ಎಂಟು ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಸೂಚನೆ

ಬೆಂಗಳೂರು, ಜೂ. ೧೦: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಕೋವಿಡ್ ಸೋಂಕು ತೀವ್ರವಾಗಿರುವ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿ ಸೋಂಕು ನಿಯಂತ್ರಣ ಕುರಿತಂತೆ ಚರ್ಚಿಸಿದರು. ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮೈಸೂರು, ಮಂಡ್ಯ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಮುಖ್ಯಮಂತ್ರಿ, ರಾಜ್ಯದ ಒಟ್ಟು ಪ್ರಕರಣಗಳಲ್ಲಿ ೬೫ ಸಾವಿರ ಸಕ್ರಿಯ ಪ್ರಕರಣಗಳು ಈ ಎಂಟು ಜಿಲ್ಲೆಗಳಲ್ಲಿವೆ. ಪಾಸಿಟಿವಿಟಿ ದರವನ್ನು ಶೇ. ೫ಕ್ಕಿಂತ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸೂಚಿಸಿದರು. ರಾಜ್ಯದಲ್ಲಿ ಕೋವಿಡ್ ೨ನೇ ಅಲೆ ತೀವ್ರಗೊಂಡ ಹಿನ್ನೆಲೆ ಸರ್ಕಾರ ಕೈಗೊಂಡಿರುವ ಕಠಿಣ ನಿರ್ಬಂಧಗಳಿAದಾಗಿ ಸೋಂಕಿನ ತೀವ್ರತೆ ಇಳಿಮುಖವಾಗುತ್ತಿದೆ. ಆದರೆ ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆಯಾಗುತ್ತಿಲ್ಲ. ಮೈಸೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-೧೯ ಸೋಂಕು ಹೆಚ್ಚಾಗಿರುವ ಕುರಿತು ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೂನ್ ಮೊದಲ ವಾರದಲ್ಲಿ ಅತಿ ಹೆಚ್ಚು ಅಂದರೆ, ಸರಾಸರಿ ಶೇ. ೨೫.೧೭ ಪಾಸಿಟಿವಿಟಿ ದರ ದಾಖಲಾಗಿದೆ. ಮೈಸೂರಿನಲ್ಲಿಯೂ ಶೇ. ೨೨ ರಷ್ಟಿದೆ. ಇದೇ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿ ಸೋಂಕಿತರಿಗೆ ಸರಾಸರಿ ಕೇವಲ ೬.೧ ಸಂಪರ್ಕಿತರನ್ನು ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕೋವಿಡ್ ೧೯ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವುದನ್ನು ಖಾತರಿ ಪಡಿಸಬೇಕು. ಜನರು ನಿರ್ಬಂಧಗಳನ್ನು ಉಲ್ಲಂಘಿಸದAತೆ ಕ್ರಮ ಕೈಗೊಳ್ಳಬೇಕು. ಮೈಕ್ರೋ ಕಂಟೇನ್‌ಮೆAಟ್ ವಲಯಗಳಲ್ಲಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಗೆ ಒತ್ತು ನೀಡಬೇಕು. ಕೋವಿಡ್ ಪ್ರಕರಣಗಳ ಪ್ರಮಾಣ ತೀವ್ರಗತಿಯಲ್ಲಿ ಇಳಿಕೆಯಾಗುವಂತೆ ಮಾಡಿ ಪಾಸಿಟಿವಿಟಿ ರೇಟ್ ಶೇ. ೫ರ ಒಳಗಿರುವಂತೆ ಖಾತರಿ ಪಡಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಲಸಿಕೆ ಪೋಲು: ಜಾರ್ಖಂಡ್‌ನಲ್ಲಿ ಅತಿ ಹೆಚ್ಚು

