ಗೋಣಿಕೊಪ್ಪಲು, ಜೂ.೧೩: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಹುಲಿಯೊಂದು ಕಾಣಿಸಿಕೊಂಡ ಘಟನೆ ವರದಿಯಾಗಿದೆ.
ಪಟ್ಟಣದ ಸಮೀಪವಿರುವ ಕಾವೇರಿ ಹಿಲ್ಸ್ ಬಡಾವಣೆಯ ಅಮ್ಮಕೊಡವ ಸಮಾಜದ ಸಮೀಪದ ಕೀರೆಹೊಳೆಯ ಬದಿಯಲ್ಲಿ ಹುಲಿಯ ಸಂಚಾರವನ್ನು ಕೆಲ ನಾಗರಿಕರು ಕಂಡಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು,ಸ್ಥಳಿಯ ನಾಗರಿಕರ ಸಹಾಯದಿಂದ ಪರಿಶೀಲನೆ ನಡೆಸಿದರು.
ಆರನೇ ವಾರ್ಡ್ ನ ಸದಸ್ಯರಾದ ಹಕ್ಕೀಮ್ ಅವರು ಸಂಜೆಯ ವೇಳೆ ಕೋವಿಡ್ ಪಾಸಿಟಿವ್ ಪ್ರಕರಣವಿರುವ ಮನೆಗಳ ವಿವರ ಪಡೆಯಲು ತೆರಳಿದ ವೇಳೆ ಸಮೀಪದ ಕಾಫಿ ತೋಟದಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ಮಾಹಿತಿಯನ್ನು 'ಶಕ್ತಿ' ಯೊಂದಿಗೆ ಹಂಚಿಕೊAಡಿದ್ದಾರೆ.
ಹುಲಿಯ ಹೆಜ್ಜೆ ಗುರುತುಗಳು ಕಂಡು ಬಂದಿದ್ದು, ಕತ್ತಲೆ ಆವರಿಸಿದ ಕಾರಣ ಕಾರ್ಯಾಚರಣೆ ಸೋಮವಾರಕ್ಕೆ ಮುಂದೂಡಲಾಗಿದೆ. ದ.ಕೊಡಗಿನಲ್ಲಿ ಹುಲಿಯ ಹಾವಳಿ ಹೆಚ್ಚಾಗಿದ್ದು ಹಲವು ರೈತರ ಹಸುಗಳನ್ನು ದಿನಕ್ಕೊಂದರAತೆ ಕೊಲ್ಲುತ್ತಿವೆ. ಇದೀಗ ಹುಲಿಯು ಪಟ್ಟಣದತ್ತ ಮುಖ ಮಾಡಿದ್ದು ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ.
- ಹೆಚ್.ಕೆ.ಜಗದೀಶ್