ಮಡಿಕೇರಿ, ಜೂ. ೧೪: ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ "ಪರಿಸರ ಮತ್ತು ಜೀವ ವೈವಿಧ್ಯ ಸಂರಕ್ಷಣೆ" ಕುರಿತು ಏರ್ಪಡಿಸಿದ್ದ ಗೂಗಲ್ ಮೀಟ್ ಸ್ಲೆöÊಡ್ ಪ್ರದರ್ಶನದ ಮೂಲಕ ಉಪನ್ಯಾಸ ನೀಡಿದ ವೀರಾಜಪೇಟೆಯ ವೈದ್ಯ ಹಾಗೂ ಪಕ್ಷಿ ತಜ್ಞ ಡಾ. ನರಸಿಂಹನ್ ಅವರು, ಪ್ರಾಕೃತಿಕ ಸಂಪತ್ತಿನ ಅತಿಯಾದ ದುರ್ಬಳಕೆಯಿಂದ ನಿಸರ್ಗದಲ್ಲಿ ಅಸಮತೋಲನ ಉಂಟಾಗಿದ್ದು, ಇದು ಎಲ್ಲಾ ಜೀವಿಗಳಿಗಿಂತಲೂ ನಮ್ಮ ಅಸ್ತಿತ್ವಕ್ಕೆ ಹೆಚ್ಚಿನ ಧಕ್ಕೆಯುಂಟಾಗಿರುವುದರಿAದ ನಾವು ಪ್ರಕೃತಿಗೆ ಯಾವುದೇ ಧಕ್ಕೆಯನ್ನುಂಟು ಮಾಡದಿರಲು ಸಂಕಲ್ಪ ತೊಡಬೇಕಿದೆ ಎಂದರು.
ಪ್ರಕೃತಿಯ ಮೇಲೆ ಮನುಷ್ಯನ ಅತಿಯಾದ ಹಸ್ತಕ್ಷೇಪದಿಂದಾಗಿ ಈಗ ನಾವು ಪರಿಸರ ವ್ಯವಸ್ಥೆಯಲ್ಲಿ ಪ್ರಕೃತಿ ವಿಕೋಪದಂತಹ ಅನೇಕ ದುರಂತಗಳನ್ನು ಅನಿವಾರ್ಯವಾಗಿ ಎದುರಿಸುವಂತಹ ಪರಿಸ್ಥಿತಿ ಒದಗಿ ಬಂದಿದೆ ಎಂದು ವಿಷಾಧಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಪ್ರಕೃತಿಯ ಮೇಲೆ ಮಾನವ ನಡೆಸುತ್ತಿರುವ ದಬ್ಬಾಳಿಕೆಯಿಂದ ನಾವು ಇಂದು ಅದರ ದುಷ್ಪರಿಣಾಮವನ್ನು ಎದುರಿಸುತ್ತಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಮಾತನಾಡಿ, ಸ್ವಚ್ಛ ಪರಿಸರ ವ್ಯವಸ್ಥೆ ಹಾಗೂ ಪರಿಸರ ಸಮತೋಲನಕ್ಕಾಗಿ ನಾವು ಪರಿಸರ ಸಂರಕ್ಷಣೆಯಲ್ಲಿ ತೊಡಗಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ನಿರ್ದೇಶಕರೂ ಆದ ಪರಿಸರ ಕಾರ್ಯಕ್ರಮದ ಸಂಯೋಜಕ ಟಿ.ಜಿ. ಪ್ರೇಮಕುಮಾರ್, ನಾವು ಉತ್ತಮ ಭವಿಷ್ಯಕ್ಕಾಗಿ ಇಂದು ಜೀವ ಪರಿಸರ ವ್ಯವಸ್ಥೆಯ ಪುನರ್ ಸ್ಥಾಪನೆಗಾಗಿ ಪ್ರಯತ್ನಪಡಬೇಕಿದೆ ಎಂದರು.
ಬಳಗದ ಉಪಾಧ್ಯಕ್ಷೆ ರೇವತಿ ರಮೇಶ್, ನಿರ್ದೇಶಕ ಉಮೇಶ್ ಹೆಬ್ಬಾಲೆ, ಗಾಯಕರಾದ ಕೆ.ಎಂ.ಶ್ವೇತ, ಎನ್.ಕೆ. ಮಾಲಾದೇವಿ ಪರಿಸರ ಗೀತೆ ಹಾಡಿದರು.
ಬಳಗದ ಉಪಾಧ್ಯಕ್ಷರಾದ ರೇವತಿ ರಮೇಶ್, ಎಂ.ಇ. ಮೊಹಿದ್ದೀನ್, ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತಾ , ನಿರ್ದೇಶಕರಾದ ಎಸ್.ಐ. ಮುನೀರ್ ಅಹ್ಮದ್, ಕೆ.ಟಿ. ಬೇಬಿ ಮಾಥ್ಯೂ, ಲೋಕನಾಥ್ ಅಮೆಚೂರ್, ಕೊಡಗು ಜಿಲ್ಲಾ ಜಾನಪದ ಕಲಾ ಪರಿಷತ್ತಿನ ಅಧ್ಯಕ್ಷ ಬಿ.ಜಿ. ಅನಂತಶಯನ, ನಿರ್ದೇಶಕ ಎಚ್.ಎಸ್. ಸಂಪತ್ಕುಮಾರ್, ರಾಜ್ಯ ವಿಜ್ಞಾನ ಪರಿಷತ್ತಿನ ಕೇಂದ್ರ ಸಮಿತಿಯ ಗೌರವ ಕಾರ್ಯದರ್ಶಿ ಸಿ. ಕೃಷ್ಣೇಗೌಡ, ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಎನ್. ವೆಂಕಟನಾಯಕ್, ಕೂರ್ಗ್ ಚಾನಲ್ನ ಮುಖ್ಯಸ್ಥ ಶ್ರೀಧರ್ ನೆಲ್ಲಿತ್ತಾಯ, ಪ್ರಾಧ್ಯಾಪಕ ಡಾ. ಶ್ರೀಧರ ಹೆಗಡೆ, ಪ್ರಾಂಶುಪಾಲ ಡಾ. ಜೆ. ಸೋಮಣ್ಣ, ನಿವೃತ್ತ ಮುಖ್ಯೋಪಾಧ್ಯಾಯ ಬಿ.ಆರ್. ಜೋಯಪ್ಪ, ಉಪನ್ಯಾಸಕರಾದ ಸಿದ್ದರಾಜು, ಗೀತಾಭಾವೆ, ಹರೀಶ್ ಕಿಗ್ಗಾಲು,ಮುಖ್ಯ ಶಿಕ್ಷಕ ಕೆ.ಎ. ಜಾನ್ಸನ್, ಕಾಜೂರು ಸತೀಶ್, ಸುಜಲಾದೇವಿ, ಡಿ.ಡಿ. ಪೆಮ್ಮಯ್ಯ, ಕೆ.ಪಿ. ಚಂದ್ರಶೇಖರ್, ಟಿ.ಬಿ. ಮಂಜುನಾಥ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತಾ ಸ್ವಾಗತಿಸಿದರು, ನಿರ್ದೇಶಕ ಎಸ್.ಐ. ಮುನೀರ್ ಅಹ್ಮದ್ ನಿರ್ವಹಿಸಿದರು. ನಿರ್ದೇಶಕ ಲೋಕನಾಥ್ ಅಮೆಚೂರ್ ವಂದಿಸಿದರು.