'

ವೀರಾಜಪೇಟೆ, ಜೂ. ೧೨: ಮಾನಸಿಕ ಅಸ್ವಸ್ಥನ ಮೇಲೆ ಹಲ್ಲೆ ಮಾಡಿ ಅಮಾಯಕನ ಸಾವು ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರು ಮುಖ್ಯಪೇದೆ ಸೇರಿದಂತೆ ೮ ಮಂದಿ ಪೊಲೀಸರನ್ನು ಅಮಾನತ್ತುಗೊಳಿಸಲಾಗಿದೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ(ಐ.ಜಿ.ಪಿ) ಪ್ರವೀಣ್ ಮಧುಕರ್ ಪವಾರ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ನಗರ ಠಾಣೆಯ ಮುಖ್ಯಪೇದೆಗಳಾದ ಎಂ.ಯು. ಸುನಿಲ್, ಕೆ.ಜಿ. ನೆಹರು, ಪೇದೆಗಳಾದ ಎನ್.ಎಸ್. ಲೋಕೇಶ್, ಹೆಚ್.ಜೆ. ತನುಕುಮಾರ್, ಎನ್.ಹೆಚ್. ಸತೀಶ್, ಎಂ.ಎಲ್. ಸುನಿಲ್, ಎ. ರಮೇಶ್, ಬಿ.ಟಿ. ಪ್ರದೀಪ್ ಅಮಾನತ್ತುಗೊಂಡ ಸಿಬ್ಬಂದಿಗಳು.

ವೀರಾಜಪೇಟೆ ನಗರ ಠಾಣೆಗೆ ಭೇಟಿ ನೀಡಿದ ಐಜಿಪಿ, ವೀರಾಜಪೇಟೆ ಡಿವೈಎಸ್‌ಪಿ ಜಯಕುಮಾರ್ ನೀಡಿದ ಪ್ರಾಥಮಿಕ ತನಿಖಾ ವರದಿಯ ಅನುಸಾರ ಕ್ರಮಕೈಗೊಂಡಿದ್ದು, ೮ ಸಿಬ್ಬಂದಿ ಅಮಾನತ್ತು ಗೊಂಡಿದ್ದಾರೆ. ಘಟನೆ ಬಗ್ಗೆ ಮಾತನಾಡಿದ ಐ.ಜಿ.ಪಿ. ಅವರು, ಮಾರ್ಗಸೂಚಿ ಯಂತೆ ಸಾವನ್ನಪ್ಪಿದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತದೆ. ಇಡೀ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದ್ದು, ತಾ. ೧೨ ರಂದು (ಇಂದು) ತನಿಖಾ ತಂಡ ಜಿಲ್ಲೆಗೆ ಬರಲಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಡಿವೈಎಸ್ಪಿ ಜಯಕುಮಾರ್ ಸೇರಿದಂತೆ ಇನ್ನಿತರರು ಇದ್ದರು.

(ಮೊದಲ ಪುಟದಿಂದ) ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ರೆವರೆಂಡ್ ಫಾದರ್ ಮದಲೈಮುತ್ತು ಐಜಿಪಿ ಅವರನ್ನು ಭೇಟಿ ಮಾಡಿ ನಡೆದ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡುವಂತೆ ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಐಜಿಪಿ, ತನಿಖೆ ಸಂಬAಧ ಕ್ರಮಕೈಗೊಳ್ಳಲಾಗಿದೆ. ಪಾರದರ್ಶಕ ತನಿಖೆ ನಡೆಯುತ್ತದೆ ಎಂದರು. ದೇವಾಲಯ ಸಮಿತಿಯ ಕಾರ್ಯದರ್ಶಿ ಬೆನಡಿಕ್ಡ್ ಆರ್. ಸಾಲ್ಡಾನ, ಜಾನ್ಸನ್ ಇದ್ದರು.

-ಉಷಾ ಪ್ರೀತಂ