ಪೆರಾಜೆ, ಜೂ. ೧೦: ಪಿಕಪ್‌ಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಿಕಪ್‌ನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡು ಚಾಲಕ ಪೆರಾಜೆಯ ದಿನಕರ ಎಂಬವರು ಮೃತಪಟ್ಟ ಘಟನೆ ಸುಳ್ಯದ ಅಡ್ಕಾರಿನ ಮಾವಿನಕಟ್ಟೆಯಲ್ಲಿ ಸಂಭವಿಸಿದೆ.

ಪುತ್ತೂರು ಕಡೆಯಿಂದ ಬರುತ್ತಿದ್ದ ಕೃಷಿಕೂಲಿ ಕಾರ್ಮಿಕರಿದ್ದ ಪಿಕಪ್ ವಾಹನಕ್ಕೆ ಕಂಟೈನರ್ ಲಾರಿಯೊಂದು ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಪಿಕಪ್‌ನಲ್ಲಿದ್ದ ಐವರು ಗಾಯಗೊಂಡಿದ್ದರು. ಗಾಯಗೊಂಡ ಪೆರಾಜೆಯ ದಿನಕರ ಮತ್ತಿತರರನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ಸೇರಿಸಲಾಯಿತು, ಆದರೆ ದಿನಕರ್ (೩೨) ಕೊನೆಯುಸಿರೆಳೆದಿದ್ದಾರೆ. ದಿನಕರ್ ಪೆರಾಜೆ ಗ್ರಾಮದ ಪಾಲೆಗುಂಡಿ ನಿವಾಸಿಯಾಗಿದ್ದು, ಪುತ್ತೂರು ಕುಂಬ್ರದ ಬಳಿ ಇರುವ ಡಾ.ಲೀಲಾಧರ್ ಸಹೋದರರ ತೋಟದಲ್ಲಿ ಪಿಕಪ್ ಚಾಲಕರಾಗಿದ್ದರೆನ್ನಲಾಗಿದೆ.