*ವೀರಾಜಪೇಟೆ, ಜೂ. ೧೪: ಪೊಲೀಸರ ಹಲ್ಲೆಯಿಂದ ಮೃತಪಟ್ಟ ವೀರಾಜಪೇಟೆಯ ಚಿಕ್ಕಪೇಟೆ ನಿವಾಸಿ ರಾಯ್ ಡಿಸೋಜಾ ಅವರ ಮನೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಭೇಟಿ ನೀಡಿ ಮೃತ ರಾಯ್ ಡಿಸೋಜಾರ ತಾಯಿಗೆ ಸಾಂತ್ವಾನ ಹೇಳಿ, ಧೈರ್ಯ ತುಂಬಿದರು. ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೆ *ವೀರಾಜಪೇಟೆ, ಜೂ. ೧೪: ಪೊಲೀಸರ ಹಲ್ಲೆಯಿಂದ ಮೃತಪಟ್ಟ ವೀರಾಜಪೇಟೆಯ ಚಿಕ್ಕಪೇಟೆ ನಿವಾಸಿ ರಾಯ್ ಡಿಸೋಜಾ ಅವರ ಮನೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಭೇಟಿ ನೀಡಿ ಮೃತ ರಾಯ್ ಡಿಸೋಜಾರ ತಾಯಿಗೆ ಸಾಂತ್ವಾನ ಹೇಳಿ, ಧೈರ್ಯ ತುಂಬಿದರು. ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೆ ನಾವೂ ಈ ವಿಚಾರವನ್ನು ಬಿಡುವುದಿಲ್ಲ ನಾವೆಲ್ಲಾ ನಿಮ್ಮೊಂದಿಗೆ ಇದ್ದೇವೆ ಎಂದು ವೀಣಾ ಆತ್ಮಸ್ಥೆöÊರ್ಯ ತುಂಬಿದರು.
ಮೆಟೆಲ್ಡಾ ಡಿಸೋಜಾ ತಮ್ಮ ಮಗನನ್ನು ನೆನೆಯುತ್ತಾ ಕಣ್ಣೀರು ಹಾಕಿದರು. ಬಳಿಕ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೂರವಾಣಿ ಮೂಲಕ ಮಾತನಾಡಲು ಅವಕಾಶ ಮಾಡಿಕೊಟ್ಟರು. ಮೃತ ರಾಯ್ ಡಿಸೋಜಾ ತಾಯಿ ನಡೆದ ಘಟನೆಯನ್ನೆಲ್ಲಾ ಸಿದ್ದರಾಮಯ್ಯನವರಿಗೆ ವಿವರಿಸಿದರು. ಹೆದರಬೇಡಿ ತಾಯಿ ನಾವೂ ನಿಮ್ಮ ಜೊತೆಗಿದ್ದೇವೆ. ನಾನು ಐ.ಜಿ.ಯವರ ಜೊತೆಗೆ ಸಂಬAಧಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡುತ್ತೇನೆ. ಖಂಡಿತವಾಗಿ ಈ ವಿಚಾರದಲ್ಲಿ ನಿಮಗೆ ನ್ಯಾಯ ಸಿಗುವ ಹಾಗೇ ಮಾಡುತ್ತೇನೆ ಎನ್ನುವ ಭರವಸೆಯಿತ್ತರು.ಈ ಸಮಯದಲ್ಲಿ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ನ ಮುಖಂಡರುಗಳು ಹಾಜರಿದ್ದರು.