ಮಡಿಕೇರಿ, ಜೂ. ೧೩: ಸಾಹಿತ್ಯ ಅಕಾಡೆಮಿ ವತಿಯಿಂದ ತಾ.೧೬ ರಂದು ಲೇಖಕರ ಹಾಗೂ ಕವಿಗಳ ಸಭೆ ನಡೆಯಲಿದೆ. ಲೇಖಕರ ಸಭೆಯಲ್ಲಿ ಕೊಡಗಿನ ಸಾಹಿತಿ ಸ್ಮಿತಾ ಅಮೃತರಾಜ್ ಅವರು ಕನ್ನಡದಲ್ಲಿ ಉಪನ್ಯಾಸ ನೀಡಲಿದ್ದಾರೆ. ಈ ವರ್ಚುವಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರು ವಹಿಸಲಿದ್ದಾರೆ. ಅಂದು ಬೆಳಿಗ್ಗೆ ೧೧ ರಿಂದ ೧ ಗಂಟೆಯವರೆಗೆ ಲೇಖಕರ ಸಭೆ ನಡೆಯಲಿದೆ. ನಂತರ ಸಣ್ಣ ಕಥೆಗಳ ಪಠಣ, ಕವಿಗಳ ಸಭೆ ನಡೆಯಲಿದೆ. ಕಾರ್ಯಕ್ರಮವನ್ನು ಯೂಟ್ಯೂಬ್ ಲಿಂಕ್ “hಣಣಠಿs://ತಿತಿತಿ.ಥಿouಣube.ಛಿom/useಡಿ/sಚಿhiಣಥಿಚಿಚಿಞಚಿಜemi” ಮೂಲಕ ವೀಕ್ಷಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ “hಣಣಠಿ://ತಿತಿತಿ.sಚಿhiಣಥಿಚಿ-ಚಿಞಚಿಜemi.gov.iಟಿ” ಭೇಟಿ ನೀಡಬಹುದಾಗಿದೆ.