ನವದೆಹಲಿ, ಜೂ. ೧೦: ತಾ. ೨೧ ರಿಂದ ಹೊಸ ಲಸಿಕೆ ನೀತಿ ಜಾರಿಗೆ ಬರಲಿದ್ದು, ಇದಕ್ಕೂ ಮುನ್ನ ಮೇ ತಿಂಗಳಲ್ಲಿ ರಾಜ್ಯವಾರು ಲಸಿಕೆಗಳು ಪೋಲಾಗಿರುವ ಮಾಹಿತಿ ಲಭ್ಯವಾಗಿದೆ. ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಲಸಿಕೆ ಬಳಕೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಲಸಿಕೆ ಪೋಲು ಋಣಾತ್ಮಕ ಶ್ರೇಣಿಯಲ್ಲಿರುವುದು ಗಮನಾರ್ಹವಾಗಿದೆ. ೧.೧೦ ಲಕ್ಷ. ೧.೬೧ ಲಕ್ಷ ಡೋಸ್‌ಗಳನ್ನು ಅನುಕ್ರಮವಾಗಿ ಎರಡೂ ರಾಜ್ಯಗಳು ಪೋಲಾಗುವುದರಿಂದ ತಪ್ಪಿಸಿ ಉಳಿಸಿದ್ದರೆ, ಜಾರ್ಖಂಡ್ ರಾಜ್ಯ ಅತಿ ಹೆಚ್ಚು ಅಂದರೆ ಶೇ. ೩೩.೯೫ ರಷ್ಟು ಲಸಿಕೆಯನ್ನು ಪೋಲು ಮಾಡಿದೆ. ಕೇರಳ ಶೇ.-೬.೩೭ ರಷ್ಟು ಲಸಿಕೆಯನ್ನು ಪೋಲು ಮಾಡಿದ್ದರೆ, ಪಶ್ಚಿಮ ಬಂಗಾಳ ಶೇ.-೫.೪೮ ರಷ್ಟು ಲಸಿಕೆಯನ್ನು ಪೋಲು ಮಾಡಿದೆ. ಚತ್ತೀಸ್‌ಗಢ ಶೇ. ೧೫.೭೯ ರಷ್ಟು ಲಸಿಕೆ, ಮಧ್ಯಪ್ರದೇಶದಲ್ಲಿ ಶೇ. ೭.೩೫ ರಷ್ಟು ಲಸಿಕೆ ಪೋಲಾಗಿದ್ದರೆ, ಪಂಜಾಬ್, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟçಗಳಲ್ಲಿ ಅನುಕ್ರಮವಾಗಿ ಶೇ.೭.೦೮, ಶೇ.೩.೯೫, ಶೇ.೩.೯೧, ಶೇ.೩.೭೮, ಶೇ.೩.೬೩, ಶೇ. ೩.೫೯ ರಷ್ಟು ಲಸಿಕೆ ಪೋಲಾಗಿದೆ. ಅಂಕಿ-ಅAಶಗಳ ಪ್ರಕಾರ ಮೇ ತಿಂಗಳಲ್ಲಿ ೭೯೦ ಲಕ್ಷ ಲಸಿಕೆಗಳು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಸರಬರಾಜಾಗಿದ್ದು, ೬೫೮.೬ ಲಕ್ಷ ಡೋಸ್ ಗಳು ಬಳಕೆಯಾಗಿದ್ದರೆ ೨೧೨.೭ ಲಕ್ಷ ಲಸಿಕೆಗಳು ಉಳಿದಿದ್ದವು. ಏಪ್ರಿಲ್ ತಿಂಗಳಿಗೆ ಹೋಲಿಕೆ ಮಾಡಿದರೆ ಮೇ ತಿಂಗಳಲ್ಲಿ ಲಸಿಕೆ ಪಡೆದವರ ಸಂಖ್ಯೆ ಕಡಿಮೆಯಾಗಿದ್ದು, ೮೦.೮ ಲಕ್ಷ ಲಸಿಕೆ ಉಳಿದಿದೆ.

ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ಸಂದರ್ಶನ

ನವದೆಹಲಿ, ಜೂ. ೧೦: ಕೋವಿಡ್-೧೯ ಪ್ರಕರಣಗಳ ಹೆಚ್ಚಳದಿಂದ ಮುಂದೂಡಲಾಗಿದ್ದ ೨೦೨೦ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಸಂದರ್ಶನವನ್ನು ಆಗಸ್ಟ್ ೨ ರಿಂದ ಆರಂಭಿಸಲು ಕೇಂದ್ರ ನಾಗರಿಕ ಸೇವಾ ಆಯೋಗ ಯುಪಿಎಸ್‌ಸಿ ನಿರ್ಧರಿಸಿದೆ ಎಂದು ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ. ಭಾರತೀಯ ಆಡಳಿತ ಸೇವೆ (ಐಎಎಸ್) ಭಾರತೀಯ ವಿದೇಶಾಂಗ ಸೇವೆ (ಐಎಫ್ ಎಸ್) ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸೇರಿದಂತೆ ಮತ್ತಿತರ ಅಧಿಕಾರಿಗಳ ಆಯ್ಕೆಗಾಗಿ ವಾರ್ಷಿಕವಾಗಿ ಪೂರ್ವಭಾವಿ, ಮುಖ್ಯ ಹಾಗೂ ಸಂದರ್ಶನವನ್ನು ಯುಪಿಎಸ್‌ಸಿ ನಡೆಸುತ್ತಿದೆ.ಆದರೆ, ಕೊರೊನಾ ವೈರಸ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆ ಈ ವರ್ಷದ ಏಪ್ರಿಲ್‌ನಲ್ಲಿ ಸಂದರ್ಶವನ್ನು ಮುಂದೂಡಲಾಗಿತ್ತು. ಪರಿಸ್ಥಿತಿ ಪರಾಮರ್ಶೆ ನಡೆಸಿದ ಬಳಿಕ ಆಗಸ್ಟ್ ೨ ರಿಂದ ನಾಗರಿಕ ಸೇವಾ ಪರೀಕ್ಷೆಯ ಸಂದರ್ಶನವನ್ನು ಆರಂಭಿಸಲು ಆಯೋಗ ನಿರ್ಧರಿಸಿದೆ ಎಂದು ಯುಪಿಎಸ್‌ಸಿ ಮಾಹಿತಿ ನೀಡಿದೆ. ಸಂದರ್ಶನಕ್ಕಾಗಿ ಆಯ್ಕೆಯಾದ ಅಭ್ಯರ್ಥಿಗಳ ಇ-ಸಮನ್ ಪತ್ರಗಳು ಶೀಘ್ರದಲ್ಲೇ ದೊರೆಯಲಿವೆ. ಆಯೋಗದ ವೆಬ್‌ಸೈಟ್ ತಿತಿತಿ.uಠಿsಛಿ.gov.iಟಿ ಚಿಟಿಜ ತಿತಿತಿ.uಠಿsಛಿoಟಿಟiಟಿe.iಟಿ, iಣ sಚಿiಜ. ಡೌನ್‌ಲೋಡ್ ಮಾಡಿಕೊಳ್ಳ ಬಹುದಾಗಿದೆ. ಅಭ್ಯರ್ಥಿಗಳಿಗೆ ತಿಳಿಸಲಾದ ಸಂದರ್ಶನ ಪರೀಕ್ಷೆ ದಿನಾಂಕ ಮತ್ತು ಸಮಯದ ಬದಲಾವಣೆಗೆ ಯಾವುದೇ ಮನವಿಯನ್ನು ಸಮ್ಮತಿಸುವುದಿಲ್ಲ ಎಂದು ಆಯೋಗ ತಿಳಿಸಿದೆ.

