ಸೋಮವಾರಪೇಟೆ,ಜೂ.೧೩: ತಾಲೂಕಿನ ಕುಂಬಾರಗಡಿಗೆ ಗ್ರಾಮದ ಮನೆಯೊಂದರಿAದ ಕಳವು ಮಾಡಿದ್ದ ಸುಮಾರು ೧.೪೦ ಲಕ್ಷ ಮೌಲ್ಯದ ಚಿನ್ನಾಭರಣ ಸಹಿತ, ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಂಬಾರಗಡಿಗೆ ಗ್ರಾಮದ ಸೋಮಯ್ಯ ಎಂಬವರ ಮನೆಯಿಂದ ಕಳೆದ ತಾ. ೧೦ರಂದು ೨೦ ಗ್ರಾಂ ತೂಕದ ಚಿನ್ನದ ಸರ, ೧೨ ಗ್ರಾಂ ತೂಕದ ಕಡಗ, ೮ ಗ್ರಾಂ ತೂಕದ ಓಲೆಯನ್ನು ಯಾರೋ ಕಳವು ಮಾಡಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸೋಮಯ್ಯ ಅವರ ಸಂಬAಧಿಕನೇ ಆಗಿರುವ ಕುಶಾಲನಗರದ ಮುಳ್ಳುಸೋಗೆ ನಿವಾಸಿ ಗಿರೀಶ್ ಎಂಬಾತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ ಸಂದರ್ಭ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ಕಳವು ಗೈದಿದ್ದ ಚಿನ್ನಾಭರಣ ಗಳನ್ನು ಆರೋಪಿ ಗಿರೀಶ್ ಅಡವಿಟ್ಟು ಹಣ ಪಡೆದಿದ್ದು, ಇದೀಗ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಶ್ರೀಧರ್, ಸಿಬ್ಬಂದಿಗಳಾದ ಪ್ರವೀಣ್, ರಮೇಶ್, ಶಿವಕುಮಾರ್, ಬಸಪ್ಪ, ನವೀನ್, ಜಗದೀಶ್ ಅವರುಗಳು ಭಾಗವಹಿಸಿದ್ದರು.