ವೀರಾಜಪೇಟೆ, ಜೂ. ೧೨: ಮಾನಸಿಕ ಅಸ್ವಸ್ಥನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬAಧಿಸಿದAತೆ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಡಿವೈಎಸ್‌ಪಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಯಿತು.

ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದ ಮುಖಂಡರು ಹೇಗೆ ಕಾನೂನು ಹೋರಾಟವನ್ನು ಮಾಡಬೇಕು ಎಂದು ಕೆ.ಪಿ.ಸಿ.ಸಿ ಕಾನೂನು ಘಟಕದ ಅಧ್ಯಕ್ಷÀ ಎ.ಎಸ್ ಪೊನ್ನಣ್ಣ ಬಳಿ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.

ಪೊಲೀಸರ ದೌರ್ಜನ್ಯದ ವಿರುದ್ಧ ದೂರು ನೀಡಲು ಕಾಂಗ್ರೆಸ್ ಮುಖಂಡರು, ಕ್ರೆöÊಸ್ತ ಸಮುದಾಯ ದವರು ವೀರಾಜಪೇಟೆ ನಗರ ಠಾಣೆಯ ಕಡೆ ತೆರಳುವಾಗ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಅಲ್ಲದೆ ಬ್ಯಾರಿಕೇಡ್ ಹಾಕಿ ದೂರು ಕೊಡಲು ಬಂದವರನ್ನು ಪೊಲೀಸರು ತಡೆಯುವ ಯತ್ನ ಮಾಡಿದರು. ಸರ್ಕಾರದ ಕೊರೊನಾ ಮಾರ್ಗಸೂಚಿ ಪ್ರಕಾರ ಐದು ಜನರು ಹೋಗಲು ಮಾತ್ರ ಅವಕಾಶವಿದೆ. ಎಲ್ಲರೂ ಠಾಣೆಯೊಳಗೆ ಹೋಗಲು ಅವಕಾಶವಿಲ್ಲ ಎಂದು ತಿಳಿಸಿದರು. ಇದಕ್ಕೆ ಕಾಂಗ್ರೆಸ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಾತಿನ ಚಕಮಕಿ ಕೂಡ ನಡೆಯಿತು. ರಸ್ತೆಯಲ್ಲಿ ಕುಳಿತು ಪೊಲೀಸರ ವಿರುದ್ಧ ಪ್ರತಿಭಟನಾ ನಿರತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಪರಿಸ್ಥಿತಿ ಬಗ್ಗೆ ವಿವರಿಸುವ ಸಂದರ್ಭ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಇದು ಸಾಧಾರಣ ವಿಚಾರವಾಗಿದ್ದರೆ ನಾವೂ ಬರುತ್ತಿರಲಿಲ್ಲ; ಇಲ್ಲಿ ಒಬ್ಬ ಅಮಾಯಕ ವ್ಯಕ್ತಿಯನ್ನು ಪೊಲೀಸರು ಕೊಲೆ ಮಾಡಿದ್ದಾರೆ. ಅದರ ಬಗ್ಗೆ ನಾವು ದೂರು ಕೊಡಲು ಬಂದಿದ್ದೇವೆ. ನೀವು ನಮ್ಮ ದೂರು ತೆಗೆದುಕೊಳ್ಳದಿದ್ದರೆ ನಾವೂ ಸ್ಥಳದಲ್ಲೇ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ. ಜಿಲ್ಲಾ ವರಿಷ್ಠಾಧಿಕಾರಿ

(ಮೊದಲ ಪುಟದಿಂದ) ಸ್ಥಳಕ್ಕೆ ಬರಲಿ ಎಂದು ಪಟ್ಟುಹಿಡಿದರು. ಇದರಿಂದಾಗಿ, ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ನಂತರ ಧರ್ಮಜ ಅವರು ಡಿವೈಎಸ್‌ಪಿಗೆ ಮನವಿ ಸಲ್ಲಿಸಿದರು.

