ಮಡಿಕೇರಿ, ಜೂ. ೧೦: ಕೊಡವ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ತ್ರಿಭಾಷಾ ಸಾಹಿತಿಗಳೆಂದು ಪ್ರಸಿದ್ಧಿ ಪಡೆದಿದ್ದ ಡಾಕ್ಟರ್ ಐಚೆಟ್ಟಿರ ಮುತ್ತಣ್ಣ ಹಾಗೂ ಬಾಚಮಾಡ ಗಣಪತಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ತಾ. ೧೩ ರಂದು ಗೂಗಲ್ ಮೀಟ್ ವೆಬಿನಾರ್ನಲ್ಲಿ ನಡೆಯಲಿದೆ. ಕಳೆದ ವರ್ಷದಿಂದ ಸತತ ಆರು ತಿಂಗಳುಗಳ ಕಾಲ ಉಭಯ ಸಾಹಿತಿಗಳ ನೆನಪಿನಲ್ಲಿ ತಿಂಗಳಿಗೊAದು ಸಾಹಿತ್ಯಾತ್ಮಕ ಸ್ಪರ್ಧೆಯನ್ನು ಆಯೋಜಿಸಿ, ಕೊರೊನಾ ಕಾರಣದಿಂದ ಮುಂದೂಡಿದ್ದ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು, ಕೊರೊನಾ ನೀತಿ ಸಂಹಿತೆ ಹಿನ್ನೆಲೆ ವೆಬಿನಾರ್ನಲ್ಲಿ ನಡೆಸಲಾಗುವುದು ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.
ಅಂದು ಬೆಳಿಗ್ಗೆ ೧೧ ಗÀಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮವನ್ನು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಉದ್ಘಾಟಿಸಿದರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡವಾಮೆರ ಕೊಂಡಾಟ ಸಂಘಟನೆಯ ಸ್ಥಾಪಕ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು ವಹಿಸಲಿದ್ದಾರೆ. ಶತಮಾನೋತ್ಸವ ನೆನಪಿನಲ್ಲಿ ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಬರೆದಿರುವ ಮೂವ ರಂಗ್'ರ ಮುತ್ತಣ್ಣ ಹಾಗೂ ಗತ್ತ್ ಕೋಂದ ಗಣಪತಿ ಎಂಬ ಎರಡು ಕೃತಿಗಳನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಅವರು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಐಚೆಟ್ಟಿರ ಒಕ್ಕ ಅಧ್ಯಕ್ಷ ಐಚೆಟ್ಟಿರ ಮೋಹನ್ ದೇವಯ್ಯ, ಬಾಚಮಾಡ ಒಕ್ಕದ ಹಿರಿಯರಾದ ಬಾಚಮಾಡ ಸೋಮಯ್ಯ, ಸಾಹಿತಿ ಬಾಚಮಾಡ ಡಿ. ಸುಬ್ಬಯ್ಯ ಅವರ ಪುತ್ರ ಬಾಚಮಾಡ ವಸಂತ್, ಐಚೆಟ್ಟಿರ ಕಾರ್ಯದರ್ಶಿ ಐಚೆಟ್ಟಿರ ರಾಯ್ ತಿಮ್ಮಯ್ಯ ಅವರುಗಳು ಉಪಸ್ಥಿತ ರಿರುವರು. ಡಾಕ್ಟರ್ ಐ.ಮಾ. ಮುತ್ತಣ್ಣ ಬಾಳ್, ಬದುಕ್, ಸಾಹಿತ್ಯ ಎಂಬ ವಿಚಾರವಾಗಿ ಐಚೆಟ್ಟಿರ ಪುಷ್ಪ ಅಪ್ಪಚ್ಚು ಅವರು ವಿಚಾರ ಮಂಡಿಸಿದರೆ, ಬಿ.ಡಿ. ಗಣಪತಿ ಬಾಳ್, ಬದುಕ್, ಸಾಹಿತ್ಯ ಎಂಬ ವಿಚಾರವಾಗಿ ಬಾಚಮಾಡ ಭೀಮಯ್ಯ ಅವರು ವಿಚಾರ ಮಂಡಿಸಲಿರುವರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ಕೊಡವಾಭಿಮಾನಿ, ಸಾಹಿತಿಗಳು ಗೂಗಲ್ ಮೀಟ್ನ ಲಿಂಕ್ hಣಣಠಿs://meeಣ.googಟe.ಛಿom/qಜe-ತಿಣuಥಿ-ಟಿzಡಿ ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೊಡವಾಮೆರ ಕೊಂಡಾಟ ಸಂಘಟನೆ ಮತ್ತು ಐಚೆಟ್ಟಿರ ಹಾಗೂ ಬಾಚಮಾಡ ಒಕ್ಕ ಸದಸ್ಯರು ಮನವಿ ಮಾಡಿದ್ದಾರೆ.