ಅರಳುವ ಹೂಗಳೇ, ಕೆಲವು ವಿಚಾರಗಳನ್ನು ಗಮನಿಸುವಾಗ ಖೇಧವಾಗುತ್ತದೆ.. ರಿಲ್ಯಾಕ್ಸ್..

ಬೆಳಿಗ್ಗೆ ಎದ್ದು, ದಿನಚರಿಗಳನ್ನು ಮುಗಿಸಿ, ಶುಭ್ರವಾದ ಬಟ್ಟೆ ತೊಟ್ಟು, ಕೈಯಲ್ಲಿ ಪಾಟಿ ಚೀಲ ಹಿಡಿದು, ಅಪ್ಪ ಅಮ್ಮ bಥಿe ಹೇಳುತ್ತಾ ಪುಟ ಪುಟನೆ ಶಾಲಾ-ಕಾಲೇಜುಗಳ ಕಡೆ ಓಡುವ ಪುಟಾಣಿಗಳು, ಹದಿ ಹರೆಯದ ಮಕ್ಕಳನ್ನು ನೋಡುವುದೇ ಚೆಂದ.

ಆದರೀಗ ಪರಿಸ್ಥಿತಿ ಬದಲಾಗಿದೆ. ವಿದ್ಯೆ ಎಷ್ಟು ಅನಿವಾರ್ಯವೋ, ಪ್ರಾಣವೂ ಅಷ್ಟೇ ಮುಖ್ಯ ಅಲ್ವಾ? ಹಿಂದೆ ಹತ್ತಿಪ್ಪತ್ತು ಮಕ್ಕಳು, ಮನೆ ತುಂಬಾ ಜನ. ಆದರೂ ಯಾರು ಉಪವಾಸ ಮಲಗುತ್ತಿರಲ್ಲಿಲ್ಲ. ಸಮೃದ್ಧಿಯಾಗಿ ಜೀವಿಸಿರಲಿಲ್ಲವೆ? ಅವರೂ ಕೂಡ ಕಷ್ಟ - ಸುಖದ ದರ್ಶನ ಮಾಡಲಿಲ್ಲವೇ? ಶ್ರೇಷ್ಠವಾದ ಬದುಕಿನ ಬಗ್ಗೆ ಅವರಿಗೂ ಕನಸುಗಳಿರಲಿಲ್ಲವೇ? ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಸ್ವಭಾವ ಅವರಿಗೆ ಇತ್ತು ಅಲ್ಲವೇ?

ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಬಂದಿರುವುದು ಸುಳ್ಳಲ್ಲ.. ಅದು ಅನಿವಾರ್ಯ ಕೂಡ. ಕಾಲ ಬದಲಾದಂತೆ ಮನುಷ್ಯನ ಜ್ಞಾನದ ಮಟ್ಟವೂ ಬದಲಾಗುತ್ತಾ ಸಾಗಿ ಉತ್ತುಂಗಕ್ಕೇರಿ, ಅಂತರಿಕ್ಷವನ್ನೇ ಬಗೆದು ಬಂದು ದೇವರು ಎಲ್ಲಿದ್ದಾನೆ? ಎಂದು ಪ್ರಶ್ನಿಸುವ ಮಟ್ಟಕ್ಕೆ ಮನುಜನ ಜ್ಞಾನ ವೃದ್ಧಿಸಿದೆ. ಹಾಗಾಗಿ ಓಡುವ ಕುದುರೆಯೊಂದಿಗೆ ನಾವು ಓಡಿ ಮೊದಲಿಗರಾಗಿ ಗುರಿ ಮುಟ್ಟಬೇಕು ಎಂಬAತಹ ಧಾವಂತದಲ್ಲಿ ನಾವಿದ್ದೇವೆ.

