ಮಡಿಕೇರಿ, ಜೂ. ೧೨: ಜೂನ್ ಮೊದಲ ವಾರದಲ್ಲಿಯೇ ಜಿಲ್ಲೆಗೆ ಮುಂಗಾರು ಪ್ರವೇಶ ಮಾಡಿತ್ತಾದರೂ ಇದುವರೆಗೆ ರಭಸ ತೋರಿಲ್ಲ. ಒಂದೆರಡು ಬಾರಿ ಅಲ್ಲಲ್ಲಿ ಸಾಧಾರಣ ಮಳೆಯಾಗಿತ್ತು. ಇದೀಗ ಜಿಲ್ಲೆ ಯಾದ್ಯಂತ ದಟ್ಟವಾದ ಮೋಡ ಕವಿದ ವಾತಾವರಣದೊಂದಿಗೆ ಮಳೆಯಾಗು ತ್ತಿದ್ದು, ಮಳೆಗಾಲದ ಸನ್ನಿವೇಶ ಸೃಷ್ಟಿಯಾಗಿದೆ.

ಅತಿ ಹೆಚ್ಚು ಮಳೆ ಬೀಳುವ ಭಾಗಮಂಡಲ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಕಾವೇರಿ ನದಿತೀರದ ಪ್ರದೇಶದಲ್ಲಿ ಮಳೆಯಾಗುತ್ತಿರುವದರಿಂದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟದಲ್ಲಿ ಕೊಂಚ ಏರಿಕೆಯಾಗಿದೆ.

ಹವಾಮಾನ ಇಲಾಖೆಯ ಸೂಚನೆಯಂತೆ ಜಿಲ್ಲೆಯಲ್ಲಿ ತಾ. ೧೨ ಹಾಗೂ ೧೩ ರಂದು ಭಾರೀ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅದರಂತೆ ಇಂದು ಬೆಳಿಗ್ಗೆಯಿಂದಲೇ ಮೋಡ ಕವಿದಿದ್ದು, ನಿರಂತರವಾಗಿ ಸಾಧಾರಣ ಮಳೆಯಾಗಿದೆ.

(ಮೊದಲ ಪುಟದಿಂದ) ಕತ್ತಲು ಕವಿದ ವಾತಾವರಣ ಇರುವದರಿಂದ ಚಳಿ ಕೂಡ ಹೆಚ್ಚಾಗಿದೆ. ತಾ.೧೩ರಂದು ಕೂಡ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿರುವದರಿಂದ ಮಳೆ ಮುಂದುವರಿಯುವ ಚಿತ್ರಣ ಕಂಡುಬರುತ್ತಿದೆ.

ಸೋಮವಾರಪೇಟೆಯಲ್ಲಿ ಬಿರುಸುಗೊಂಡ ಮಳೆ

ನಿನ್ನೆ ಸಂಜೆಯಿAದಲೂ ಮೋಡ ಕವಿದ ವಾತಾವರಣದ ನಡುವೆ ತುಂತುರು ಮಳೆಯಾಗುತ್ತಿದ್ದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಇಂದು ಅಸಲಿ ಮಳೆಗಾಲದ ವಾತಾವರಣ ಕಂಡುಬAದಿದ್ದು, ಬೆಳಗ್ಗಿನಿಂದಲೂ ಮಳೆ ಸುರಿಯಿತು.

ಮೋಡ ಕವಿದ ವಾತಾವರಣದ ನಡುವೆ ಕುಳಿರ್ಗಾಳಿ ಸಹಿತ ಮಳೆಯಾಗುತ್ತಿದ್ದು, ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಮಳೆಗಾಲ ಪ್ರಾರಂಭದ ಅನುಭವ ನೀಡಿತು. ಕೆಲವೊಮ್ಮೆ ಭಾರೀ ಗಾಳಿ ಸಹಿತ ಮಳೆ ಸುರಿಯಿತು. ವಾತಾವರಣ ಶೀತಮಯವಾಗಿದ್ದು, ಗದ್ದೆಯ ಕೃಷಿ ಕಾರ್ಯಗಳ ಆರಂಭಕ್ಕೆ ಮುನ್ನುಡಿಯಾಯಿತು.

