ಮಡಿಕೇರಿ, ಜೂ. ೧೨: ಪೊಲೀಸರಿಂದ ಹಲ್ಲೆಗೊಳಗಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ವ್ಯಕ್ತಿ ತಾ.೧೨ ರ ಬೆಳಿಗ್ಗೆ ೧೦ ಗಂಟೆಗೆ ಸಾವನ್ನಪ್ಪಿದ್ದು, ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕೆಂದು ಕುಟುಂಬಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ವೀರಾಜಪೇಟೆ ಚಿಕ್ಕಪೇಟೆಯ ನಿವಾಸಿ ರಾಯ್ ಡಿಸೋಜ (೫೦) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವ್ಯಕ್ತಿ.ಘಟನೆ ಹಿನ್ನೆಲೆ : ಮಾನಸಿಕ ಅಸ್ವಸ್ಥನಾಗಿದ್ದ ರಾಯ್ ಡಿಸೋಜ ತಾ. ೯ ರಂದು ಮಧ್ಯರಾತ್ರಿ ಮನೆಯಿಂದ ಕತ್ತಿ ಹಿಡಿದು ಓಡಿದ್ದಾರೆ ಎನ್ನಲಾಗಿದೆ. ಬಳಿಕ ಮಾರ್ಗಮಧ್ಯೆ ಪೊಲೀಸ್ ಪೇದೆಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದಾದ ನಂತರ ರಾಯ್ ಡಿಸೋಜರನ್ನು ಠಾಣೆಗೆ ಕರೆದೊಯ್ದು ಪೊಲೀಸರು ಥಳಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಅದೇ ಮಧ್ಯರಾತ್ರಿ ೩ ಗಂಟೆ ವೇಳೆಗೆ ಪೊಲೀಸರು ರಾಯ್ ಮನೆ ಬಳಿ ತೆರಳಿ ಅವರ ತಾಯಿಗೆ ವಿಚಾರ ತಿಳಿಸಿ, ಠಾಣೆಗೆ ಬಂದ ಅಮ್ಮನೊಂದಿಗೆ ಆತನನ್ನು ಕಳುಹಿಸಿ ದ್ದಾರೆ.

ಗಾಯಗೊಂಡಿದ್ದ ರಾಯ್‌ನನ್ನು ತಾ.೧೦ ರಂದು ಮಡಿಕೇರಿ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸ ಲಾಗಿತ್ತು. ವೆಂಟಿಲೇಟರ್ ಸಹಾಯದಲ್ಲಿ ಕೃತಕ ಉಸಿರಾಟ ದಲ್ಲಿದ್ದ ರಾಯ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಅಮ್ಮನ ಆಕ್ರಂದನಮಾನಸಿಕ ಅಸ್ವಸ್ಥ, ಮೂರ್ಚೆ ರೋಗದಿಂದ ಬಳಲುತ್ತಿದ್ದ ಮಗನನ್ನು ಕಳೆದುಕೊಂಡ ಅಮ್ಮ ಮಡಿಕೇರಿಯ ಆಸ್ಪತೆÀ್ರಗೆ ಆಗಮಿಸಿ ದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ತಪ್ಪು ಮಾಡಿದ್ದಾನೆ ಎಂದಾದರೆ ಕಾನೂನಿನಡಿ ಶಿಕ್ಷೆ ನೀಡಬೇಕಾಗಿತ್ತು. ಅದನ್ನು ಬಿಟ್ಟು ಹುಚ್ಚುನಾಯಿಗೆ ಹೊಡೆದಂತೆ ಥಳಿಸಿರುವುದು ಎಷ್ಟು ಸರಿ ಎಂದು ತಾಯಿ ಮ್ಯಾಟಿಲ್ಡ ಲೋಬೋ ಪ್ರಶ್ನಿಸಿದರು.