ಸಿಂಹಗಳಿಗೆ ಡಿಸ್ಟೆಂಪರ್ ವೈರಸ್‌ನಿಂದ ಕೋವಿಡ್ ಪಾಸಿಟಿವ್

ಚೆನ್ನೆöÊ, ಜೂ. ೧೦: ಚೆನ್ನೆöÊನ ಪ್ರಸಿದ್ಧ ಅರಿಗ್ನಾರ್ ಪ್ರಾಣಿ ಸಂಗ್ರಹಾಲಯದಲ್ಲಿ (ವಂಡಲೂರು ಪ್ರಾಣಿ ಸಂಗ್ರಹಾಲಯ) ಅಳಿವಿನಂಚಿರುವ ಏಷ್ಯಾಟಿಕ್ ಸಿಂಹಗಳಿಗೆ ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದಾದ ಡಿಸ್ಟೆಂಪರ್ ವೈರಸ್‌ನಿಂದ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಏಳು ಮಾದರಿಗಳನ್ನು (ನಾಲ್ಕು ಹುಲಿ ಮತ್ತು ಮೂರು ಸಿಂಹಗಳು) ಉತ್ತರ ಪ್ರದೇಶದ ಬರೇಲಿಯ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿತ್ತು. ಈ ಪೈಕಿ ಒಂದು ಸಿಂಹಿಣಿಗೆ ಸಾರ್ಸ್ ಕೋವ್-೨ ಮತ್ತು ಡಿಸ್ಪೆಂಬರ್ ವೈರಸ್‌ನಿಂದ ಕೋವಿಡ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಮತ್ತೊಂದು ಸಿಂಹಿಣಿಯಲ್ಲಿ ಸಾರ್ಸ್ ಕೋವ್-೨ ಮತ್ತು ಒಂದು ಸಿಂಹದಲ್ಲಿ ಡಿಸ್ಟೆಂಪರ್ ವೈರಸ್‌ನಿಂದ ಪಾಸಿಟಿವ್ ಬಂದಿರುವುದಾಗಿ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕ ಕೆ.ಪಿ. ಸಿಂಗ್ ತಿಳಿಸಿದ್ದಾರೆ. ಆದರೆ, ನಾಲ್ಕು ಹುಲಿಗಳ ಮಾದರಿಗಳಲ್ಲಿ ಎರಡು ವೈರಸ್‌ಗಳ ನೆಗೆಟಿವ್ ವರದಿ ಬಂದಿದೆ. ಈವರೆಗೂ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಯಿAದ ಯಾವುದೇ ಮಾಹಿತಿ ಬಂದಿಲ್ಲ. ಹುಲಿಗಳಲ್ಲಿ ನೆಗೆಟಿವ್ ವರದಿ ಬಂದಿದೆ. ಆದರೆ, ಸಿಂಹಗಳ ಮಾದರಿ ವರದಿಯನ್ನು ಇನ್ನೂ ಕಾಯಲಾಗುತ್ತಿದೆ ಎಂದು ವಂದಲೂರು ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ತಿಳಿಸಿದ್ದಾರೆ.