ನಿನ್ನೆ ರಾತ್ರಿಯಿಂದ ಚುರುಕು ಗೊಂಡ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ರಸ್ತೆಗಳ ಗುಂಡಿಗಳಲ್ಲಿ ನೀರು ಶೇಖರಣೆಗೊಂಡಿದೆ. ಚರಂಡಿಗಳಲ್ಲಿ ಸಂಗ್ರಹಗೊAಡಿದ್ದ ತ್ಯಾಜ್ಯಗಳು ಹೊಳೆ, ತೋಡುಗಳಿಗೆ ಹರಿದ ಪರಿಣಾಮ ತೋಡಿನ ನೀರು ಕಲುಷಿತಗೊಂಡು ಹರಿಯುವಂತಾಯಿತು.

ಮಳೆಯೊAದಿಗೆ ಗಾಳಿಯೂ ಬೀಸುತ್ತಿರುವ ಹಿನ್ನೆಲೆ ತೋಟದ ಕೆಲಸಗಳಿಗೆ ಹಿನ್ನಡೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಹುತೇಕ ಕಾರ್ಮಿಕರು ಮಧ್ಯಾಹ್ನದ ವೇಳೆಗೆ ಕೆಲಸ ಸ್ಥಗಿತಗೊಳಿಸಿ ಮನೆಗೆ ತೆರಳಿದರು.

ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಗದ್ದೆ ಕೆಲಸಗಳು ಚುರುಕುಗೊಂಡಿದ್ದು, ಉಳುಮೆ ಕಾರ್ಯಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ತೋಳೂರುಶೆಟ್ಟಳ್ಳಿ ವ್ಯಾಪ್ತಿಯಲ್ಲಿ ಗದ್ದೆಗಳ ಉಳುಮೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಭತ್ತ ಕೃಷಿಕರಿಗೆ ಪ್ರಸ್ತುತದ ಮಳೆ ಸಂತಸ ತಂದಿದೆ.

ಕೂಡಿಗೆ: ಕೂಡಿಗೆ ವ್ಯಾಪ್ತಿಯಲ್ಲೂ ಸಾಧಾರಣ ಮಳೆಯಾಗುತ್ತಿದೆ. ಕಳೆದ ಹತ್ತು ದಿನಗಳ ಹಿಂದೆ ಮುಸುಕಿನ ಜೋಳ ಬಿತ್ತನೆ ಮಾಡಿ ಮೋಡದತ್ತ ಮುಖ ಮಾಡಿದ್ದ ಈ ವ್ಯಾಪ್ತಿಯ ರೈತರಿಗೆ ಮಳೆಯಾಗುತ್ತಿರುವದು ಸಂತಸ ಮೂಡಿಸಿದೆ. ಹೆಬ್ಬಾಲೆ, ಅಳುವಾರ, ತೊರೆನೂರು, ಶಿರಂಗಾಲ, ಸೀಗೆಹೊಸೂರು, ಮದಲಾಪುರ ಭಾಗಗಳಲ್ಲಿ ತುಂತುರು ಮಳೆಯಾಗುತ್ತಿದೆ.

ಕುಶಾಲನಗರ: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗಿದೆ.

ಶ್ರೀಮಂಗಲ, ಶನಿವಾರಸಂತೆ, ನಾಪೋಕ್ಲು, ಗೋಣಿಕೊಪ್ಪಲು, ಸಿದ್ದಾಪುರ, ಸೋಮವಾರಪೇಟೆ ವಿಭಾಗಗಳಲ್ಲಿ ಬೆಳಿಗ್ಗೆಯಿಂದಲೇ ತುಂತುರು ಮಳೆಯಾಗುತ್ತಿದೆ.