ಶಿಕ್ಷಣದಿಂದ ವಂಚಿತವಾಗಿ ತನ್ನ ಬುದ್ಧಿಮಟ್ಟದ ಸಹಾಯದಿಂದ ಬದುಕುವಂತಹ ಅದೆಷ್ಟು ಕೋಟಿ ಜೀವಿಗಳು ನಮ್ಮ-ನಿಮ್ಮ ನಡುವೆ ಇದ್ದಾರಲ್ಲವೇ? ಶಿಕ್ಷಣವಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳದೆ ತಮ್ಮ ಭವಿಷ್ಯವನ್ನು ದಿಕ್ಕು ತಪ್ಪಿಸಿಕೊಂಡ ಅದೆಷ್ಟೋ ಉದಾಹರಣೆಗಳು ನಮ್ಮ ನಡುವೆ ಇದೆ. ಅವರೆಲ್ಲ ಮುಂದೆ ತಪ್ಪನ್ನು ಅರ್ಥೈಸಿಕೊಂಡು ಬದುಕುತ್ತಿಲ್ಲವೆ? ಶಿಕ್ಷಣವಿದ್ದು ಅದಕ್ಕೆ ತಕ್ಕ ಉದ್ಯೋಗವನ್ನು ಪಡೆಯದೆ ಇದ್ದುದರಲ್ಲೇ ಸಂತೃಪ್ತಿ ಪಡೆದಿರುವ ಜೀವಗಳು ನಮ್ಮ ನಡುವೆ ಅದೆಷ್ಟೋ ಇದ್ದಾವೆ. ಎಲ್ಲಾ ಅವಕಾಶಗಳಿದ್ದು ಶಿಕ್ಷಣವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯದೆ ಇರುವಂತಹ ಮಕ್ಕಳು ನಮ್ಮ ನಡುವೆ ಇದ್ದಾರಲ್ಲವೇ? ಮೂಲಭೂತ ಸೌಕರ್ಯಗಳಿಲ್ಲದಿದ್ದರು ಐಎಎಸ್, ಐಪಿಎಸ್, ವೈದ್ಯ, ಇಂಜಿನಿಯರ್ ಆಗಿರುವಂತಹ ಮಕ್ಕಳು ನಮ್ಮ ನಡುವೆ ಇಲ್ಲವೇ?

ಹಾಗಿರುವಾಗ ಶಿಕ್ಷಣವನ್ನು ಎಲ್ಲದಕ್ಕಿಂತಲೂ ಬೆಲೆ ಬಾಳುವಂತಹ ಹುಟ್ಟು-ಸಾವುಗಳ ನಡುವೆ ತಾಳೆ ಹಾಕುತ್ತಾ, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಷ್ಟು ಸರಿ?

ಇತ್ತೀಚೆಗೆ ಶಿಕ್ಷಣದಲ್ಲಿ ಸಾಧಿಸಲಾಗಿಲ್ಲ ಎಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು. ಈ ಹೆಣ್ಣು ಮಗಳು ಪ್ರಾಣ ಕಳೆದುಕೊಂಡಿದ್ದು ಹುಚ್ಚು ನಿರ್ಧಾರ ಅಲ್ವಾ? ಪ್ರಾಣ ಹಾಗೂ ಶಿಕ್ಷಣ ಎರಡು ಮುಖ್ಯ ಎಂಬುದನ್ನು ಪರಿಗಣಿಸಿ ಡೋಲಾಯಮಾನ ಸ್ಥಿತಿಯಲ್ಲಿ ಸರ್ಕಾರ ವ್ಯವಸ್ಥೆ, ಇರುವಾಗ ತಾವಾಗೇ ಪ್ರಾಣ ಹರಣ ಮಾಡಿಕೊಳ್ಳುವುದು ಎಷ್ಟು ಸರಿ?

