೨ನೇ ಅಲೆ ಪ್ರಾರಂಭದಿAದಲೇ ಗ್ರಾಮ ಮಟ್ಟದಲ್ಲಿ ಟಾಸ್ಕ್ಫೋರ್ಸ್ ಸಮಿತಿ ರಚಿಸಿ ಕಾರ್ಯೋನ್ಮುಖರಾಗಿದ್ದರಿಂದ ವೀರಾಜಪೇಟೆ ವ್ಯಾಪ್ತಿಯಲ್ಲಿ ಕೊರೊನಾ ಹತೋಟಿಯಲ್ಲಿದೆ. ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ತಿಳಿದು ೩೮ ಗ್ರಾಮ ಪಂಚಾಯಿತಿಗಳಲ್ಲೂ ಟಾಸ್ಕ್ಫೋರ್ಸ್ ಸಮಿತಿ ರಚಿಸಿ ಸ್ಥಳೀಯ ನ್ಯೂನತೆಗಳನ್ನು ಸರಿಪಡಿಸಿದ್ದರಿಂದ ಪಾಸಿಟಿವಿಟಿ ದರ ಕಡಿಮೆಯಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಿಸಿದ್ದಾರೆ.
‘ಆದರೂ ಕೆಲವೊಂದು ಪಂಚಾಯಿತಿಗಳಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಕಾರ್ಯಗಳು ಆಗಿಲ್ಲ. ಕೋವಿಡ್ ಆದವರು ಹೋಂ ಐಸೋಲೇಷನ್ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ. ವಿಶೇಷವಾಗಿ ತೋಟ ಕಾರ್ಮಿಕರಿಗೆ ಐಸೋಲೇಷನ್ನಲ್ಲಿರಬೇಕಾದ ಸೌಲಭ್ಯಗಳು ಇರಲಿಲ್ಲ. ಕೋವಿಡ್ ಕೇರ್ ಸೆಂಟರ್ಗೂ ಸಹ ಅವರು ಬರಲಿಲ್ಲ. ಹೀಗಾಗಿ ಸೋಂಕು ಹೆಚ್ಚು ವ್ಯಾಪಿಸಿತು’
‘ಇದೀಗ ಪಾಸಿಟಿವ್ ಬಂದು ಐಸೋಲೇಷನ್ ವ್ಯವಸ್ಥೆ ಇಲ್ಲದ ಮಂದಿ ೧೦ ದಿನಗಳ ಕಾಲ ಕೋವಿಡ್ ಕೇರ್ ಸೆಂಟರ್ಗೆ ತೆರಳುವುದು ಕಡ್ಡಾಯ ಮಾಡಲಾಗಿದೆ. ಇದರಿಂದಾಗಿ ಸೋಂಕು ಹೆಚ್ಚಾಗಿ ಹರಡುತ್ತಿಲ್ಲ. ಜನರಿಗೆ ಕೊರೊನಾ ಮಾರಣಾಂತಿಕ ಕಾಯಿಲೆ ಎಂಬುದು ತಲೆಯಿಂದ ಹೋಗಬೇಕು. ಸರ್ಕಾರದ ಸೂಚನೆಗಳನ್ನು ಪಾಲಿಸಿ, ಆಗಾಗ್ಗೆ ಕೈ ತೊಳೆಯಿರಿ, ಮಾಸ್ಕ್ ಧರಿಸಿ, ಸಭೆ ಸಮಾರಂಭಗಳಿAದ ದೂರ ಉಳಿಯಿರಿ, ಸಾಮಾಜಿಕ ಅಂತರ ಪಾಲಿಸಿ. ಏನೇ ತೊಂದರೆ ಇದ್ದರೂ ಸಹಾಯವಾಣಿಗೆ ತಿಳಿಸಿ ಎಂದು ಜನರಿಗೆ ಹೇಳಿಕೊಂಡೇ ಬಂದಿದ್ದೇವೆ. ಇದನ್ನು ಗ್ರಾ.ಪಂ. ಸದಸ್ಯರು, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ನಾವುಗಳು ನೀಡುವ ನಿರ್ದೇಶನಗಳನ್ನು ಜಿಲ್ಲಾಡಳಿತ ಚಾಚೂ ತಪ್ಪದೇ ಪಾಲಿಸುತ್ತಿದೆ. ಹಾಗಾಗಿ ಕೊರೊನಾ ಕಡಿವಾಣಕ್ಕೆ ಬರುತ್ತಿದೆ’
‘೩ನೇ ಅಲೆ ಬಂದರೂ ಅದನ್ನು ತಡೆಗಟ್ಟಲು ಪಂಚಾಯಿತಿಗಳು ಸಿದ್ಧವಾಗಿವೆ. ಸೋಮವಾರದಿಂದ ತಾನು ಮತ್ತು ಸಂಸದರು ಹಾಟ್ಸ್ಪಾಟ್ ಗ್ರಾ.ಪಂ.ಗಳಿಗೆ ಭೇಟಿ ನೀಡುತ್ತೇವೆ. ವೀರಾಜಪೇಟೆಯಲ್ಲಿ ೭ ಹಾಗೂ ಮಡಿಕೇರಿಯಲ್ಲಿ ೩ ಗ್ರಾ.ಪಂ. ಭೇಟಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅಧಿಕಾರಿಗಳು ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತಿದ್ದಾರೆ. ಸಣ್ಣಪುಟ್ಟ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದೇವೆ. ಜೂನ್ ೨೧ ರಿಂದ ೧೮ ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬೇಕು.’
‘ನಿಮ್ಮ ಆರೋಗ್ಯವನ್ನೂ ನೋಡಿಕೊಳ್ಳಿ ಎಂದು ಪತ್ನಿ ಕಿವಿಮಾತು ಹೇಳುತ್ತಿರುತ್ತಾರೆ. ಪ್ರತಿದಿನ ಆರೈಕೆ ಮಾಡುತ್ತಾರೆ. ಕೊರೊನಾಕ್ಕೆ ಸಂಬAಧಿಸಿದ ವಿಚಾರಗಳನ್ನು ಮನೆಯಲ್ಲಿ ಚರ್ಚೆ ಮಾಡುವುದಿಲ್ಲ. ನಮ್ಮ ಓಡಾಟ ನೋಡಿ ಅವರೇ ಆರೋಗ್ಯ ನೋಡಿಕೊಳ್ಳಿ ಎಂದು ಸಲಹೆ ನೀಡುತ್ತಿರುತ್ತಾರೆ. ನಮ್ಮ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ಕೆ.ಜಿ. ಬೋಪಯ್ಯ ಅವರು ತಮ್ಮ ಪತ್ನಿಯ ಸಹಕಾರವನ್ನು ಸ್ಮರಿಸುತ್ತಾರೆ.