ಕೂಡಿಗೆ, ಜೂ. ೧೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ತಾಲೂಕು ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಬೆಳೆಸಲಾದ ವಿವಿಧ ಬಗೆಯ ಹಣ್ಣಿನ ಗಿಡಗಳು ಮತ್ತು ಕಾಡು ಜಾತಿಯ ಮರಗಳ ಗಿಡಗಳನ್ನು ರೈತರಿಗೆ ವಿತರಣೆ ಮಾಡಲಾಯಿತು. ರೈತರ ಜಮೀನಿನ ದಾಖಲಾತಿ ಮತ್ತು ಅಧಾರ್ ಕಾರ್ಡ್ನ ಅನ್ವಯ ಸರಕಾರ ನಿಗದಿ ಮಾಡಿದ ದರದಲ್ಲಿ ರೈತರಿಗೆ ಮತ್ತು ಈ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಗಿಡಗಳನ್ನು ವಿತರಣೆ ಮಾಡಲಾಗಿದೆ. ಈ ಸಂದರ್ಭ ಹುದುಗೂರು ಸಾಮಾಜಿಕ ಅರಣ್ಯ ಉಪ ವಲಯ ಅಧಿಕಾರಿ ಫಿರೋಜ್ ಖಾನ್ ಮತ್ತು ರೈತರು ಭಾಗವಹಿಸಿದ್ದರು.