ಅಂದು ಮಗ ಮನೆಯಿಂದ ರಾತ್ರಿ ಓಡಿಹೋದ, ಅಕ್ಕಪಕ್ಕದವರ ಬಳಿ ವಿಚಾರಿಸಿದ್ದೆ, ಆತ ಎಲ್ಲಿದ್ದಾನೆ ಎಂದು ತಿಳಿದು ಬರಲಿಲ್ಲ. ನಂತರ ಸಂಬAಧಿಕರ ಮನೆಯಲ್ಲಿಯೂ ವಿಚಾರಿಸಿದೆ ಅಲ್ಲಿಯೂ ಹೋಗಿಲ್ಲ ಎಂದು ತಿಳಿದು ಬಂತು. ಮಧ್ಯರಾತ್ರಿ ೩ ಗಂಟೆ ಸಮಯದಲ್ಲಿ ಪೊಲೀಸ್ ಜೀಪ್ ಮನೆ ಬಳಿ ಬಂತು. ಪೊಲೀಸರು ಬಂದು ನಿಮ್ಮ ಮಗ ಪೊಲೀಸರಿಗೆ ಕತ್ತಿ ಬೀಸಿದ್ದಾನೆ ಎಂದು ಹೇಳಿ ಠಾಣೆಗೆ ಬರುವಂತೆ ಹೇಳಿದರು. ಪಕ್ಕದ ಮನೆಯವರ ಆಟೋದಲ್ಲಿ ತಾನು ಠಾಣೆಗೆ ಹೋದ ಸಂದರ್ಭ ಮಗನನ್ನು ಕಸದ ಮೂಟೆ ಎಸೆದಂತೆ ಹೊಡೆದು ಎಸೆದಿದ್ದರು. ನಂತರ ಆತನನ್ನು ಅಲ್ಲಿಂದ ಮನೆಗೆ ಕರೆ ತಂದೆ ಎಂದು ‘ಶಕ್ತಿ’ಯೊಂದಿಗೆ ಕಣ್ಣೀರಿಡುತ್ತಾ ಹೇಳಿಕೊಂಡರು.

ಮೈಯಲ್ಲಿ ಗಾಯವಾಗಿತ್ತು. ತೋರಿಸು ಅಂದರೆ ಮಗ ತೋರಿಸುತ್ತಿರಲಿಲ್ಲ.

(ಮೊದಲ ಪುಟದಿಂದ) ನಂತರ ವೀರಾಜಪೇಟೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಗಂಭೀರ ಸ್ಥಿತಿಯಲ್ಲಿರುವುದು ತಿಳಿದು ಬಂತು. ಆಸ್ಪತ್ರೆಯವರು ಮಡಿಕೇರಿಗೆ ಹೋಗುವಂತೆ ಹೇಳಿದರು. ನಂತರ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದೆ ಎಂದು ತಾಯಿ ಮ್ಯಾಟಿಲ್ಡ ಕಣ್ಣೀರಿಡುತ್ತ ಹೇಳಿಕೊಂಡರು. ಇದೀಗ ಮಗನನ್ನು ಕಳೆದುಕೊಂಡು ಅಮ್ಮ ಪರಿತಪಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ಪ್ರಕರಣ ಮುಚ್ಚಿ ಹಾಕುವ ಯತ್ನ

ಪ್ರಕರಣವನ್ನು ಮುಚ್ಚಿ ಹಾಕಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಪೊಲೀಸರು ಬಂದು ಮಂಗಳೂರಿನಲ್ಲಿ ಸುಸಜ್ಜಿತ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ. ಎಲ್ಲಾ ರೀತಿಯ ಖರ್ಚು ನಾವೇ ಭರಿಸುತ್ತೇವೆ ಎಂದು ಹೇಳಿದ್ದಾರೆ. ಅದಲ್ಲದೆ ಚಿಕಿತ್ಸೆಯಲ್ಲಿದ್ದ ರಾಯ್‌ನನ್ನು ನೋಡಲು ಅವಕಾಶ ನೀಡಿಲ್ಲ. ಆಸ್ಪತ್ರೆ ಆವರಣದಲ್ಲಿ ೧೫ ಪೊಲೀಸರು ಸುತ್ತುವರೆದು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದರು ಎಂದು ಮೃತ ವ್ಯಕ್ತಿಯ ಸಹೋದರ ರಾಬಿನ್ ಡಿಸೋಜ ದೂರಿದ್ದಾರೆ.

ಎಸ್‌ಪಿಗೆ ದೂರು

ಪ್ರಕರಣಕ್ಕೆ ಸಂಬAಧಿಸಿದAತೆ ಸೂಕ್ತ ತನಿಖೆಯಾಗಬೇಕು. ರಾಯ್ ಡಿಸೋಜ ಸಾವಿಗೆ ಆ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣಾಧಿಕಾರಿ ಹಾಗೂ ಪೊಲೀಸರು ಕಾರಣರಾಗಿದ್ದಾರೆ. ಇದನ್ನು ಕೊಲೆ ಪ್ರಕರಣ ಎಂದು ಪರಿಗಣಿಸಿ ಪ್ರಕರಣ ದಾಖಲಿಸಬೇಕು. ತಪ್ಪಿತಸ್ಥ ಪೊಲೀಸರ ಮೇಲೆ ಸೂಕ್ತ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್.ಪಿ ಕ್ಷಮಾಮಿಶ್ರ ಅವರಿಗೆ ಮೃತ ವ್ಯಕ್ತಿಯ ತಾಯಿ ಹಾಗೂ ಸಹೋದರ ದೂರು ಸಲ್ಲಿಸಿದ್ದಾರೆ.

