ಸೋಮವಾರಪೇಟೆ, ಜೂ. ೧೦: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿ ಗ್ರಾಮಸ್ಥರು ಶ್ರಮದಾನದ ಮೂಲಕ ಗ್ರಾಮದ ರಸ್ತೆಯನ್ನು ದುರಸ್ತಿಪಡಿಸಿದರು.
ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮಧುಕುಮಾರ್, ಉಪಾಧ್ಯಕ್ಷ ರವಿ, ಪದಾಧಿಕಾರಿಗಳಾದ ಪ್ರಭಾತ್, ಪ್ರಸಿ, ನಾಗರಾಜ್, ಪ್ರತಾಪ್, ದಿನೇಶ್ ಮತ್ತಿತರರು ಶ್ರಮದಾನದಲ್ಲಿ ಭಾಗವಹಿಸಿದ್ದರು.