ಧರ್ಮಜ ಉತ್ತಪ್ಪ ಮಾತನಾಡಿ, ಮಾನಸಿಕ ಅಸ್ವಸ್ಥನ ಸಾವು ಪೊಲೀಸರ ದೌರ್ಜನ್ಯದಿಂದ ನಡೆದಿದೆ. ಠಾಣೆಗೆ ರಾಯ್ ಡಿಸೋಜರನ್ನು ಕರೆತಂದು ಅವರ ಮೇಲೆ ಆರರಿಂದ ಏಳು ಪೊಲೀಸರು ಕೂಡಿಹಾಕಿ ಹೊಡೆದು, ಅವರ ಪಕ್ಕೆಲುಬುಗಳನ್ನು ಮುರಿದು, ಜೀವನ್ಮರಣ ಸ್ಥಿತಿಗೆ ತಲುಪಿದ ಮೇಲೆ, ಅವರ ತಾಯಿಯನ್ನು ಬಲವಂತವಾಗಿ ಮಧ್ಯರಾತ್ರಿ ಮೂರು ಘಂಟೆಗೆ ಪೊಲೀಸರೇ ಕರೆ ತಂದು ಬಳಿಕ ಅವರ ತಾಯಿಯೊಂದಿಗೆ ಕಳುಹಿಸಿದ್ದಾರೆ. ಅಲ್ಲದೆ ಪೊಲೀಸರಿಗೆ ಹೇಗೆ ಬೇಕೋ ಹಾಗೇ ಅವರ ತಾಯಿಯಿಂದ ಒತ್ತಾಯಪೂರ್ವಕವಾಗಿ ದೂರು ಬರೆಸಿಕೊಂಡಿರುತ್ತಾರೆ ಎಂದು ಆರೋಪಿಸಿದರು.

ತಪ್ಪಿತಸ್ಥರು ಯಾರೇ ಆಗಿರಲಿ ಅವರ ಮೇಲೆ ಐಪಿಸಿ ಸೆಕ್ಷನ್ ೩೦೨ ರಡಿಯಲ್ಲಿ ಕೊಲೆ ಮೊಕದ್ದಮೆ ದಾಖಲಿಸಬೇಕು, ಅವರನ್ನು ಶೀಘ್ರವಾಗಿ ಈ ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂತ ಅನ್ನಮ್ಮ ದೇವಾಲಯದ ಕಾರ್ಯದರ್ಶಿ ಬೆನಡಿಕ್ಟ್ ಸಾಲ್ಡಾನ ಮಾತನಾಡಿ, ಕ್ರೆöÊಸ್ತ ಸಮುದಾಯ ಪೊಲೀಸರಿಗೆ ಕಾನೂನು ಪಾಲನೆಯ ವಿಚಾರದಲ್ಲಿ ಸಹಕಾರವನ್ನು ನೀಡುತ್ತ ಬಂದಿದೆ. ಆದರೆ, ಮಾನಸಿಕ ಅಸ್ವಸ್ಥನೊಂದಿಗೆ ಯಾವ ರೀತಿ ವರ್ತಿಸಬೇಕೆಂಬುದು ತಿಳಿಯದಿರುವುದು ವಿಪರ್ಯಾಸ. ಈ ಘಟನೆಯಿಂದ ಇಡೀ ಪೊಲೀಸ್ ವ್ಯವಸ್ಥೆ ತಲೆತಗ್ಗಿಸುವಂತೆ ಆಗಿದೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಡಿವೈಎಸ್ಪಿ ಜಯಕುಮಾರ್ ಅವರು, ಇದನ್ನು ಸಂಬAಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ತಪ್ಪು ಮಾಡಿದವರು ಯಾರೇ ಇರಲಿ ಅವರ ರಕ್ಷಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ಈ ಸಂದರ್ಭ, ಕೆಪಿಸಿಸಿ ಸಂಯೋಜಕ ಆರ್.ಕೆ ಸಲಾಂ, ಜಿಲ್ಲಾ ಕಾಂಗ್ರೆಸ್ ವಕ್ತಾರÀ ಟಾಟೂ ಮೊಣ್ಣಪ್ಪ, ಜಿ.ಪಂ ಮಾಜಿ ಸದಸ್ಯ ಬಾನಂಗಡ ಪ್ರಥ್ವು, ಅಲ್ಪಸಂಖ್ಯಾತ ಘಟಕದ ಬಾಪೂ, ವೀರಾಜಪೇಟೆ ಕಾಂಗ್ರೆಸ್ ನಗರ ಅಧ್ಯಕ್ಷ ಜಿ.ಜಿ ಮೋಹನ್, ನಗರ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮರ್ ಫಾರೂಕ್, ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷ ರಫೀಕ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಧ್ರುವ ಕುಮಾರ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ಚೆಂಗಪ್ಪ, ಪ.ಪಂ ಸದಸ್ಯರುಗಳಾದ ಮೊಹಮ್ಮದ್ ರಫಿ, ಪೃಥ್ವಿನಾಥ್, ಡಿ.ಪಿ ರಾಜೇಶ್, ಅಗಸ್ಟಿನ್ ಬೆನ್ನಿ ಸೇರಿದಂತೆ ಇನ್ನಿತರರು ಇದ್ದರು.

- ವರದಿ : ಉಷಾ ಪ್ರೀತಂ