ಸಿದ್ದಾಪುರ, ಜೂ. ೧೨: ಹಾಡಿಯ ನಿವಾಸಿಗಳ ಮನೆ ಮನೆಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಶಾಸಕ ಕೆ.ಜಿ. ಬೋಪಯ್ಯ ಆದಿವಾಸಿ ಜನಾಂಗದವರ ಮನವೊಲಿಸುವ ಮೂಲಕ ಹಾಡಿಯ ನಿವಾಸಿಗಳನ್ನು ಲಸಿಕೆ ಕೇಂದ್ರಕ್ಕೆ ಕರೆತರುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ.

ದಿಡ್ಡಳ್ಳಿ ಭಾಗದ ಆದಿವಾಸಿಗಳಿಗೆ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆಗಳನ್ನು ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಹಾಡಿಯ ನಿವಾಸಿಗಳು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದರು ಎಂಬ ಮಾಹಿತಿ ತಿಳಿದ ಶಾಸಕರು, ಇಂದು ಬೆಳಿಗ್ಗೆ ದಿಡ್ಡಳ್ಳಿ ಹಾಡಿಗೆ ಭೇಟಿ ನೀಡಿದರು. ನಂತರ ಹಾಡಿಯ ಮನೆ ಮನೆಗಳಿಗೆ ಕಾಲ್ನಡಿಗೆಯಲ್ಲಿ ಅಧಿಕಾರಿಗಳನ್ನು ಕರೆದುಕೊಂಡು ತೆರಳಿದರು. ಹಾಡಿಯ ನಿವಾಸಿಗಳ ಬಳಿ ಲಸಿಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿದ ಶಾಸಕರು, ಯಾರೂ ಕೂಡ ಭಯಪಡುವ ಅಗತ್ಯವಿಲ್ಲವೆಂದು ಧೈರ್ಯವನ್ನು ತುಂಬಿದರು. ಶಾಸಕರ ಮಾತನ್ನು ಆಲಿಸಿದ ಹಾಡಿಯ ನಿವಾಸಿಗಳು ಲಸಿಕೆಯನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು.

ನಂತರ ದಿಡ್ಡಳ್ಳಿ ಬಸವನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಾಡಿಯ ನಿವಾಸಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕರು ಚಾಲನೆ ನೀಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಪ್ರಾರಂಭವಾದ ಕೊರೊನಾ ವೈರಸ್ ಅಷ್ಟೊಂದು ಮಟ್ಟದಲ್ಲಿ ಪ್ರಭಾವ ಬೀರಿರುವುದಿಲ್ಲ. ಆದರೆ ಇದೀಗ ಎರಡನೇ ಅಲೆಯಿಂದಾಗಿ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರವು ಕೊರೊನಾ ವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸೋಂಕು ಯಾರಿಗೂ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಈ ಬಾರಿ ಔಷಧಿಯನ್ನು

(ಮೊದಲ ಪುಟದಿಂದ) ಕಂಡುಹಿಡಿದಿರುತ್ತದೆ. ಈ ಚುಚ್ಚುಮದ್ದಿನ ಔಷಧಿಯಿಂದ ಕೊರೊನಾ ಸೋಂಕನ್ನು ತಡೆಗಟ್ಟಬಹುದೆಂದು ಮಾಹಿತಿ ನೀಡಿದರು.

ಲಸಿಕೆಯ ಬಗ್ಗೆ ಕೆಲವು ಅಪ ಪ್ರಚಾರಗಳನ್ನು ಮಾಡಲಾಗುತ್ತಿತ್ತು. ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದ ಅವರು, ತಪ್ಪು ಕಲ್ಪನೆಯಿಂದ ಅಪಪ್ರಚಾರವನ್ನು ಮಾಡುತ್ತಿರುವ ಬಗ್ಗೆ ಆದಿವಾಸಿಗಳು ಭಯಪಡುವ ಅಗತ್ಯವಿಲ್ಲವೆಂದರು. ಪರಿಶಿಷ್ಟ ಜಾತಿ, ಪಂಗಡಗಳು ವಾಸ ಮಾಡುತ್ತಿರುವ ಹಾಡಿಗಳಿಗೆ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡು ಲಸಿಕೆಯನ್ನು ನೀಡಲಾಗುತ್ತಿದೆ. ತಾಲೂಕು ಕೇಂದ್ರಗಳಿಗೆ ಹಾಡಿ ನಿವಾಸಿಗಳಿಗೆ ತೆರಳಲು ಸಮಸ್ಯೆಯಾಗಿರುವ ಹಿನ್ನೆಲೆ ಯಲ್ಲಿ ಆರೋಗ್ಯ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಹಾಡಿಗಳ ಸಮೀಪದಲ್ಲೇ ಲಸಿಕೆ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದರು.

ಪರಿಶಿಷ್ಟ ಜಾತಿ, ಪಂಗಡಗಳ ೧೮ ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆಗಳನ್ನು ಪಡೆದುಕೊಳ್ಳುವಂತೆ ಶಾಸಕರು ಸೂಚನೆ ಯನ್ನು ನೀಡಿದರು. ಯಾರಿಗಾದರೂ ಶೀತ, ಜ್ವರ ಕಂಡುಬAದಲ್ಲಿ ಅಥವಾ ಸೋಂಕಿನ ಲಕ್ಷಣಗಳು ಕಂಡುಬAದಲ್ಲಿ ಅಂತಹವರು ಸ್ಥಳೀಯ ವೈದ್ಯಾಧಿಕಾರಿ ಗಳಿಗೂ ಹಾಗೂ ಆಶಾಕಾರ್ಯಕರ್ತೆ ಯರಿಗೆ ಮಾಹಿತಿ ನೀಡಬೇಕು. ಯಾರು ಭಯಪಡುವ ಅಗತ್ಯವಿಲ್ಲವೆಂದರು.

