ಕೂಡಿಗೆ, ಜೂ. ೧೪: ಕೂಡಿಗೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ತೆರೆಯಲಾದ ಕೋವಿಡ್ ಸೆಂಟರ್‌ನಿAದ ಇದುವರೆಗೆ ೬,೧೭೨ ಸೋಂಕಿತರು ಉತ್ತಮವಾದ ಚಿಕಿತ್ಸೆ ಪಡೆದು ಗುಣಮುಖರಾಗಿ ತೆರಳಿದ್ದಾರೆ.
ಕೂಡಿಗೆಯಲ್ಲಿರುವ ಕೋವಿಡ್ ಸೆಂಟರ್‌ನಲ್ಲಿ ದಿನದ ೨೪ ಗಂಟೆಗಳಲ್ಲಿ ಸೋಂಕಿತ ವ್ಯಕ್ತಿಗಳಿಗೆ ಅವರುಗಳಿಗೆ ನಿಗದಿ ಮಾಡಿದ ಔಷಧಿಯನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳವಂತೆ ಸೂಚನೆ ನೀಡುವುದು ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳನ್ನು ಒದಗಿಸ ಲಾಗುತ್ತಿದೆ. ಇದರ ಜೊತೆಯಲ್ಲಿ ಸೋಂಕಿತ ವ್ಯಕ್ತಿಗಳಿಗೆ ದಿನಂಪ್ರತಿ ಆರೋಗ್ಯ ಇಲಾಖೆಯ ವತಿಯಿಂದ ಪ್ರಕಟಿತ ಗುಣಮಟ್ಟದ ಮತ್ತು ಉತ್ತಮವಾದ ಆಹಾರವನ್ನು ನೀಡಲಾಗುತ್ತದೆ.
ಸೋಂಕಿತ ವ್ಯಕ್ತಿಗಳಿಗೆ ದಿನಂಪ್ರತಿ ಬೆಳಿಗ್ಗಿನ ತಿಂಡಿ, ಮಧ್ಯಾಹ್ನ ಸೇರಿದಂತೆ ರಾತ್ರಿ ಊಟದ ವ್ಯವಸ್ಥೆ ಸುಸೂತ್ರವಾಗಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕುಶಾಲನಗರದಲ್ಲಿ ಸಿದ್ಧತೆ ಮಾಡಿ ಸಮಯಕ್ಕೆ ಸರಿಯಾಗಿ ನೀಡಲಾಗುತ್ತಿದೆ.
ಜಿಲ್ಲಾಡಳಿತ ನಿರ್ದೇಶದಂತೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಪ್ರಯತ್ನದಲ್ಲಿ ವಿವಿಧ ಇಲಾಖೆಯ ಸಹಯೋಗದೊಂದಿಗೆ ಸೋಂಕಿತ ವ್ಯಕ್ತಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದ ಹಿನ್ನೆಲೆಯಲ್ಲಿ ೩,೦೧೦ ಪುರುಷರು ಮತ್ತು ೩,೧೬೨ ಮಹಿಳೆಯರು ಚಿಕಿತ್ಸೆ ಪಡೆದು ಮನೆಗಳಿಗೆ ತೆರಳಿದ್ದಾರೆ.
ಈ ಕೇಂದ್ರದಲ್ಲಿ ಒಬ್ಬರು ವೈದ್ಯರು, ಇಬ್ಬರು ಸ್ಟಾಫ್ ನರ್ಸ್ ಮತ್ತು ಒಬ್ಬರು ಸಹಾಯಕ ನರ್ಸ್ಗಳು, ಇಬ್ಬರು ಡಿ ಗ್ರೂಪ್ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೊರೊನಾ ಸೋಂಕಿತ ವ್ಯಕ್ತಿಗಳಿಗೆ ಕೋವಿಡ್ ಸೆಂಟರ್‌ನಲ್ಲಿ ಸೋಂಕಿತ ವ್ಯಕ್ತಿಗಳಿಗೆ ಮನೋರಂಜನೆಗಾಗಿ ಕೇಂದ್ರದಲ್ಲಿ ಟಿ.ವಿ. ಅಳವಡಿಸಲಾಗಿದೆ. ಕ್ರೀಡಾ ಸಾಮಗ್ರಿಗಳಾದ ಕೇರಂ, ಚೆಸ್ ಬಳಕೆಯನ್ನು ಮಾಡಲಾಗಿದೆ. ಇದರ ಜೊತೆಯಲ್ಲಿ ಯೋಗ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರವು ಸುಸಜ್ಜಿತ ಕಟ್ಟಡವಾಗಿರುವುದರಿಂದ ಸೋಂಕಿತ ವ್ಯಕ್ತಿಗಳಿಗೆ ಬಿಸಿ ನೀರಿನ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಾಲೂಕು ಕೋವಿಡ್ ಸೆಂಟರ್‌ನ ನೋಡಲ್ ಅಧಿಕಾರಿ, ಮಡಿಕೇರಿಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ತಿಳಿಸಿದ್ದಾರೆ. ಇವರ ಜೊತೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಾಲಕೃಷ್ಣ ರೈ ಆಹಾರ ಸರಬರಾಜು ವ್ಯವಸ್ಥೆ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಸೋಮವಾರಪೇಟೆ ತಾಲೂಕಿನಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗಳ ಸಂಖ್ಯೆ ಹೆಚ್ಚುವರಿ ಆಗುತ್ತಿದೆ ಎಂಬದನ್ನು ಗಮನಿಸಿ ಜಿಲ್ಲಾಡಳಿತ ಸೂಚನೆಯಂತೆ ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಒಂದು ಕೋವಿಡ್ ಸೆಂಟರ್ ತೆರೆಯಲಾಗಿದೆ. ಇದರಲ್ಲಿ ೩೨ ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿ ದ್ದಾರೆ. ಆಲೂರುಸಿದ್ದಾಪುರದಲ್ಲಿಯೂ ಕೋವಿಡ್ ಸೆಂಟರ್ ತೆರೆಯಲಾಗಿದ್ದು, ಅಲ್ಲಿಯೂ ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. -ಕೆ.ಕೆ. ನಾಗರಾಜಶೆಟ್ಟಿ