ದೂರು ನೀಡಿದ ಸಂದರ್ಭ ಹಾಜರಿದ್ದ ಕ್ರೆöÊಸ್ತ ಸೇವಾ ಸಮಾಜದ ಅಧ್ಯಕ್ಷ ಬೇಬಿ ಮ್ಯಾಥ್ಯು ಮಾತನಾಡಿ, ಬೇರೆ ಕಡೆಯ ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಬೇಕು. ಪರೀಕ್ಷೆಯ ವೀಡಿಯೋ ಚಿತ್ರೀಕರಣ ಮಾಡಬೇಕು. ಸಿಐಡಿ ತನಿಖೆಯಾಗ ಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಎಂ. ಡಿಸಿಲ್ವ, ಉಪಾಧ್ಯಕ್ಷ ಜಾನ್ಸನ್ ಪಿಂಟೋ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಸ್ಮಾನ್, ಪ್ರಮುಖರಾದ ವಿನ್ಸೆಂಟ್, ಗಿಲ್ಬರ್ಟ್ ಲೋಬೋ, ಲಾರೆನ್ಸ್, ಸಬಾಸ್ಟಿನ್, ಜೋಕಿಂ ಸೇರಿದಂತೆ ಇನ್ನಿತರರು ಇದ್ದರು.

ಜೆಡಿಎಸ್ ಖಂಡನೆ

ಇದೊAದು ಅಮಾನವೀಯ ಕೃತ್ಯವಾಗಿದ್ದು,ಕೊಡಗು ಜಿಲ್ಲಾ ಜೆಡಿಎಸ್ ಇದನ್ನು ಖಂಡಿಸುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್ ತಿಳಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸಿದಂತೆ ಸಂಬAಧಿಸಿದವರು ಎಚ್ಚರ ವಹಿಸಬೇಕು. ಮೃತರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ವೀರಾಜಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಪಿ.ಕೆ. ಮಂಜುನಾಥ್ ಒತ್ತಾಯಿಸಿದ್ದಾರೆ.

ವೀರಾಜಪೇಟೆಯ ಮಾನಸಿಕ ಅಸ್ವಸ್ಥ ವ್ಯಕ್ತಿ ರಾಯ್ ಡಿಸೋಜ ಅವರ ತಾಯಿಗೆ ಸರ್ಕಾರ ಪರಿಹಾರ ಧನ ಘೋಷಿಸಬೇಕು ಎಂದು ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಆಗ್ರಹಿಸಿದ್ದಾರೆ.

ಎಸ್‌ಡಿಪಿಐ ಖಂಡನೆ

ಪ್ರಕರಣಕ್ಕೆ ಸಂಬAಧಿಸಿದAತೆ ಪ್ರತಿಕ್ರಿಯಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಎಂ.ಕೆ.ಮನ್ಸೂರ್ ಕೆಲವು ಪೊಲೀಸರ ಅಮಾನವೀಯ ಕೃತ್ಯದಿಂದಾಗಿ ಇಡೀ ಪೊಲೀಸ್ ವ್ಯವಸ್ಥೆ ತಲೆ ತಗ್ಗಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೃತರ ತಾಯಿಗೆ ಸೂಕ್ತ ಪರಿಹಾರ ನೀಡಬೇಕು, ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಮತ್ತು ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲಾ ಠಾಣೆಗಳಿಗೆ ನಿರ್ದೇಶನ ನೀಡಬೇಕೆಂದು ಮನ್ಸೂರ್ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಖಂಡನೆ

ರಾಯ್ ಡಿಸೋಜ ಅವರ ಸಾವಿನ ಪ್ರಕರಣವನ್ನು ಮಡಿಕೇರಿ ಬ್ಲಾಕ್ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಘಟಕ ತೀವ್ರವಾಗಿ ಖಂಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್ ಭಾಷಾ ಮೃತ ರಾಯ್ ಡಿಸೋಜ ಅವರ ತಾಯಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಪರಿಹಾರಕ್ಕೆ ಆಗ್ರಹ

ಈ ಪ್ರಕರಣದಿಂದ ಕೊಡಗು ಜಿಲ್ಲೆಯ ಜನ ತಲೆ ತಗ್ಗಿಸುವಂತಾಗಿದೆ. ಜಿಲ್ಲೆಯಲ್ಲಿ ಈ ರೀತಿ ಘಟನೆ ನಡೆದಿರುವುದು ಆಘಾತಕಾರಿ ವಿಚಾರ. ಸರಕಾರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಕಾಂಗ್ರೆಸ್ ವಕ್ತಾರರಾದ ಸರಿತಾ ಪೂಣಚ್ಚ ಆಗ್ರಹಿಸಿದ್ದಾರೆ.