ವೀರಾಜಪೇಟೆ, ಜೂ. ೧೧: ಆರ್ಜಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಭಾಗದಲ್ಲಿ ೧೫ನೇ ಹಣಕಾಸು ಯೋಜನೆಯ ಅನುದಾನದಲ್ಲಿ ನೂತನವಾಗಿ ನಿರ್ಮಿಸಿದ ಕಾಂಕ್ರಿಟ್ ರಸ್ತೆಗಳನ್ನು ಗ್ರಾಮ ಪಂಚಾಯಿತಿ ಸದಸ್ಯರು ಉದ್ಘಾಟಿಸಿದರು.
ಆರ್ಜಿ ಪಂಚಾಯಿತಿ ಪೆರುಂಬಾಡಿ ವಾರ್ಡ್ ಸಂಖ್ಯೆ ೩ ರಲ್ಲಿ ರೂ. ೩.೫೦ ಲಕ್ಷÀ ವೆಚ್ಚದಲ್ಲಿ ಹಾಗೂ ವಾರ್ಡ್ ಸಂಖ್ಯೆ ೨ ರಲ್ಲಿ ಕಿರುಮಕ್ಕಿ ಗ್ರಾಮಕ್ಕೆ ಸಾಗುವ ರಸ್ತೆ ರೂ. ೧.೨೫ ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಗೊಂಡಿದೆ.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಹೆಚ್.ಜಿ. ಪಾರ್ವತಿ, ಉಪಾಧ್ಯಕ್ಷ ಎನ್.ಕೆ. ಉಪೇಂದ್ರ, ಸದಸ್ಯರಾದ ಅನೂಪ್ ಜೋಸೆಫ್, ಸುನೀತ ಹರಿದಾಸ್, ಕೆ.ಟಿ. ಬಷೀರ್, ಫಾತೀಮ, ಶಜೀರ್ ಅಲಿ, ಯ್ಯನ್ಜುವೀಟಾ, ಬೋಪಣ್ಣ, ಕವಿತಾ ಹಾಗೂ ಗ್ರಾಮಸ್ಥರು ಹಾಜರಿದ್ದರು.