ತಾಳ್ಮೆ ಎಲ್ಲಕ್ಕಿಂತ ದೊಡ್ಡ ಅಸ್ತç. ಇಂದು ಪಿಯುಸಿ ಪರೀಕ್ಷೆ ನಡೆದು ಆ ಮಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮುಂದೆ ಜೀವನದಲ್ಲಿ ದೊಡ್ಡ ಸ್ಥಾನಮಾನಕ್ಕೇರಿ ಶಿಕ್ಷಣದ ಸಾರ್ಥಕತೆಯನ್ನು ಪಡೆದರೂ ಕೂಡ ಶಿಕ್ಷಣವನ್ನು ಮೀರಿ ಜೀವನದಲ್ಲಿ ಅದೆಷ್ಟು ಸವಾಲುಗಳನ್ನು ಎದುರಿಸಬೇಕಿತ್ತು ಅಲ್ಲವೇ? ಆಗ ತಾಳ್ಮೆ ಅನಿವಾರ್ಯವಾಗುತ್ತಿರಲಿಲ್ಲವೆ?

ಆ ಮಗು ದುಡುಕಿ ನಿರ್ಧಾರ ತೆಗೆದುಕೊಂಡಿದೆ. ಅದೆಷ್ಟೋ ದಿವ್ಯಾಂಗ ಮಕ್ಕಳನ್ನು ಪೋಷಕರು ಕೂಲಿನಾಲಿ ಮಾಡಿ ಸಾಕುತ್ತಿಲ್ಲವೆ? ಮುಂದೆ ಈ ಮಗಳು ವಿವಾಹ ಆಗದಿದ್ದರೂ, ನೌಕರಿ ಪಡೆಯದಿದ್ದರೂ, ಅವರ ಪೋಷಕರು ಮಗುವನ್ನು ದೂರ ತಳ್ಳುತ್ತಿದ್ದರೆ? ಖಂಡಿತ ಇಲ್ಲ. ಹಾಗೆಂದು ಪೋಷಕರು ಮಕ್ಕಳನ್ನು ಸರಿದಾರಿಗೆ ತರುವಲ್ಲಿ ನುಣುಚಿಕೊಳ್ಳುವುದು ತರವಲ್ಲ.

ಮಕ್ಕಳೇ, ಓದಿ... ಓದಿ... ಜ್ಞಾನ ವೃದ್ಧಿಸಿಕೊಳ್ಳಿ. ಅದು ಪಠ್ಯ ಪುಸ್ತಕ ಇರಬಹುದು, ವೃತ್ತಪತ್ರಿಕೆ ಇರಬಹುದು ಕಥೆ-ಕಾದಂಬರಿಗಳು ಇರಬಹುದು, ಟಿವಿ ಮೊಬೈಲ್‌ಗಳನ್ನು ಹಿತಮಿತವಾಗಿ ಉಪಯೋಗಿಸಿಕೊಳ್ಳಿ. ತಾಳ್ಮೆಯನ್ನು ಬೆಳೆಸಿಕೊಳ್ಳಿ. ಗುರು ಹಿರಿಯರಿಗೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಿ. ಆಗ ಬದುಕಿನ ಬಗೆಗಿನ ಆಸಕ್ತಿ, ಆಲೋಚನೆಗಳು ಬಹಳ ಸರಳವಾದ ಮಾರ್ಗದಲ್ಲಿ ಸಾಗುತ್ತವೆ. ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಬದುಕಿನುದ್ದಕ್ಕೂ ಓದಬಹುದು, ಏನಾದರೂ ಸಾಧನೆ ಮಾಡಬಹುದು.

ಆದ್ದರಿಂದ ಜೀವವನ್ನು ಆರೋಗ್ಯವನ್ನು ಸನ್ನಡತೆಯನ್ನು ಕಾಪಾಡಿಕೊಳ್ಳಿ. ಜೀವ ಜೀವನ ಎರಡೂ ನಮ್ಮದು.. ಇದಕ್ಕೆ ನಾವೇ ಹೊಣೆ. ಸುರಕ್ಷಿತವಾಗಿರಿ. ನಗುನಗುತ್ತಾ ಬಂದದನ್ನು ಸ್ವೀಕರಿಸಿ.. ಶುಭವಾಗಲಿ.

- ಕೆ.ಎಂ. ಶ್ವೇತ, ಮಡಿಕೇರಿ