*ವೀರಾಜಪೇಟೆ: ಜೂ. ೧೪ ಪ್ರತಿವರ್ಷವೂ ಗ್ರಾಮಾಂತರ ಭಾಗದ ಸರ್ಕಾರಿ ಶಾಲೆಯ ಆವರಣದಲ್ಲಿ ಪರಿಸರ ದಿನಾಚರಣೆ ಆಚರಿಸುತ್ತಾ, ಪರಿಸರಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದ ಶನೀಶ್ವರ ಭಕ್ತ ಜನ ಮಂಡಳಿಯೂ ಈ ವರ್ಷ ಸರಳವಾಗಿ ಶನೀಶ್ವರ ದೇವಾಲಯದ ಸುತ್ತಮುತ್ತಲಿನ ಪರಿಸರದಲ್ಲಿ ತುಳಸಿ ಗಿಡಗಳನ್ನು ನೆಡುವುದರ ಮೂಲಕ ಸರಳವಾಗಿ ಪರಿಸರ ದಿನಾಚರಣೆ ಆಚರಿಸಿದರು. ಉಪನ್ಯಾಸಕರಾದ ವನೀತ್ ಕುಮಾರ್ ಹಾಗೂ ಶನೀಶ್ವರ ಭಕ್ತ ಜನಮಂಡಳಿಯ ಸದಸ್ಯರಾದ ಯುವರಾಜ್ ಕೃಷ್ಣರವರು ಗಿಡ ನೆಡುವ ಕಾರ್ಯದಲ್ಲಿ ಭಾಗಿಯಾಗಿದ್ದರು.