲು ವಿಶೇಷ ಪ್ರಯತ್ನ ಮಾಡಿದ್ದಾರೆ. ಆಶಾ ಕಾರ್ಯಕರ್ತೆ ಯರು, ಅಂಗನವಾಡಿ, ಆರೋಗ್ಯ ಸಹಾಯಕರು ಕೂಡ ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿ ದ್ದಾರೆ. ಈ ನಿಟ್ಟಿನಲ್ಲಿ ಇವರಿಗೆ ಪ್ರೋತ್ಸಾಹ ಧನವನ್ನು ಪಂಚಾಯಿತಿ ವತಿಯಿಂದ ನೀಡಿ ಗೌರವಿಸಲಾಗಿದೆ ಎಂದರು. ಪಂಚಾಯಿತಿ ಸದಸ್ಯರಾದ ಮಹದೇವ್ ಇದೇ ಸಂದರ್ಭ ಕೊರೊನಾ ವಾರಿಯರ್ಸ್ಗಳಿಗೆ ತರಕಾರಿ ಕಿಟ್ಗಳನ್ನು ವಿತರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ರತ್ನ ಸುಬ್ಬಯ್ಯ, ವಿಶಾಲಾಕ್ಷಿ, ಎಂ.ಎನ್. ಮಾದಯ್ಯ, ಲಕ್ಷಿö್ಮ ವೈ.ಎಂ., ಸುಮ ಹೆಚ್.ಆರ್., ಮಹೇಶ್ವರಿ, ಪಿ.ಎನ್. ಮಹದೇವ, ಹೆಚ್.ಎನ್. ಮಧು, ವಿ.ವಿ. ಪ್ರಕಾಶ್, ಟಿ.ಎಂ. ಸುಶೀಲಾ, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಡಿ. ಶ್ರೀನಿವಾಸ್ ಸ್ವಾಗತಿಸಿ, ವಂದಿಸಿದರು.