ಚೆಯ್ಯಂಡಾಣೆ, ಜೂ. ೧೦: ಭಾಗಮಂಡಲ ಆರೋಗ್ಯ ಕೇಂದ್ರದ ವತಿಯಿಂದ ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಣೆಯಲ್ಲಿ ಸ್ಥಳೀಯರಿಗಾಗಿ ಕೋವಿಡ್ ಪರೀಕ್ಷೆ ನಡೆಯಿತು. ಕೋವಿಡ್ ಪರೀಕ್ಷೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ, ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್, ಪಡಿಯಾನಿ ಮುಸ್ಲಿಂ ಜಮಾಅತ್ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಯಿಷಾ ಪಿ.ಎಸ್, ನಾಡ ಕಚೇರಿ ಸೋಮಣ್ಣ, ಲ್ಯಾಬ್ ಟೆಕ್ನಿಷಿಯನ್ ನಂದಿತಾ, ಎಎನ್ಎಂ ಶಾಂತಿ, ಆರೋಗ್ಯ ಸಿಬ್ಬಂದಿ ರೇವತಿ, ಆಶಾ ಕಾರ್ಯಕರ್ತೆಯರಾದ ಸಾರಮ್ಮ, ಫೌಸಿಯ, ಗ್ರಾಮ ಪಂಚಾಯಿತಿ ಸದಸ್ಯರಾದ ಚಕ್ಕೆರೆ ಇಸ್ಮಾಯಿಲ್, ಟಿ.ಕೆ. ಯೂಸೆಫ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.