ಸೋAಕು ಹರಡದಂತೆ ಎಚ್ಚರ ವಹಿಸಬೇಕು. ಅನಗತ್ಯವಾಗಿ ಓಡಾಡಬಾರದೆಂದರು. ಮಳೆಗಾಲದ ಸಂದರ್ಭದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಮೂಲಕ ಸರಕಾರದ ಮಾರ್ಗಸೂಚಿ ಪಾಲನೆ ಮಾಡಬೇಕು. ಕೈ ತೊಳೆಯಬೇಕು, ಮಾಸ್ಕ್ ಧರಿಸಬೇಕೆಂದು ಸಲಹೆ ನೀಡಿದರು.

ಮೂರನೇ ಅಲೆ ಜಿಲ್ಲೆಗೆ ಕಾಲಿಡದಂತೆ ಪ್ರತಿಯೊಬ್ಬರು ಕೋವಿಡ್ ನಿಯಮ ಪಾಲಿಸಿ ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಸಹಕರಿಸಬೇಕೆಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಸಿದ್ದಾಪುರದ ಅವರೆಗುಂದ ಹಾಡಿಯಲ್ಲಿ ಲಸಿಕೆ ನೀಡಲಾಗುವುದೆಂದರು.

ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಸಹಕಾರ ನೀಡಬೇಕೆಂದು ಕರೆ ನೀಡಿದರು. ಕೇಂದ್ರ ಸರಕಾರವು ೧೩೦ ಕೋಟಿ ಜನಸಂಖ್ಯೆಯ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಲಸಿಕೆಯನ್ನು ನೀಡಲು ಮುಂದಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಶಾಸಕ ಬೋಪಯ್ಯನವರು ತಮ್ಮ ವೀರಾಜಪೇಟೆ ಕ್ಷೇತ್ರದ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಕೊರೊನಾ ಸೋಂಕು ಹರಡದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ಹಾಡಿಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ ಲಸಿಕೆ ನೀಡಲು ವ್ಯವಸ್ಥಿತ ರೂಪದಲ್ಲಿ ಕಾರ್ಯಪ್ರವೃತ್ತರಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅರಣ್ಯ ವ್ಯಾಪ್ತಿಯಲ್ಲಿ ವಾಸ ಮಾಡಿಕೊಂಡು ಹಕ್ಕುಪತ್ರ ಹೊಂದಿರುವ ಕುಟುಂಬಗಳಿಗೆ ಈಗಾಗಲೇ ಆರ್‌ಟಿಸಿ ತಯಾರಾಗಿದ್ದು, ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ ಅವರು ತಯಾರಿ ಮಾಡಿರುತ್ತಾರೆಂದು ಮಾಹಿತಿ ನೀಡಿದರು. ಈಗಾಗಲೇ ಐಟಿಡಿಪಿ ಇಲಾಖೆಯಿಂದ ೬೫೦ ಮನೆಗಳು ಮಂಜೂರಾಗಿದ್ದು, ಅರಣ್ಯಕ್ಕೆ ತೊಡಕು ಆಗದ ರೀತಿಯಲ್ಲಿ ಅನುಷ್ಠಾನಗಳನ್ನು ಜಾರಿಗೊಳಿಸಲಾಗುವುದೆಂದು ರವಿ ಕುಶಾಲಪ್ಪ ತಿಳಿಸಿದರು.

ಆದಿವಾಸಿ ಹೋರಾಟಗಾರ ಹಾಗೂ ಗ್ರಾ.ಪಂ. ಸದಸ್ಯ ಜೆ.ಕೆ. ಅಪ್ಪಾಜಿ ಮಾತನಾಡಿ, ಆದಿವಾಸಿಗಳು ಮದ್ಯಸೇವನೆ ಮಾಡುತ್ತಿರುವವರು ಕೊರೊನಾ ಲಸಿಕೆಯನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆಯನ್ನು ಪಡೆದಲ್ಲಿ ತಮಗೆ ಮದ್ಯಸೇವಿಸಲು ಅಡಚಣೆ ಉಂಟಾಗುತ್ತದೆAದು ಭಾವಿಸಿ ಭಯದಿಂದ ಲಸಿಕೆ ಪಡೆಯಲು ಕೆಲವರು ಹಿಂಜರಿಯುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಡಾ. ಗೋಪಿನಾಥ್, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಅಪ್ಪಣ್ಣ, ಐಟಿಡಿಪಿ ಜಿಲ್ಲಾ ಇಲಾಖಾಧಿಕಾರಿ ಶಿವಕುಮಾರ್, ತಾಲೂಕು ಅಧಿಕಾರಿ ಗುರುಶಾಂತಪ್ಪ, ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಸಮೀರ್, ಚೆನ್ನಯ್ಯನಕೋಟೆ ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕಿ ಭಾನುಪ್ರಿಯ, ಗ್ರಾಮ ಲೆಕ್ಕಿಗರಾದ ಓಮಪ್ಪ ಬಣಾಕರ್, ಮುತ್ತಪ್ಪ ಗೌಡಜ, ಮಡಿಕೇರಿ ಮೂಡ ಅಧ್ಯಕ್ಷ ರಮೇಶ್ ಹೊಳ್ಳ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ ಹಾಗೂ ಮಾಲ್ದಾರೆ ಹಾಗೂ ಚೆನ್ನಯ್ಯನಕೋಟೆ ಗ್ರಾ.ಪಂ. ಸದಸ್ಯರುಗಳು, ಆರೋಗ್ಯ ಇಲಾಖೆಯ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

ಚಿತ್ರ, ವರದಿ: ವಾಸು ಎ.ಎನ್.